Advertisement
ಕರೆ ಮುಹೂರ್ತದ ಬಳಿಕ ಶ್ರಮದಾನ ನಡೆಸಿದ ಕಂಬಳಾಭಿಮಾನಿಗಳು ಕರೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ಕೊಂಡರು. ಈ ಸಂದರ್ಭ ಉಪ್ಪಿನಂಗಡಿ ವಿಜಯ-ವಿಕ್ರಮ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ನಂದಾವರ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ ಬೆಳ್ಳಿಪ್ಪಾಡಿ, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಉಪಾಧ್ಯಕ್ಷ ವಿಟuಲ ಶೆಟ್ಟಿ ಕುಲ್ಲೊಟ್ಟು, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ನ್ಯಾಯವಾದಿ ಅನಿಲ್ ಕುಮಾರ್ ದಡ್ಡು, ಸಿಎ ಬ್ಯಾಂಕ್ ನಿರ್ದೇಶಕ ರಾಮಚಂದ್ರ ಮಣಿಯಾಣಿ, ಜೇಸಿಐ ಅಧ್ಯಕ್ಷ ಕೇಶವ ರಂಗಾಜೆ, ಕಾರ್ಯದರ್ಶಿ ಶೇಖರ ಗೌಂಡತ್ತಿಗೆ, ಪ್ರಮುಖರಾದ ಸತೀಶ್ ಪಿಲಿಗೂಡು, ಆದರ್ಶ ಶೆಟ್ಟಿ ಕಜೆಕ್ಕಾರು, ಯೊಗೀಶ್ ಸಾಮಾನಿ ಸಂಪಿಗೆದಡಿ, ದಿಲೀಪ್ ಶೆಟ್ಟಿ ಕರಾಯ, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ವಿಶ್ವನಾಥ ಶೆಟ್ಟಿ ಕಂಗ್ವೆ, ಹರಿಶ್ಚಂದ್ರ ಆಚಾರ್ಯ, ಸದಾಶಿವ ಸಾಮಾನಿ, ಮೋಹನ್ ಪಕಳ ಕುಂಡಾಪು ಮತ್ತಿತರರು ಉಪಸ್ಥಿತರಿದ್ದರು.
ಮಾಧ್ಯಮದೊಂದಿಗೆ ಮಾತನಾಡಿದ ಕಂಬಳದ ಪರ ಕಾನೂನು ಹೋರಾಟಗಾರ, ಉಪ್ಪಿನಂಗಡಿ ವಿಜಯ- ವಿಕ್ರಮ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಪ್ರಾಣಿ ಹಿಂಸೆ ತಡೆ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ಇದಕ್ಕಿನ್ನು ರಾಷ್ಟ್ರಪತಿಯವರು ಅಂಗೀಕಾರ ನೀಡ ಬೇಕಾಗಿದೆ. ಆದ್ದರಿಂದ ನಾನು ಸೇರಿದಂತೆ ಕಂಬಳ ಸಮಿತಿಯ ನಿಯೋಗವೊಂದು ಮಂಗಳವಾರ ದಿಲ್ಲಿಗೆ ತೆರಳಲಿದ್ದು, ಸಂಸದರನ್ನು ಭೇಟಿಯಾಗಿ ಶೀಘ್ರ ಈ ಮಸೂದೆಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದೇವೆ. ಮಾ. 18ರ ಮೊದಲು ಈ ಮಸೂದೆಗೆ ರಾಷ್ಟ್ರಪತಿ ಯವರಿಂದ ಅಂಗೀಕಾರ ದೊರೆತರೆ, ಮಾ. 18ರಂದು ಉಪ್ಪಿನಂಗಡಿಯ ವಿಜಯ-ವಿಕ್ರಮ ಕಂಬಳ ನಡೆಯಲಿದೆ. ಇಲ್ಲದಿದ್ದರೆ ಇಲ್ಲ. ಮಾ. 18ರ ಬಳಿಕ ಅಂಗೀಕಾರ ದೊರೆತರೆ ಅದು ಕಂಬಳ ನಡೆಸುವ ಸಮಯ ವಾಗಿದ್ದರೆ, ಈ ವರ್ಷದ ಪ್ರಥಮ ಕಂಬಳವನ್ನು ಉಪ್ಪಿ ನಂಗಡಿಯಿಂದಲೇ ಆರಂಭಿಸಲು ತೀರ್ಮಾ ನಿಸಿದ್ದೇವೆ. ಅದಕ್ಕಾಗಿ ಈಗಾಗಲೇ ಕರೆ ಮುಹೂರ್ತ ನಡೆಸಿ, ಕರೆಯನ್ನು ಸಿದ್ಧಪಡಿಸಿ ಇಡಲಿದ್ದೇವೆ. ಕುದಿ ಓಡಿಸುವವರಿಗೂ ಅವಕಾಶ ಕಲ್ಪಿಸಿಕೊಡಲಿದ್ದೇವೆ. ಈ ಹಿಂದೆ ಹೇಳಿದಂತೆ ಮಾ. 18ರಂದು ವಿಜಯೋತ್ಸವ ಅಥವಾ ಪ್ರತಿಭಟನಾರ್ಥ ಕಂಬಳ ನಡೆಸುವ ತೀರ್ಮಾನವನ್ನು ಈ ಮಸೂದೆ ರಾಷ್ಟ್ರಪತಿಯವರ ಅಂಗಳದಲ್ಲಿರುವುದರಿಂದ ಕೈಬಿಡಲಾಗಿದೆ. ರಾಷ್ಟ್ರ ಪತಿಯವರು ಅಂಕಿತ ಹಾಕಲಿದ್ದಾರೆ ಎಂಬ ಭರವಸೆ ಇದೆ ಎಂದರು.
Related Articles
ಹಳೆಗೇಟುವಿನ ನೇತ್ರಾವತಿ ನದಿ ಕಿನಾರೆಯಲ್ಲಿರುವ ವಿಜಯ- ವಿಕ್ರಮ ಕಂಬಳ ಕರೆಯ ಬಳಿ ಫೆ. 26ರಂದು ಸ್ವತ್ಛತೆಗಾಗಿ ಶ್ರಮದಾನ ನಡೆಯಲಿದ್ದು, ಕಂಬಳಾಭಿಮಾ ನಿಗಳು, ಸಂಘಟನೆಗಳು ಹೀಗೆ ಪ್ರತಿಯೋರ್ವರು ಶ್ರಮದಾನ ದಲ್ಲಿ ಭಾಗವಹಿಸಿ, ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.
Advertisement