Advertisement

“ಹಕೂನ ಮಟಟ’ದಲ್ಲಿ ಚಿನ್ನಾರಿ ಮುತ್ತ : ಏನಿದು ಗೊತ್ತಾ ?

09:20 AM Sep 07, 2021 | Team Udayavani |

ಸಿನಿಮಾದ ಜೊತೆಗೆ ಈಗ ನಟರಿಗೆ ಬೇರೆ ಬೇರೆ ವೇದಿಕೆಗಳು ಸೃಷ್ಟಿಯಾಗುತ್ತಿವೆ. ಅದರಲಿ ವೆಬ್‌ ಸೀರಿಸ್‌ಕೂಡಾ ಒಂದು. ಈಗಾಗಲೇ ಒಂದಷ್ಟು ಮಂದಿ ಕಲಾವಿದರು ವೆಬ್‌ ಸೀರಿಸ್‌ನಲ್ಲಿ ನಟಿಸಿದ್ದಾರೆ.

Advertisement

ಈಗ ವಿಜಯ ರಾಘವೇಂದ್ರ ಸರದಿ. ಹೌದು, ನಟ ವಿಜಯ ರಾಘವೇಂದ್ರ ವೆಬ್‌ ಸೀರಿಸ್‌ವೊಂದರಲ್ಲಿ ನಟಿಸಿದ್ದಾರೆ. “ಹಕೂನ ಮಟಟ’ ಎಂಬ ಟೈಟಲ್‌ನಡಿ ತಯಾರಾಗುತ್ತಿರುವ ಈ ವೆಬ್‌ ಸೀರಿಸ್‌ನಲ್ಲಿ ವಿಜಯರಾಘವೇಂದ್ರ ಇನ್ವೆಸ್ಟಿಗೇಶನ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಚಿತ್ರೀಕರಣ ಪೂರ್ಣವಾಗಿದೆ. ಅಂದಹಾಗ, ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಜಾನರ್‌ನಕಥೆಯನ್ನು ಒಳಗೊಂಡಿದೆ. ಈ ವೆಬ್‌ ಸೀರಿಸ್‌ ಅನ್ನುಕಿಶೋರ್‌ ಮೂಡಬಿದ್ರೆ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ವಿಜಯ ರಾಘವೇಂದ್ರ ಅವರಿಗೆ “ಮಾಲ್ಗುಡಿ ಡೇಸ್‌’ ಸಿನಿಮಾ ನಿರ್ದೇಶಿಸಿರುವಕಿಶೋರ್‌ ಈ ಬಾರಿ ವೆಬ್‌ ಸೀರಿಸ್‌ನತ್ತ ಮುಖ ಮಾಡಿದ್ದಾರೆ.

“ಮಾಲ್ಗುಡಿ ಡೇಸ್‌’ ಚಿತ್ರ ನಿರ್ಮಿಸಿರುವ ರತ್ನಾಕರ್‌ ಕಾಮತ್‌ ಅವರೇ ಈ ವೆಬ್‌ ಸೀರಿಸ್‌ಗೂ ಬಂಡವಾಳ ಹೂಡಿದ್ದಾರೆ. ಉಳಿದಂತೆ ಅದೇ ಚಿತ್ರತಂಡ ಇಲ್ಲೂ ಮುಂದುವ ರೆದಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ನಿರತವಾಗಿರುವ ವೆಬ್‌ ಸೀರಿಸ್‌ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next