Advertisement
ಫೆ. 23 ರಂದು ಸಂಜೆ ಸಾಕಿನಾಕಾದ ಹೊಟೇಲ್ ಪೆನಿನ್ಸೂಲಾ ಗ್ರಾÂಂಡ್ ಹೊಟೇಲ್‌ನ ಕನ್‌ಕಾರ್x ಸಭಾಗೃಹದಲ್ಲಿ ನಡೆದ ವಿಜಯ ಕಾಲೇಜು ಮುಲ್ಕಿ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕದ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನನಗಿಂದು ಬಹಳಷ್ಟು ಸಂತೋಷವಾಗುತ್ತಿದೆ. ನಾನೋರ್ವ ವಿಜಯ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಲು. ನನ್ನಲ್ಲಿ ನಾಯಕತ್ವದ ಗುಣವನ್ನು ಪುಟಿದೇಳಿಸಿದ್ದು ಇದೇ ಶಿಕ್ಷಣ ಸಂಸ್ಥೆ ಬಡವರ ಕಷ್ಟಗಳನ್ನು ಹತ್ತಿರ ದಿಂದ ಬಲ್ಲವನಾಗಿರು ವುದರಿಂದ ಸಮಾಜ ಸೇವೆ ಯಲ್ಲಿ ಮತ್ತಷ್ಟು ಉತ್ಸುಕನಾಗಿದ್ದೇನೆ ಎಂದು ನುಡಿದರು.
Related Articles
Advertisement
ಗುರುವಂದನೆ ಸ್ವೀಕರಿಸಿ ಮಾತನಾಡಿದ ಡಾ| ಯು. ಕೆ. ಶ್ಯಾಮ ಭಟ್ ಅವರು, ಮಾಯನಗರಿಯಲ್ಲಿ ಕನ್ನಡದಲ್ಲಿ ಮಾತನಾಡಲು ಸಿಕ್ಕಿದ್ದೇ ನನ್ನ ಭಾಗ್ಯ. ಮಾನವ ಜೀವನ ಎನ್ನುವುದು ಬಹಳ ಶ್ರೇಷ್ಠವಾದುದು. ನಮಗೆಲ್ಲರಿಗೂ ಒಂದೇ ಜನ್ಮವಾಗಿದ್ದು, ಆ ಜನ್ಮದಲ್ಲಿ ಏನಾದರೂ ಸಾಧಿಸಿ ಸಂತೃಪ್ತ ಬದುಕನ್ನು ರೂಪಿಸಿಕೊಳ್ಳಬೇಕು. ನಮ್ಮ ಸೇವಾ ಫಲ ಕೊನೆಗಾದರೂ ಫಲಿಸುವುದು. ವಿದ್ಯೆ ಮತ್ತು ಸಮಾಜಕ್ಕೆ ನೀಡಿದ ಸೇವೆ ಎಂದಿಗೂ ವ್ಯರ್ಥವಾಗದು ಅನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಗುರುವೃಂದಕ್ಕೆ ಶಿಷ್ಯವರ್ಗದ ಗೌರವಾರ್ಪಣೆ ನಿಜವಾಗಿಯೂ ನಮ್ಮ ಮನಸ್ಸಿಗೆ ಸಮಾಧಾನ ತಂದಿದೆ. ವಿಜಯ ಕಾಲೇಜು ಮೂಲಕ ಒಳ್ಳೆಯ ಮಕ್ಕಳನ್ನು ನೀಡಿದ ಅಭಿಮಾನವೂ ನಮಗಿದೆ. ಗುರು ಶಿಷ್ಯರ ಸಂಬಂಧ ಹಾಲೆjàನಿನಂತೆ ಎನ್ನುತ್ತಾ ಗುರುಶಿಷ್ಯರ ಸಂಬಂಧ ಬಗ್ಗೆ ಸ್ವರಚಿತ ಕವನ ವಾಚಿಸಿದರು.
ಇನ್ನೋರ್ವ ಗುರುವಂದನೆ ಸ್ವೀಕರಿಸಿದ ವಿಶ್ರಾಂತ ಪ್ರಾಚಾರ್ಯ ಪ್ರೊ| ಡಾ| ರಘುರಾಮ್ ರಾವ್ ಅವರು ಮಾತನಾಡಿ, ವಿದ್ಯಾರ್ಥಿ-ಶಿಷ್ಯರ ಸಾಧನೆಗಳನ್ನು ಕಂಡು ಖುಷಿ ಪಡುವುದೆ ಗುರುವರ್ಯರ ಬಲುದೊಡ್ಡ ಗುರುವಂದನೆಯಾಗಿದೆ. ಸಹಾಯ ಮಾಡುವುದು, ಓರ್ವ ಮನುಷ್ಯನನ್ನು ಒಳ್ಳೆಯ ಪ್ರಜೆಯನ್ನಾಗಿಸುವುದು ಗುರುಗಳ ಕರ್ತವ್ಯ. ಈ ಹಳೆ ವಿದ್ಯಾರ್ಥಿಗಳ ಸಂಘಟನೆಯಿಂದ ಹಳೆಯ ನೆನಪುಗಳನ್ನು ಹೊಸದಾಗಿಸಿ ಹಂಚಿಕೊಳ್ಳಲು ಸಾಧ್ಯವಾಯಿತು. ಗುರುಗಳಿಗೆ ವಿದ್ಯಾರ್ಥಿಗಳು ಸದಾ ಚಿಗುರೆಲೆಗಳಂತೆ ಕಾಣುತ್ತಿರುವುದು ಪ್ರಕೃತಿಸಹಜವಾಗಿದೆ. ಇಂತಹ ಸಮ್ಮಾನ, ಗುರುವಂದನೆಯಿಂದ ಜೀವನ ಸಾರ್ಥಕವೆಣಿಸಿದಂತಾಗಿದೆ ಎಂದು ನುಡಿದರು.
ಸಂಘದ ಕಾರ್ಯಕಾರಿ ಸಮಿತಿಯ ಲಕ್ಷಿ¾àಶ್ ರಾವ್, ರತ್ನಾಕರ್ ಆರ್. ಸಾಲ್ಯಾನ್, ಸಲಹಾ ಸಮಿತಿಯ ಸದಸ್ಯರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗತ ಸಾಲಿನಲ್ಲಿ ಅಗಲಿದ ಗುರು-ಶಿಷ್ಯರು, ಸಹಪಾಠಿಗಳಿಗೆ ಆರಂಭದಲ್ಲೇ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶಿರ್ವಾ ನಿತ್ಯಾನಂದ ಹೆಗ್ಡೆ ಮತ್ತು ರತ್ನಾ ಉಮಾನಾಥ ಶೆಟ್ಟಿ ಅವರಿಂದ ಹಾಡುಗಾರಿಕೆ ನಡೆಯಿತು. ಅಮಿತಾ ಜತ್ತಿನ್ ಬಳಗದಿಂದ ನೃತ್ಯ ವೈವಿಧ್ಯ ನೆರವೇರಿತು. ಶಶಿಧರ್ ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ಚಿತ್ರಾ ಗಣೇಶ್ ಶೆಟ್ಟಿ ಪ್ರಾರ್ಥನೆಗೈದರು. ಸಿಎ ಸೋಮನಾಥ ಕುಂದರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ವಾಸುದೇವ ಎಂ. ಸಾಲ್ಯಾನ್, ಸಿಎ ಕಿಶೋರ್ ಕುಮಾರ್ ಸುವರ್ಣ, ದಿನೇಶ್ ಸಿ. ಸಾಲ್ಯಾನ್, ಸಿಎ ರೋಹಿತಾಕ್ಷ ದೇವಾಡಿಗ ಸಮ್ಮಾನಿತರನ್ನು ಪರಿಚಯಿಸಿದರು. ಕೋಶಾಧಿಕಾರಿ ಅಶೋಕ್ ದೇವಾಡಿಗ ಗತ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಹರೀಶ್ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನ್ಯಾಯವಾದಿ ಶೇಖರ ಎಸ್. ಭಂಡಾರಿ ವಾರ್ಷಿಕ ವರದಿ ವಾಚಿಸಿ ವಂದಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್