Advertisement

ವಿಜಯ ಬ್ಯಾಂಕ್‌ಗೆ 140 ಕೋಟಿ ನಿವ್ವಳ ಲಾಭ

12:14 PM Oct 31, 2018 | Team Udayavani |

ಬೆಂಗಳೂರು: ಸಾರ್ವಜನಿಕ ವಲಯದ ವಿಜಯ ಬ್ಯಾಂಕ್‌ ಎರಡನೇ ತ್ತೈಮಾಸಿಕದ ಹಣಕಾಸು ವರದಿಯಲ್ಲಿ  140 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸೋಮವಾರ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆರ್‌.ಎ. ಶಂಕರನಾರಾಯಣ್‌ ಅವರು ಪತ್ರಿಕಾಗೋಷ್ಠಿ ನಡೆಸಿ 2018-19ನೇ ಸಾಲಿನ ಆರ್ಥಿಕ ವರ್ಷದ 2ನೇ ತ್ತೈಮಾಸಿಕ ಹಾಗೂ ಅರ್ಧ ವಾರ್ಷಿಕ ವರದಿಯನ್ನು ಪ್ರಕಟಿಸಿದರು.

Advertisement

ವಿಜಯ ಬ್ಯಾಂಕ್‌ನ ಒಟ್ಟಾರೆ ವರಮಾನ 3,50,131 ಕೋಟಿ ರೂ.ನಿಂದ 3,93,136 ಕೋಟಿ ರೂ.ಗೆ ಏರಿಕೆಯಾಗಿ ಶೇ.36 ರಷ್ಟು ಪ್ರಗತಿ ಕಂಡಿದೆ. ಠೇವಣಿಯಲ್ಲಿ 1,67,628 ಕೋಟಿ ರೂ. (ಶೇ.25.47) ರಷ್ಟು ಹೆಚ್ಚಳವಾಗುವ ಮೂಲಕ ಒಟ್ಟು 2,96,668 ಕೋಟಿ ರೂ.ಗಳ ವಹಿವಾಟು (ಶೇ.30.23) ನಡೆಸಿದೆ. ಬ್ಯಾಂಕಿನ ನಿರ್ವಹಣಾ ಲಾಭದಲ್ಲಿ ಶೇ.3.39 ರಷ್ಟು ಹೆಚ್ಚಳ ಕಂಡುಬಂದು 759 ಕೋಟಿ ರೂ. ದಾಖಲಿಸಿದೆ. 

ಒಟ್ಟು ಸಾಲ ಪ್ರಮಾಣದಲ್ಲೂ ಶೇ.36.98 ರಷ್ಟು ಹೆಚ್ಚಳವಾಗಿ 1,29,040 ಕೋಟಿ ರೂ. ತಲುಪಿದೆ. ವಸೂಲಿಯಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣ ಶೇ.7.06 ರಿಂದ ಶೇ.5.86ಕ್ಕೆ ಹಾಗೂ ನಿವ್ವಳ ಎನ್‌ಪಿಎ ಶೇ.4.86 ರಿಂದ ಶೇ.3.81ಕ್ಕೆ ಇಳಿಕೆಯಾಗಿದೆ. ಸಿಆರ್‌ಎಆರ್‌ (ಬೆಸೆಲ್‌-3) ಶೇ.13.31 ರಿಂದ ಶೇ.13.56ಕ್ಕೆ ಹೆಚ್ಚಳವಾಗಿದ್ದರೆ, ಸರಾಸರಿ ಸಿಡಿ ಪ್ರಮಾಣ ಶೇ.70.52 ರಿಂದ ಶೇ.76.98ಕ್ಕೇರಿ ಬ್ಯಾಂಕ್‌ ಸುಸ್ಥಿತಿಯಲ್ಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next