Advertisement

ಬಿಗ್‌ ಬಜೆಟ್ ʼRamayanaʼ ದಲ್ಲಿ ವಿಭೀಷಣ ಪಾತ್ರಕ್ಕೆ ದಕ್ಷಿಣದ ಖ್ಯಾತ ನಟ; ಸಹೋದರನಾಗಿ ಯಶ್

03:43 PM Jan 26, 2024 | Team Udayavani |

ಮುಂಬಯಿ: ಭಾರತದ ಬಿಗ್‌ ಬಜೆಟ್‌ ಸಿನಿಮಾಗಳಲ್ಲಿ ಒಂದಾಗಿರುವ ನಿತೇಶ್ ತಿವಾರಿ ಅವರ ʼರಾಮಾಯಣʼ ಸಟ್ಟೇರುವ ಮುನ್ನವೇ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಿನಿಮಾದ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿದೆ. ಇದೀಗ ಮತ್ತೊಂದು ಅಪ್ಡೇಟ್‌ ಹೊರಬಿದ್ದಿದೆ.

Advertisement

ನಿತೇಶ್‌ ತಿವಾರಿ ʼರಾಮಾಯಣʼ ವನ್ನು ತೆರೆ ಮೇಲೆ ತರುವ ಮುನ್ನ, ಸಾಕಷ್ಟು ತಯಾರಿಯನ್ನು ನಡೆಸಿಕೊಂಡಿದ್ದಾರೆ. ಇದರಲ್ಲಿ ಮುಖ್ಯವಾಗಿ ಪಾತ್ರಗಳ ಆಯ್ಕೆಗಳ ವಿಚಾರದಲ್ಲಿ ನಿರ್ದೇಶಕರು ಹೆಚ್ಚಿನ ಗಮನ ಹರಿಸಿದ್ದಾರೆ.

ಸಿನಿಮಾದಲ್ಲಿ ರಣ್ಬೀರ್‌ ಕಪೂರ್‌ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ಮಾಡಲಿದ್ದಾರೆ. ಇನ್ನು ಸಿನಿಮಾದ ಮತ್ತೊಂದು ಪ್ರಧಾನ ಪಾತ್ರವಾದ ʼರಾವಣʼ ನಾಗಿ ನಟ ಯಶ್‌ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಸಿನಿಮಾದಲ್ಲಿ ಸನ್ನಿ ಡಿಯೋಲ್ ʼಹನುಮಾನ್ʼ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಲಾರಾ ದತ್ತಾ ಅವರು ʼಕೈಕೇಯಿʼ ಪಾತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಇದೀಗ ಸಿನಿಮಾದಲ್ಲಿನ ಮತ್ತೊಂದು ಪಾತ್ರಕ್ಕಾಗಿ ದಕ್ಷಿಣದ ಖ್ಯಾತ ನಟರೊಬ್ಬರ ಜೊತೆ ಚಿತ್ರತಂಡ ಮಾತುಕತೆ ನಡೆಸಿದೆ ಎನ್ನಲಾಗಿದೆ.

ಖ್ಯಾತ ನಟ ವಿಜಯ್‌ ಸೇತುಪತಿ ಅವರು ʼರಾಮಾಯಣʼ ಸಿನಿಮಾದಲ್ಲಿ ರಾವಣನ ಸಹೋದರ ʼವಿಭೀಷಣʼ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ನಿರ್ದೇಶಕ ನಿತೇಶ್‌ ತಿವಾರಿ ಸೇತುಪತಿ ಅವರನ್ನು ಭೇಟಿಯಾಗಿದ್ದು, ಈ ವೇಳೆ ಸಿನಿಮಾದ ಬಗ್ಗೆ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ. ಸೇತುಪತಿ ಇನ್ನಷ್ಟೇ ಸಿನಿಮಾಕ್ಕೆ ಹಾಕಬೇಕಿದೆ ಎಂದು ʼಪಿಂಕ್‌ ವಿಲ್ಲಾʼ ವರದಿ ತಿಳಿಸಿದೆ.

Advertisement

ʼರಾಮಾಯಣʼ ಸಿನಿಮಾದ ಚಿತ್ರೀಕರಣ ಮಾರ್ಚ್‌ ತಿಂಗಳಿನಿಂದ ಆರಂಭಗೊಳ್ಳಲಿದೆ ಎನ್ನಲಾಗಿದೆ. 2025 ರಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next