Advertisement

ಗಡೀಪಾರು ವಿರುದ್ಧ ವಾದಿಸಲು ವಿಜಯ್‌ ಮಲ್ಯ ಚಿಂತನೆ

03:45 AM Apr 20, 2017 | |

ಲಂಡನ್‌: ಸಾಲ ಮಾಡಿ ಪರಾರಿಯಾದ ಉದ್ಯಮಿ ವಿಜಯ್‌ ಮಲ್ಯ ಅವರ ಗಡೀಪಾರಿಗೆ ಭಾರತ ಯತ್ನಿಸುತ್ತಿರುವಂತೆಯೇ, ಮಲ್ಯ ಗಡೀಪಾರು  ಯತ್ನದ ವಿರುದ್ಧ  ಬ್ರಿಟನ್‌ನಲ್ಲಿ ಕೋರ್ಟ್‌ನಲ್ಲಿ ವಾದ ಮಂಡಿಸಲು ಸಿದ್ಧತೆ ನಡೆಸಿದ್ದಾರೆ.     

Advertisement

ತಮ್ಮ ಗಡೀಪಾರು ರಾಜಕೀಯ ದುರುದ್ದೇಶದಿಂದ ಕೂಡಿದ್ದು, ನ್ಯಾಯಯುತವಾದ್ದಲ್ಲ. ಜೊತೆಗೆ ಭಾರತದಲ್ಲಿ ತಮ್ಮ ವಿರುದ್ಧದ ಆರೋಪಗಳ ಸರಿಯಾದ ವಿಚಾರಣೆ ನಡೆಯಲು ಸಾಧ್ಯವಿಲ್ಲ ಎಂದು ಮಲ್ಯ ಅವರು ವಾದಿಸುವ ಸಾಧ್ಯವಿದೆ ಎನ್ನಲಾಗಿದೆ. 

ಇದಕ್ಕೆ ತಕ್ಕ ಎದುರೇಟು ನೀಡಲು ಭಾರತದ ಅಧಿಕಾರಿಗಳು ಬ್ರಿಟನ್‌ನ ಪ್ರಸಿದ್ಧ ವಕಾಲತ್ತು ಸಂಸ್ಥೆ ಕ್ರೌನ್‌ ಪ್ರಾಸಿಕ್ಯೂಶನ್‌ ಸರ್ವೀಸ್‌ (ಸಿಪಿಎಸ್‌) ಅನ್ನು ನೇಮಕ ಮಾಡಿದೆ. ಮಲ್ಯ ಅವರು ಪ್ರಮುಖ ಆರೋಪಿಯಾಗಿದ್ದು, ಅವರ ವಿರುದ್ಧ ಹಲವು ಕ್ರಿಮಿನಲ್‌ ಪ್ರಕರಣಗಳಿವೆ. ಅವರ ಗಡೀಪಾರು ನ್ಯಾಯಯುತವಾಗಿದೆ ಎಂದು ತರ್ಕ ಬದ್ಧವಾಗಿ ವಾದಿಸಲು ಸಿದ್ಧತೆ ನಡೆಸಿವೆ. ಹಲವು ಪ್ರಕರಣಗಳು, ನೆಲೆಗಳ ಆಧಾರದ ಮೇಲೆ ಮಲ್ಯ ಅವರ ಗಡೀಪಾರಿಗೆ ಮನವಿ ಮಾಡಬಹುದು. 

ಅದಕ್ಕೆ ಪ್ರತಿಯಾಗಿ ಮಲ್ಯ ಅವರು ರಾಜಕೀಯ ದುರುದ್ದೇಶದ್ದು, ಅಥವಾ ಮಾನವಹಕ್ಕುಗಳ ಹಾನಿ ಯಾಗುತ್ತದೆ, ನ್ಯಾಯಯುತ ವಿಚಾರಣೆ ಸಾಧ್ಯವಿಲ್ಲ ಎಂದೆಲ್ಲ ವಾದ ಮುಂದಿಡಬಹುದು ಎಂದು ಹಿರಿಯ ವಕೀಲರೊಬ್ಬರು ಹೇಳಿದ್ದಾರೆ. ಆದರೆ ಮಲ್ಯ ಅವರ ಪ್ರತಿ ವಾದಕ್ಕೂ ಸಾಕ್ಷ್ಯಾಧಾರಗಳ ಸಮೇತ ಪ್ರತಿವಾದಕ್ಕೆ ಭಾರತೀಯ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಮೇ.17ರಂದು ಮಲ್ಯ ಪ್ರಕರಣದ ಮುಂದಿನ ವಿಚಾರಣೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next