Advertisement

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

11:39 PM Dec 18, 2024 | Team Udayavani |

ಹೊಸದಿಲ್ಲಿ: ಬ್ಯಾಂಕ್‌ಗಳಿಗೆ ವಂಚಿಸಿ  ದೇಶ ಬಿಟ್ಟು ಹೋಗಿರುವ ಉದ್ಯಮಿಗ­ಳಾದ ವಿಜಯ್‌ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಮತ್ತಿತರರಿಂದ ಒಟ್ಟಾರೆ 22,280 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿ, ಬ್ಯಾಂಕ್‌ಗಳಿಗೆ ಹಾಗೂ ಹಕ್ಕುದಾರರಿಗೆ ಹಸ್ತಾಂತರಿಸಲಾಗಿದೆ. ವಂಚನೆ ಮಾಡಿದ ಯಾರನ್ನೂ ನಾವು ಸುಮ್ಮನೆ ಬಿಟ್ಟಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಲೋಕಸಭೆಯಲ್ಲಿ ಪೂರಕ ಅಂದಾಜು­ಗಳ ಮೇಲಿನ ಚರ್ಚೆ ವೇಳೆ ಈ ಮಾಹಿತಿ ನೀಡಿದ ಅವರು, ವಿಜಯ್‌ ಮಲ್ಯಗೆ ಸೇರಿದ 14,131.6 ಕೋಟಿ ರೂ. ಆಸ್ತಿ­ಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳಿಗೆ ಹಿಂದಿರುಗಿಸಲಾಗಿದೆ. ನೀರವ್‌ ಮೋದಿಗೆ ಸೇರಿದ 1,052.58 ಕೋಟಿ ರೂ. ಆಸ್ತಿಯನ್ನು ಪಂಜಾಬ್‌ ಆ್ಯಂಡ್‌ ಸಿಂಧ್‌ ಬ್ಯಾಂಕ್‌, ಇತರ ಖಾಸಗಿ ಬ್ಯಾಂಕ್‌ಗಳಿಗೆ ಹಿಂದಿರುಗಿಸಲಾಗಿದೆ. ಮೆಹುಲ್‌ ಚೋಕ್ಸಿ ಪ್ರಕರಣದಲ್ಲಿ 2,562.90 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆದಿದ್ದು, ಸದ್ಯ­ದಲ್ಲೇ ಹರಾಜು ಹಾಕಲಾಗುವುದು ಎಂದು ವಿವರಿಸಿದರು. ಜತೆಗೆ, ನ್ಯಾಶ ನಲ್‌ ಸ್ಪಾಟ್‌ ಎಕ್ಸ್‌ಚೇಂಜ್‌ ಲಿಮಿಟೆಡ್‌ ಪ್ರಕರಣದಲ್ಲಿ ವಂಚನೆಗೆ ಒಳಗಾದ ನೈಜ ಹೂಡಿಕೆದಾರರಿಗೆ 17.47 ಕೋಟಿ ರೂ. ವಾಪಸ್‌ ಮಾಡಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.