Advertisement

ಓವಲ್ ಪಂದ್ಯದಲ್ಲಿ ವಿಜಯ್‌ ಮಲ್ಯ!

02:33 AM Jun 10, 2019 | Team Udayavani |

ಲಂಡನ್‌: ಮದ್ಯದ ದೊರೆ, ವಿಮಾನಗಳ ದೊರೆ ಎಂದೆಲ್ಲ ಹೊಗಳಿಸಿಕೊಂಡಿದ್ದ ಉದ್ಯಮಿ ವಿಜಯ್‌ ಮಲ್ಯ ಸದ್ಯ ಭಾರತದಿಂದ ಪರಾರಿಯಾಗಿ ಇಂಗ್ಲೆಂಡ್‌ನ‌ಲ್ಲಿ ನೆಲೆಯಾಗಿದ್ದಾರೆ. ಅವರ ಮೇಲೆ ಬ್ಯಾಂಕ್‌ಗಳಿಗೆ 9,000 ಕೋಟಿ ರೂ. ವಂಚಿಸಿದ ಆರೋಪವಿದೆ.

Advertisement

ಇಂಗ್ಲೆಂಡ್‌ನ‌ಲ್ಲಿ ವಿಜಯ್‌ ಮಲ್ಯ ಎಲ್ಲಿ ನೆಲೆಸಿದ್ದಾರೆ ಎಂಬುದಕ್ಕೆ ರವಿವಾರ ಉತ್ತರ ಸಿಕ್ಕಿದೆ. ಅವರು ಲಂಡನ್ನಿನ ‘ಕೆನ್ನಿಂಗ್ಟನ್‌ ಓವಲ್’ ಮೈದಾನದಲ್ಲಿ ಭಾರತ-ಆಸ್ಟ್ರೇಲಿಯ ಪಂದ್ಯದ ವೇಳೆ ಪುತ್ರನೊಂದಿಗೆ ಕಾಣಿಸಿಕೊಂಡಿದ್ದಾರೆ. ಸಹಜವಾಗಿ ವರದಿಗಾರರ ಕಣ್ಣಿಗೂ ಬಿದ್ದರು. ಅವರ ವಿರುದ್ಧ ನಡೆಯುತ್ತಿರುವ ಗಡಿಪಾರು ವಿದ್ಯಮಾನದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಡಿಮಿಡಿಗೊಂಡರು.


Advertisement

Udayavani is now on Telegram. Click here to join our channel and stay updated with the latest news.

Next