Advertisement

ಫೆಬ್ರವರಿ 10ಕ್ಕೆ ವಿಜಯ್‌ ಜಗದಾಲ್‌ ಅವರ ‘ರೂಪಾಯಿ’ ತೆರೆಗೆ

06:16 PM Jan 23, 2023 | Team Udayavani |

ವಿಜಯ್‌ ಜಗದಾಲ್‌ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ “ರೂಪಾಯಿ’ ಚಿತ್ರ ಫೆಬ್ರವರಿ 10 ರಂದು ಬಿಡುಗಡೆಯಾಗುತ್ತಿದೆ. ನಟ ಡಾಲಿ ಧನಂಜಯ ಇತ್ತೀಚೆಗೆ “ರೂಪಾಯಿ’ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

Advertisement

ಈಗಾಗಲೇ ಆನಂದ್‌ ಆಡಿಯೋ ಮೂಲಕ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿವೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ರೂಪಾಯಿ ಮಹತ್ವ ಸಾರುವ ಈ ಚಿತ್ರದಲ್ಲಿ, ಕಾಮಿಡಿ, ಸೆಂಟಿಮೆಂಟ್‌ ಎಲ್ಲವೂ ಇದೆ. ಐದು ಪ್ರಮುಖ ಪಾತ್ರಗಳ ಸುತ್ತ ಈ ಕಥೆ ಸಾಗುತ್ತದೆ. ವಿಜಯ್‌ ಜಗದಾಲ್‌, ಕೃಷಿ ತಾಪಂಡ, ಯಶ್ವಿ‌ಕ್‌, ಚಂದನ ರಾಘವೇಂದ್ರ, ರಾಮ ಚಂದನ್‌ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ಪ್ರಮೋದ್‌ ಶೆಟ್ಟಿ, ಮೋಹನ್‌ ಜುನೇಜ, ರಾಕ್‌ ಲೈನ್‌ ಸುಧಾಕರ್‌ , ಅನಿಲ್‌ ಕುಮಾರ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿವಿಧ್‌ ಸಿನಿಮಾಸ್‌ ಲಾಂಛನದಲ್ಲಿ ಮಂಜುನಾಥ್‌ ಎಂ, ಹರೀಶ್‌ ಬಿ.ಕೆ ಮತ್ತು ವಿನೋದ್‌ ಎನ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆರ್‌. ಡಿ ನಾಗಾರ್ಜುನ ಛಾಯಾಗ್ರಹಣ, ಆನಂದ್‌ ರಾಜವಿಕ್ರಮ್‌ ಸಂಗೀತ ನಿರ್ದೇಶನ ಹಾಗೂ ಶಿವರಾಜ್‌ ಮೇಹು ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next