Advertisement

ವಿಜಯ್‌ ಹಜಾರೆ: ಕರ್ನಾಟಕಕ್ಕೆ ಸತತ 4ನೇ ಜಯ

03:45 AM Mar 04, 2017 | Team Udayavani |

ಕೋಲ್ಕತ್ತಾ: ಸ್ಥಿರ ಪ್ರದರ್ಶನ ನೀಡುತ್ತಿರುವ ಕರ್ನಾಟಕ ತಂಡ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಜಮ್ಮು ಕಾಶ್ಮೀರ ವಿರುದ್ಧ 7 ವಿಕೆಟ್‌ ಜಯ ಸಾಧಿಸಿದೆ. ಈ ಮೂಲಕ ಕೂಟದಲ್ಲಿ ಸೋಲಿಲ್ಲದೇ ಸತತ 4ನೇ ಜಯ ಪಡೆದಿದೆ. ಎಲ್ಲಾ ಪಂದ್ಯಗಳನ್ನು ಗೆದ್ದ ಕರ್ನಾಟಕ 16 ಅಂಕ ಸಂಪಾದಿಸಿ “ಡಿ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ.

Advertisement

ಶುಕ್ರವಾರ ನಡೆದ ಪಂದ್ಯದಲ್ಲಿ ಜಮ್ಮು ಕಾಶ್ಮೀರ 28.4 ಓವರ್‌ಗೆ 108 ರನ್‌ ಬಾರಿಸಿ ಆಲೌಟ್‌ ಆಗಿತ್ತು. ಸುಲಭ ಗುರಿ ಪಡೆದ ಕರ್ನಾಟಕ 6 ರನ್‌ ಆಗಿರುವಾಗ ಮಾಯಂಕ್‌ ಅಗರ್ವಾಲ್‌ ವಿಕೆಟ್‌ ಕಳೆದುಕೊಂಡಿತು. ತಂಡದ ಮೊತ್ತ 21 ಆಗಿರುವಾಗ ಮತ್ತೂಬ್ಬ ಬಲಾಡ್ಯ ಬ್ಯಾಟ್ಸ್‌ಮನ್‌ ಆರ್‌.ಸಮರ್ಥ್ ವಿಕೆಟ್‌ ಅನ್ನು ಕರ್ನಾಟಕ ಕಳೆದುಕೊಂಡಿತು. ಈ ಎರಡು ವಿಕೆಟ್‌ ಅನ್ನು ಮೊಹಮ್ಮದ್‌ ಮುಧಸರ್‌ ಕಬಳಿಸಿದರು. ನಂತರ ಜತೆಯಾದ ಕೆ.ಗೌತಮ್‌ ಮತ್ತು ದೇಶಪಾಂಡೆ ತಂಡದ ಮೊತ್ತವನ್ನು 52ಕ್ಕೆ ತೆಗೆದುಕೊಂಡು ಹೋದರು. ಈ ಸಮಯದಲ್ಲಿ ದೇಶಪಾಂಡೆ (12) ಮುಧಸರ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಈ ಸಮಯದಲ್ಲಿ ಜತೆಯಾದ ಕೆ.ಗೌತಮ್‌ ಮತ್ತು ನಾಯಕ ಮನೀಶ್‌ ಪಾಂಡೆ ಪಂದ್ಯವನ್ನು ಅಂತ್ಯಕಾಣಿಸಿದರು. ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಈ ಜೋಡಿ 58 ರನ್‌ ಬಾರಿಸಿದರು. ಹೀಗಾಗಿ ಕರ್ನಾಟಕ ಕೇವಲ 17.4 ಓವರ್‌ನಲ್ಲೇ 3 ವಿಕೆಟ್‌ ಕಳೆದುಕೊಂಡು ಜಯ ದಾಖಲಿಸಿತು. ಕೆ.ಗೌತಮ್‌ 46 ಎಸೆತದಲ್ಲಿ 9 ಬೌಂಡರಿ 1 ಸಿಕ್ಸರ್‌ ಸೇರಿದಂತೆ ಅಜೇಯ 57 ರನ್‌ ಬಾರಿಸಿದರು. ಮನೀಶ್‌ ಪಾಂಡೆ 23 ಎಸೆತದಲ್ಲಿ 23 ರನ್‌ ಬಾರಿಸಿದರು. ಇದರಲ್ಲಿ 4 ಬೌಂಡರಿ ಸೇರಿದೆ. ಜಮ್ಮು ಕಾಶ್ಮೀರ ಪರ ಮುಧರಸ್‌ 53ಕ್ಕೆ 3 ವಿಕೆಟ್‌ ಪಡೆದರು.

ಪ್ರಸಿದ್ಧ್ ಕೃಷ್ಣ ಭರ್ಜರಿ ದಾಳಿ:
ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಜಮ್ಮು ಕಾಶ್ಮೀರ ಬ್ಯಾಟ್ಸ್‌ಮನ್‌ಗಳು ಕರ್ನಾಟಕದ ಪ್ರಸಿದ್ಧ್ ಕೃಷ್ಣ ಸೇರಿದಂತೆ ಬೌಲರ್‌ಗಳ ಚುರುಕಿನ ದಾಳಿಗೆ ಪೆವಿಲಿಯನ್‌ ಸೇರಿದತು. ಜಮ್ಮು ಕಾಶ್ಮೀರ ಪರ ಮುನ್ಸೂರ್‌ ದಾರ್‌ (20) ಬಾರಿಸಿದ್ದೆ ದೊಡ್ಡ ಮೊತ್ತವಾಗಿತ್ತು. ಕರ್ನಾಟಕದ ಪರ ಪ್ರಸಿದ್ಧ್ ಕೃಷ್ಣ 4, ಸ್ಟುವರ್ಟ್‌ ಬಿನ್ನಿ 3 ವಿಕೆಟ್‌ ಪಡೆದರೆ, ಎಸ್‌.ಅರವಿಂದ್‌ ಮತ್ತು ರೋನಿತ್‌ ಮೋರೆ ತಲಾ 1 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌:
ಜಮ್ಮು ಕಾಶ್ಮೀರ 28.4 ಓವರ್‌ಗೆ 108/10 (ಮುನ್ಸೂರ್‌ ದಾರ್‌ 20, ರಾಮ್‌ ದಯಲ್‌ 14, ಪ್ರಸಿದ್ಧ್ ಕೃಷ್ಣ 15ಕ್ಕೆ 4), ಕರ್ನಾಟಕ 17.4 ಓವರ್‌ಗೆ 110/3 (ಕೆ.ಗೌತಮ್‌ 57, ಮನೀಶ್‌ ಪಾಂಡೆ 23, ಮುಧಸರ್‌ 53ಕ್ಕೆ 3).

Advertisement

ವಿಜಯ್‌ ಹಜಾರೆ ಇತರೆ ಪಂದ್ಯಗಳ ಫ‌ಲಿತಾಂಶ
-ಹೈದರಾಬಾದ್‌ಗೆ (203/8) ಜಾರ್ಖಂಡ್‌ (182/10) ವಿರುದ್ಧ 21 ರನ್‌ ಜಯ
-ಸೌರಾಷ್ಟ್ರಕ್ಕೆ (279/9) ಛತೀಸ್‌ಗಢ (187/10) ವಿರುದ್ಧ 92 ರನ್‌ ಜಯ
-ಗೋವಾ (290/8) ವಿರುದ್ಧ ಮಧ್ಯ ಪ್ರದೇಶಕ್ಕೆ (294/3) 7 ವಿಕೆಟ್‌ ಜಯ
-ಬಂಗಾಳಕ್ಕೆ (230/10) ಮುಂಬೈ (134/10) ವಿರುದ್ಧ 96 ರನ್‌ ಜಯ
-ಗುಜರಾತ್‌ಗೆ (288/7) ಆಂಧ್ರ (106/10) ವಿರುದ್ಧ 182 ರನ್‌ ಜಯ
-ಉತ್ತರ ಪ್ರದೇಶಕ್ಕೆ (370/5) ಮಹಾರಾಷ್ಟ್ರ (266/10) ವಿರುದ್ಧ 104 ರನ್‌ ಜಯ
-ಕೇರಳ (230/7) ವಿರುದ್ಧ ತಮಿಳುನಾಡಿಗೆ (231/4) 6 ವಿಕೆಟ್‌ ಜಯ
-ದೆಹಲಿಗೆ (356/5) ತ್ರಿಪುರ (286/8) ವಿರುದ್ಧ 70 ರನ್‌ ಜಯ
-ಒಡಿಶಾ (162/10) ವಿರುದ್ಧ ವಿದರ್ಭಕ್ಕೆ (163/3) 7 ವಿಕೆಟ್‌ ಜಯ
-ಹರ್ಯಾಣ (196/10) ವಿರುದ್ಧ ಪಂಜಾಬ್‌ಗ (200/5) 5 ವಿಕೆಟ್‌ ಜಯ
-ರೈಲ್ವೇಸ್‌ (215/10) ವಿರುದ್ಧ ಅಸ್ಸಾಂಗೆ (216/6) 4 ವಿಕೆಟ್‌ ಜಯ

Advertisement

Udayavani is now on Telegram. Click here to join our channel and stay updated with the latest news.

Next