Advertisement
ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಕಾರ್ಗಿಲ್ ವಿಜಯ ದಿವಸದಂದು ಗೌರವಪೂರ್ಣ ನಮನಗಳು. ಹುತಾತ್ಮ ಯೋಧರ ಅಪ್ರತಿಮ ಶೌರ್ಯ, ಸಾಹಸ, ತ್ಯಾಗ, ಬಲಿದಾನಗಳನ್ನು ಈ ದೇಶ ಸದಾ ಸ್ಮರಿಸಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
Advertisement
Koo Appಭಾರತೀಯ ಸೈನಿಕರು ಅಪರೇಶನ್ ವಿಜಯ್ ಮೂಲಕ ಕಾರ್ಗಿಲ್-ಡ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನವನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ. ಸಮರದಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ನಮನಗಳನ್ನು ಸಲ್ಲಿಸುತ್ತಾ, ನಮ್ಮ ಸೇನಾಪಡೆಗಳಿಗೆ ಅಭಿನಂದನೆಗಳನ್ನು ಸಲ್ಲಿಸೋಣ. ಜೈ ಹಿಂದ್! #KargilVijayDiwas – Araga Jnanendra (@aragajnanendra) 26 July 2022
Koo Appಇಂದು ನಾವೆಲ್ಲ ನೆಮ್ಮದಿಯಾಗಿ ಜೀವನವನ್ನು ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ವೀರ ಸೈನಿಕರ ತ್ಯಾಗ, ಬಲಿದಾನ, ಕಠಿಣ ಪರಿಶ್ರಮವೇ ಪ್ರಮುಖ ಕಾರಣ. ಶತ್ರುಗಳನ್ನು ಸದೆಬಡೆದು ಭಾರತ ಮಾತೆಯನ್ನು ಪ್ರತಿಕ್ಷಣವೂ ಉಳಿಸುವ ನಮ್ಮ ಯೋಧರ ಉದಾತ ಸೇವೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಕಾರ್ಗಿಲ್ ವೀರರನ್ನು ನೆನೆದು ವಂದಿಸುತ್ತಿದ್ದೇನೆ. @BJP4Karnataka – Dr. Murugesh R Nirani (@murugesh_nirani) 26 July 2022
Koo Appಇಂದು ಕಾರ್ಗಿಲ್ ವಿಜಯ ದಿನ. ಗಡಿಯೊಳಕ್ಕೆ ನುಸುಳಿ ನಮ್ಮ ಭೂಮಿಯನ್ನು ಆಕ್ರಮಿಸಿದ ಶತ್ರುಗಳನ್ನು ಸೆದೆಬಡಿದು ಮಾತೃಭೂಮಿಯನ್ನು ರಕ್ಷಿಸಿದ ವೀರಯೋಧರಿಗೆ ನನ್ನ ಶತ ನಮನಗಳು. ಅಪ್ರತಿಮ ಕೆಚ್ಚಿನಿಂದ ಹೋರಾಡಿದ ನಮ್ಮ ಸೇನಾಪಡೆಗಳ ಕರ್ತವ್ಯನಿಷ್ಠೆ, ಶೌರ್ಯ, ಪರಾಕ್ರಮಗಳಿಗೆ ಜೈಹೋ.. ಹುತಾತ್ಮರಾದ ವೀರಪುತ್ರರಿಗೆ ಭಾವಪೂರ್ವಕ ಶ್ರದ್ಧಾಂಜಲಿ. #jaihind – H D Kumaraswamy (@h_d_kumaraswamy) 26 July 2022