Advertisement

ಐಷಾರಾಮಿ ಮಲ್ಟಿಪ್ಲೆಕ್ಸ್ ಗೆ ವಿಜಯ್ ದೇವರಕೊಂಡ ಒಡೆಯ  

02:08 PM Sep 20, 2021 | Team Udayavani |

ಹೈದರಾಬಾದ್ : ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರು ಹೊಸದಾಗಿ ಮಲ್ಟಿಪ್ಲೆಕ್ಸ್ ಆರಂಭಿಸಿದ್ದು, ಹೈದರಾಬಾದ್‍ನ ಮೆಹಮೂಬ್ ನಗರದಲ್ಲಿ ಈ ಐಷಾರಾಮಿ ಥಿಯೇಟರ್ ತಲೆ ಎತ್ತಿ ನಿಂತಿದೆ.

Advertisement

ಹೀರೋ ಆಗಬೇಕೆನ್ನುವ ಕನಸಿನೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ಈ ನಟ ಇಂದು ಟಾಲಿವುಡ್‍ನಲ್ಲಿ ಬಹುಬೇಡಿಕೆ ನಟನಾಗಿದ್ದಾನೆ. ಅರ್ಜುನ್ ರೆಡ್ಡಿ ಬಳಿಕ ತನ್ನದೆಯಾದ ಭದ್ರ ನೆಲೆ ಕಂಡುಕೊಂಡ ಇವರು ನಂತರ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದರು. ಇದೀಗ ಮತ್ತೊಂದು ಉದ್ಯಮಕ್ಕೆ ಕೈ ಹಾಕಿದ್ದು, ಹೈಟೆಕ್ ಚಿತ್ರಮಂದಿರಕ್ಕೆ ಒಡೆಯರಾಗಿದ್ದಾರೆ.

ವಿಜಯ್ ದೇವರಕೊಂಡ ಅವರ ಪೋಷಕರ ನೆಟಿವ್ ಪ್ಲೇಸ್ ಆಗಿರುವ ಮೆಹಬೂಬ್ ನಗರದಲ್ಲಿ ಈ ಮಲ್ಟಿಪ್ಲೆಕ್ಸ್ ನಿರ್ಮಾಣವಾಗಿದ್ದು, ಇದೆ ಸೆಪ್ಟೆಂಬರ 24ರಂದು ಉದ್ಘಾಟನೆಗೊಳ್ಳುತ್ತಿದೆ. ಆದರೆ, ಸಿನಿಮಾ ಶೂಟಿಂಗ್ ನಿಮಿತ್ತ ಗೋವಾದಲ್ಲಿರುವ ಕಾರಣ ವಿಜಯ್ ದೇವರಕೊಂಡ ಅವರು ಈ ಕಾರ್ಯಕ್ರಮಕ್ಕೆ ಗೈರು ಆಗುತ್ತಿದ್ದಾರೆ.

ಈ ಮಲ್ಟಿಪ್ಲೆಕ್ಸ್ ಏಷಿಯನ್ ಅವರ ಸಹಯೋಗದಲ್ಲಿ ವಿಜಯ್ ದೇವರಕೊಂಡ ಅವರು ನಿರ್ಮಿಸಿದ್ದಾರೆ. ಆದ್ದರಿಂದ AVD ( ಏಷಿಯನ್ ವಿಜಯ್ ದೇವರಕೊಂಡ) ಎಂದು ನಾಮಕರಣ ಮಾಡಲಾಗಿದೆ.

Advertisement

ಇಂದು ತಮ್ಮ ಟ್ವಿಟರ್ ನಲ್ಲಿ ತಮ್ಮ ಅಭಿಮಾನಿಗಳಿಗೆ ಈ ಸಂತಸದ ವಿಷಯವನ್ನು ಹಂಚಿಕೊಂಡಿರುವ ವಿಜಯ್ ದೇವರಕೊಂಡ ಅವರು, ಎವಿಡಿಯ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

ಇನ್ನು ಸೆಪ್ಟೆಂಬರ್ 24 ರಂದು ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾ ವಿಜಯ್ ದೇವರಕೊಂಡ ಅವರ ಮಲ್ಟಿಪ್ಲೆಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ವಿಜಯ್ ದೇವರಕೊಂಡ ಅವರು ಶುಭಕೋರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next