Advertisement
ವಿಘ್ನಹರ್ಥ ಶ್ರೀ ಮಹಾಗಣಪತಿ ಸೇವಾ ಮಂಡಲದ ದಹಿಸರ್ ಸಂಸ್ಥೆಯು ಮಂಡಲದ ಅಧ್ಯಕ್ಷ ವಸಂತ ಆರ್. ನಾಯಕ್ ಅಧ್ಯಕ್ಷತೆಯಲ್ಲಿ ಜೂ. 30ರಂದು ನಡೆದ ದಹಿಸರ್ ಪೂರ್ವದ ಶ್ರೀ ವಿಠಲ ರುಕುಮಾಯಿ ಮಂದಿರದ ಮಾಧವೇಂದ್ರ ಸಭಾಗೃಹದಲ್ಲಿ ನಡೆದ ವಾರ್ಷಿಕ ಸಾರಸ್ವತ್ ಉತ್ಸವ ಮತ್ತು ವಾರ್ಷಿಕ ಮಹಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಘದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಘದ ಯೋಜನೆಗಳಿಗೆ ಸಹಕರಿಸಬೇಕು ಎಂದರು.
Related Articles
Advertisement
ಪೂರ್ವಾಹ್ನ ವಸಂತ ನಾಯಕ್ ಅಧ್ಯಕ್ಷತೆಯಲ್ಲಿ ಸೇವಾ ಮಂಡಲದ 13ನೇ ಮಹಾಸಭೆ ನಡೆಸಲಾಗಿದ್ದು, ವೇದಿಕೆಯಲ್ಲಿ ಮಂಡಲದ ಗೌರವಾಧ್ಯಕ್ಷ ಗೋಪಾಲ ಆರ್. ನವಳ್ಕರ್, ಉಪಾಧ್ಯಕ್ಷ ರಮೇಶ್ ಎಸ್. ನಾಯಕ್, ಗೌರವ ಕೋಶಾಧಿಕಾರಿ ಭರತ್ ವಿ. ಕಾಮತ್, ಜತೆ ಕಾರ್ಯದರ್ಶಿ ಗೋಪಾಲ ಎ. ನಾಯಕ್, ಜತೆ ಕೋಶಾಧಿಕಾರಿ ಆನಂದ್ ಕೆ.ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರದಿ ವರ್ಷದಲ್ಲಿ ಸ್ವರ್ಗಸ್ಥರಾದ ಸಂಘದ ಸದಸ್ಯರು, ಹಿತೈಷಿಗಳು, ಕಲಾವಿದರಿಗೆ ಸಭೆಯಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯದರ್ಶಿ ಎನ್. ಶ್ರೀನಿವಾಸ್ ನಾಯಕ್ ಗತ ವಾರ್ಷಿಕ ಮಹಾಸಭೆ ವರದಿ ಮತ್ತು ವಾರ್ಷಿಕ ಚಟುವಟಿಕೆಗಳ ವಿವರ ನೀಡಿದರು. ಗೌರವ ಕೋಶಾಧಿಕಾರಿ ಭರತ್ ವಿ. ಕಾಮತ್ ಗತ ಸಾಲಿನ ಲೆಕ್ಕಪತ್ರ ಮಂಡಿಸಿದರು.
ಮಕ್ಕಳಿಗೆ ಛದ್ಮವೇಷ ಮತ್ತು ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸದಸ್ಯರು ಮತ್ತು ಮಕ್ಕಳಿಂದ ವೈವಿಧ್ಯಮಯ ನೃತ್ಯಗಳು ಪ್ರದರ್ಶನಗೊಂಡಿತು. ಕೊನೆಯಲ್ಲಿ ವಸಂತ ಆರ್. ನಾಯಕ್ ವಿರಚಿತ “ಬಾಬ’ ಕೊಂಕಣಿ ನಾಟಕ ಪ್ರದರ್ಶನಗೊಂಡಿತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ರೊನಿಡಾ ಮುಂಬಯಿ.