Advertisement

Law: ಖಾಸಗಿಯಾಗಿ ಮಕ್ಕಳ ಅಶ್ಲೀಲ ಚಿತ್ರ ವಿಕ್ಷಣೆ ಅಪರಾಧವಲ್ಲ: ಮದ್ರಾಸ್‌ ಹೈಕೋರ್ಟ್‌

09:29 PM Jan 13, 2024 | Team Udayavani |

ಚೆನ್ನೈ:“ಮಕ್ಕಳ ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ, ವೀಕ್ಷಿಸಿದೊಡನೆ ಅದು ಪೋಕ್ಸೋ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧವಾಗುವುದಿಲ್ಲ’ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.

Advertisement

ಅಶ್ಲೀಲ ಚಿತ್ರಗಳನ್ನು (ಪೋರ್ನೋಗ್ರಫಿ) ರೂಪಿಸುವ ಉದ್ದೇಶದಿಂದ ಮಗು ಅಥವಾ ಮಕ್ಕಳನ್ನು ಬಳಸಿಕೊಳ್ಳುವುದನ್ನು ಪೋಕ್ಸೋ ಕಾಯ್ದೆಯಡಿ ಅಪರಾಧವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ಆರೋಪಿಯು ಅಂಥ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸಿದರೆ ಅಥವಾ ಪ್ರಸಾರ ಮಾಡಿದರೆ ಅದು ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ವಯ ಅಪರಾಧವೆಂದು ಪರಿಗಣಿಸಲ್ಪಡುತ್ತದೆ. ಕೇವಲ ಮಕ್ಕಳ ಪೋರ್ನೋಗ್ರಫಿ ವಿಡಿಯೋ ಡೌನ್‌ಲೋಡಿ ಮಾಡಿ, ಖಾಸಗಿಯಾಗಿ ವೀಕ್ಷಿಸಿದೊಡನೆ ಅದು ಪೋಕೊÕà ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್‌ ನ್ಯಾ.ಎನ್‌. ಆನಂದ್‌ ವೆಂಕಟೇಶ್‌ ಹೇಳಿದ್ದಾರೆ.

ಮಕ್ಕಳ ಅಶ್ಲೀಲ ಚಿತ್ರ ಡೌನ್‌ಲೋಡ್‌ ಮಾಡಿ ವೀಕ್ಷಿಸಿದ್ದಾನೆ ಎಂಬ ಕಾರಣಕ್ಕೆ ಪೋಕೊÕà ಕಾಯ್ದೆಯಡಿ 28 ವರ್ಷದ ವ್ಯಕ್ತಿಯ ಮೇಲೆ ದಾಖಲಾಗಿದ್ದ ಪ್ರಕರಣವನ್ನು ವಜಾ ಮಾಡುವ ವೇಳೆ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಜತೆಗೆ, ಇತರರಿಗೆ ತೊಂದರೆಯಾಗದಂತೆ, ಯಾರ ಮೇಲೂ ಪ್ರಭಾವ ಬೀರದಂತೆ ಖಾಸಗಿಯಾಗಿ ವಿಡಿಯೋ ವೀಕ್ಷಿಸಿರುವ ಕಾರಣ, ಆತನನ್ನು ಶಿಕ್ಷಿಸುವುದು ಸರಿಯಲ್ಲ. ಧೂಮಪಾನ, ಮದ್ಯಪಾನದಂತೆ ಅಶ್ಲೀಲ ಚಿತ್ರಗಳ ವೀಕ್ಷಣೆ ಕೂಡ ಈಗಿನ ತಲೆಮಾರಿಗೆ ಚಟವಾಗಿಬಿಟ್ಟಿದೆ. ಇದಕ್ಕೆ ಶಿಕ್ಷೆಯೊಂದೇ ಪರಿಹಾರವಲ್ಲ ಎಂದೂ ಹೈಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next