Advertisement
ಕಾಸರಗೋಡು ನುಳ್ಳಿಪ್ಪಾಡಿಯಲ್ಲಿ ನಡೆಯುತ್ತಿರುವ ರಾಜ್ಯ ಸರಕಾರದ ಕಿಫ್ ಬಿ ಪ್ರದರ್ಶನದಲ್ಲಿ ಈ ದೃಶ್ಯಾವಳಿ ಸಹಿತದ ಪ್ರದರ್ಶನ ಈ ಮೂಲಕ ಗಮನ ಸೆಳೆಯುತ್ತಿದೆ.
ಬಿ.ಐ.ಎಂ. ವತಿಯಿಂದ ನೂತನ ತಂತ್ರಜ್ಞಾನದೊಂದಿಗೆ ಅನೇಕ ದೃಶ್ಯ ವಿಸ್ಮಯಗಳನ್ನು ನೋಡಬಹುದಾಗಿದ್ದು, ಇಲ್ಲೊಂದು ಮಾಯಾಲೋಕವೇ ಸೃಷ್ಟಿ ಯಾಗಿವೆ. ಬೃಹತ್ ಕಟ್ಟಡಗಳ ಒಳಾಂಗಣ, ಹೊರಾಂಗಣಗಳನ್ನು ಯಥಾ ಸ್ವರೂಪದಲ್ಲಿ ಏಕಕಾಲಕ್ಕೆ ವೀಕ್ಷಿಸಬಹುದಾದ ವರ್ಚುವಲ್ ರಿಯಾಲಿಟಿ ತಂತ್ರಜ್ಞಾನ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಬಿ.ಐ.ಎಂ. ಸ್ಟಾಲ್‌ಗಳು ಇಲ್ಲಿ ಸಕ್ರಿ ಯವಾಗಿವೆ. ಇಡೀ ದೇಶದಲ್ಲೇ ಪ್ರಥಮ ಬಾರಿಗೆ ರಜ್ಯದಲ್ಲಿ ಕಿಫ್ ಬಿ ಪ್ರದರ್ಶನ ಮೇಳದಲ್ಲಿ ಬಿ.ಐ.ಎಂ. ಸ್ಟಾಲ್ ಮೂಲಕ ಕಟ್ಟಡಗಳ ತ್ರೀ ಡಿ ಚಲನ ದೃಶ್ಯಗಳು ವೀಕ್ಷಕರಿಗೆ ಲಭಿಸುತ್ತಿವೆ.
ಕಿಫ್ ಬಿಯ 21 ಯೋಜನೆಗಳ ವೀಡಿಯೋಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ. ಜಿಲ್ಲೆಯ ಸುಬ್ರಹ್ಮಣ್ಯನ್ ತಿರುಮುಂಬ್ ಕಲ್ಚರಲ್ ಕಾಂಪ್ಲೆಕ್ಸ್, ತ್ರಿಕರಿಪುರದ ಎಂ.ಆರ್.ಸಿ. ಕೃಷ್ಣನ್ ಮೆಮೋರಿಯಲ್ ಇಂಡೋರ್ ಸ್ಟೇಡಿಯಂ ಇತ್ಯಾದಿಗಳು ಅನುಷ್ಠಾನಗೊಂಡ ವೇಳೆ ಹೇಗಿರಬಹುದು ಎಂದು ತೋರುವ ತ್ರೀಡಿ ಚಲನಚಿತ್ರಗಳನ್ನು ಕಾಣಬಹುದಾಗಿದೆ. ಎಂಜಿನಿಯರಿಂಗ್ ಪರಿಣತರು ಅವರ ಉದ್ಯೋಗ ಪರಿಷ್ಕರಣೆ ಅಂಗವಾಗಿ ಬಳಸುವ ಬಿಲ್ಡಿಂಗ್ ಇನ್ ಫರ್ಮೇಷನ್ ಮಾಡೆಲಿಂಗ್ ತಂತ್ರಜ್ಞಾನವನ್ನು ಈ ಮೂಲಕ ಕಿಫ್ ಬಿ ಸಾರ್ವಜನಿಕರ ಮುಂದಿರಿಸಿದೆ.
Related Articles
ಪ್ಲಾಸ್ಟಿಕ್ ನಿಷೇಧ ಹಿನ್ನೆಲೆಯಲ್ಲಿ ಬದಲಿ (ಪ್ರಕೃತಿ ಸ್ನೇಹಿ) ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಸ್ಟಾಲ್‌ಗಳು ಈ ಪ್ರದರ್ಶನದಲ್ಲಿ ವೀಕ್ಷಕರನ್ನು ಸೆಳೆಯುತ್ತಿವೆ. ಜಿಲ್ಲಾ ಕುಟುಂಬಶ್ರೀ ಮಿಷನ್ ಮತ್ತು ಕೇರಳ ನಿರ್ಮಿತಿ ಸ್ಟಾಲ್‌ಗಳು “ಪುನರ್ ಜನನಿ’ ಎಂಬ ಹೆಸರಿನಲ್ಲಿ ಇಲ್ಲಿ ಸಕ್ರಿಯವಾಗಿವೆ.
Advertisement
ಗೃಹೋಪಯೋಗಿ ಮತ್ತು ಅಲಂಕಾರ ಸಾಮಗ್ರಿಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ. ಜಿಲ್ಲೆಯ 560 ಕುಟುಂಬಗಳ 268 ಮಹಿಳೆಯರು ತಯಾರಿಸಿದ ಉತ್ಪನ್ನಗಳು ಇಲ್ಲಿವೆ. ಈ ನಿಟ್ಟಿನಲ್ಲಿ ಕೊರಗ ಜನಾಂಗದವರು ಸಿದ್ಧಪಡಿಸುವ ಉತ್ಪನ್ನಗಳಿಗೆ ಬೇಡಿಕೆ ಅ ಧಿಕವಾಗಿದೆ. ಬೆತ್ತದ ಕಿರು ಬುಟ್ಟಿಗಳು, ಹೂದಾನಿಗಳು, ಹಾಳೆ ತಟ್ಟೆಗಳು, ಮಣ್ಣಿನ ಲೋಟ, ಪಾತ್ರೆ, ಕುಡಿಕೆ ಇತ್ಯಾದಿಗಳು, ಬಟ್ಟೆ ಚೀಲಗಳು, ಬಡ್ಸ್ ಶಾಲೆಗಳ ಮಕ್ಕಳ ತಾಯಂದಿರು ನಿರ್ಮಿಸಿರುವ ಬೀಜಗಳ ಪೆನ್‌ಗಳು ಇತ್ಯಾದಿಗಳು ಗಮನ ಸೆಳೆಯುತ್ತಿವೆ.