Advertisement

ತೊಗರಿ ತಳಿ-ಕೃಷಿ ಪರಿಕರ ವೀಕ್ಷಿಸಿದ ಅನ್ನದಾತ

10:49 AM Nov 26, 2017 | Team Udayavani |

ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆರಂಭಗೊಂಡ ಮೂರು ದಿನಗಳ ಕೃಷಿ ಮೇಳದಲ್ಲಿ ಮೊದಲ ದಿನ ತೊಗರಿಯ ಜಿಆರ್‌ಜಿ-8111 ತಳಿ, ಟಿಎಸ್‌3 ಆರ್‌ ಎನ್ನುವ ತಳಿಗಳನ್ನು ಪ್ರದರ್ಶಿಸಲಾಯಿತು.

Advertisement

ಎರಡು ಮಳಿಗೆಯಲ್ಲಿ ತೊಗರಿ ಕುರಿತು ಮಾಹಿತಿಯನ್ನು ಕೃಷಿ ಇಲಾಖೆ ಹಾಗೂ ಕೆವಿಕೆ ಪ್ರಾಧ್ಯಾಪಕರು ಮಾಹಿತಿ ನೀಡಿದರು. ಮೇಳದಲ್ಲಿ 110 ಮಳಿಗೆಗಳನ್ನು ಹಾಕಲಾಗಿತ್ತು. ಟ್ರ್ಯಾಕ್ಟರ್‌ ಮತ್ತು ಪುಸ್ತಕ ಹಾಗೂ ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಮಳಿಗೆಯ ಪ್ರಾತ್ಯಕ್ಷಿಕೆ ಮಾದರಿಗಳಿದ್ದವು. ಬಹುತೇಕ ಮಳಿಗೆಯಲ್ಲಿ ಪ್ರಾತ್ಯಕ್ಷಿಕೆಗಳಿಗಿಂತ ಮುದ್ರಿತ ಮಾಹಿತಿ ಪತ್ರಗಳೇ ಹೆಚ್ಚಾಗಿ ಕಂಡು ಬಂದವು.

150ಕ್ಕೂ ಹೆಚ್ಚು ರೈತರು ಬಿಪಿ ಮತ್ತು ಶುಗರ್‌ ಪರೀಕ್ಷೆ ಮಾಡಿಸಿಕೊಂಡರು. ಮೇಳದಲ್ಲಿ ರೈತರಿಗೆ ಸಾವಯವ, ಕೊಟ್ಟಿಗೆ ಗೊಬ್ಬರ, ಸೋಲಾರ ಬಳಕೆ, ವಿದ್ಯುತ್‌ ಸಮಸ್ಯೆಗೆ ಪರಿಹಾರದ ಸಲಕರಣೆಗಳು ಮತ್ತು ಮೀನುಗಾರಿಕೆ, ಹೈನುಗಾರಿಕೆ, ಜಾನುವಾರು ಸಾಕಾಣಿಕೆ ಕುರಿತು ಮಾಹಿತಿ ನೀಡಬೇಕು ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ದ್ವಾರದ ಬಳಿಯಲ್ಲಿ ರೈತರನ್ನು ಸೆಳೆಯಲು ಎತ್ತು, ಕುರಿ ಹಾಗೂ ಆಕಳುಗಳ ಪ್ರದರ್ಶನ ಮಳಿಗೆ ಹಾಕಲಾಗಿತ್ತು.

ಕೆವಿಕೆ ಸಂಶೋಧನೆ ಭಾಗವಾಗಿ ಹಾಕಲಾಗಿದ್ದ ಮಳಿಗೆಯಲ್ಲಿ ಆಜೋಲಾ ಹಸಿರು ಮೇವು ಮಾತ್ರ ರೈತರನ್ನು ಆಕರ್ಷಿತು. ಒಂದಷ್ಟು ಆಜೋಲಾ ತೆಗೆದುಕೊಂಡು ಸ್ವತ್ಛ ನೀರಿಗೆ ಹಾಕಿದರೆ ಅದರಿಂದ ಕೇವಲ ಒಂದು ದಿನದಲ್ಲಿ ಐದಾರು ಕೆಜಿಯಷ್ಟು ಹಸಿ ಮೇವು ಉತ್ಪಾದನೆ ಮಾಡಬಹುದು ಎಂದು ವಿಭಾಗದ ಮುಖ್ಯಸ್ಥ ಡಾ| ರಾಜು ತೆಗ್ಗಳ್ಳಿ ವಿವರಿಸಿದರು.

ಹನಿ ನೀರಾವರಿಯಿಂದ ಶೆಡ್ಡುಗಳಲ್ಲಿ ಒಂದರ ಮೇಲೆ ಒಂದರಂತೆ ಟ್ರೇಗಳನ್ನು ಇಟ್ಟು ಹಸಿ ಮೇಕ್ಕೆಜೋಳದ ಮೇವು
ಉತ್ಪಾದನೆ ಮಾಡುವ ಕ್ರಮವನ್ನು ರೈತರು ವೀಕ್ಷಿಸಿದರು. ವಿದ್ಯುತ್‌ ಇಲ್ಲದೆಯೇ ಕೇವಲ ಸೋಲಾರ್‌ ಮತ್ತು ಬ್ಯಾಟರಿ ಚಾಲಿತ ಸಣ್ಣ ಯಂತ್ರಗಳ ಸಹಾಯದಿಂದ ಸ್ಪಿಂಕ್ಲರ್‌ಗಳನ್ನು ಬಳಕೆ ಮಾಡಿ ಅಟ್ಟಣಿಗೆಗಳಲ್ಲಿ ಮೇವನ್ನು ಬೆಳೆಯಬಹುದು ಎನ್ನುವ ಪದ್ಧತಿ ಉತ್ತಮ ಮಾಹಿತಿ ಬಿತ್ತರಿಸಿತು.

Advertisement

ಯಂತ್ರಗಳಿಂದ ಬಿತ್ತನೆ, ಕುಂಟೆ ಹೊಡೆಯುವುದು, ನೀರುಣಿಸುವುದು ಸೇರಿದಂತೆ ಇತರೆ ಕೃಷಿ ಪರಿಕರಗಳ ಮಳಿಗೆಗಳು ಹೆಚ್ಚು ಕಂಡುಬಂದವು. ಬ್ಯಾಂಕುಗಳ ಮಳಿಗೆಯಲ್ಲಿ ಯಂತ್ರಗಳ ಸಾಲಗಳ ಕುರಿತು ರೈತರು ಮಾಹಿತಿ ಪಡೆದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕೃಷಿ ಪರಿಕರಗಳ ಮಾಹಿತಿ ಪಡೆದರು. 

Advertisement

Udayavani is now on Telegram. Click here to join our channel and stay updated with the latest news.

Next