Advertisement

ಧಾರವಾಡ ದಲಿತರ ಮನೆಗಳಲ್ಲಿ ದೀಪ ಬೆಳಗಿದ ವಿದ್ಯಾರಣ್ಯ ಸ್ವಾಮೀಜಿ

03:09 PM Mar 03, 2022 | Team Udayavani |

ಧಾರವಾಡ: ಹಂಪಿಯ ವಿರುಪಾಕ್ಷ ವಿದ್ಯಾರಣ್ಯ ಮಹಾ ಸಂಸ್ಥಾನದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ನಗರದ ದಲಿತ ಕೇರಿಗೆ ಬಂದು ಮನೆ, ಮನೆಗಳಲ್ಲಿ ದೀಪ ಬೆಳಗಿಸುವ ಮೂಲಕ ಗಮನ ಸೆಳೆದಿದ್ದಾರೆ.

Advertisement

ಇಲ್ಲಿಯ ಜಾಂಬವಂತ ನಗರದಲ್ಲಿನ ಮನೆಗಳಿಗೆ ಭೇಟಿ ನೀಡಲು ಬಂದ ಸ್ವಾಮೀಜಿಗೆ ಅದ್ಧೂರಿ ಸ್ವಾಗತ ದೊರೆಯಿತು. ಸುಮಂಗಲೆಯರು ಸ್ವಾಮೀಜಿಗೆ ಆರತಿ ಬೆಳಗಿ ಅವರನ್ನು ಸ್ವಾಗತಿಸಿದರು. ಇದಲ್ಲದೇ ಭಜನೆ ಮೇಳದೊಂದಿಗೆ ಸ್ವಾಮೀಜಿವರನ್ನು ಮನೆ, ಮನೆಗೆ ಕರೆದುಕೊಂಡು ಬರಲಾಯಿತು.

ಸಮಾಜದ ಹಿಂದುಳಿದ ಜನಾಂಗ ಕೂಡ ಮುಂದೆ ಬರಬೇಕು. ಹಿಂದುಳಿದವರು ಎಂದು ಅವರನ್ನು ಹಿಂದೆಯೇ ಬಿಡಬಾರದು. ಇಲ್ಲಿ ದಲಿತರು, ಮೇಲ್ವರ್ಗದವರು ಎಂಬ ಬೇಧ ಇರಬಾರದು ಎಂಬ ಉದ್ದೇಶದಿಂದ ಹಕ್ಕ ಬುಕ್ಕರಿಗೆ ಧೀಕ್ಷೆ ಕೊಟ್ಟು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣೀಭೂತರಾದ ವಿದ್ಯಾರಣ್ಯ ಪೀಠದ ಗುರುಗಳೇ ಧಾರವಾಡಕ್ಕೆ ಬಂದು ಇಂತದೊಂದು ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಜಾಂಬವಂತನಗರದಲ್ಲಿ ಹೆಚ್ಚಾಗಿ ದಲಿತರೇ ವಾಸಿಸುತ್ತಿದ್ದು, ಸನಾತನ ಧರ್ಮದ ವಿವಿಧ ಜನಾಂಗದವರು ಒಂದಾಗಬೇಕು. ಅಸ್ಪೃಶ್ಯತೆ ನಿವಾರಣೆಯಾಗಬೇಕು ಎಂಬ ಉದ್ದೇಶದಿಂದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರ ಮನೆಯಲ್ಲಿರುವ ದೇವರ ಕೋಣೆಗಳಿಗೆ ಹೋಗಿ ಪೂಜೆ ಮಾಡುವ ಮೂಲಕ ದೀಪ ಬೆಳಗಿಸುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next