Advertisement

ಶಿಕ್ಷಣ ಇಲಾಖೆಯಿಂದ ಎಸೆಸೆಲ್ಸಿ, ವಿದ್ಯಾಗಮದ ವೇಳಾಪಟ್ಟಿ ಪ್ರಕಟ

12:58 AM Dec 24, 2020 | sudhir |

ಬೆಂಗಳೂರು : ರಾಜ್ಯದಲ್ಲಿ ಜ.1ರಿಂದ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ಸಿದ್ಧತೆ  ಮಾಡಿಕೊಂಡಿರುವ ಶಿಕ್ಷಣ ಇಲಾಖೆಯು ಎಸೆಸೆಲ್ಸಿ ಮತ್ತು 6ರಿಂದ 9ನೇ ತರಗತಿ ವಿದ್ಯಾರ್ಥಿಗಳ ವಿದ್ಯಾಗಮದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisement

ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ದೈಹಿಕ ಶಿಕ್ಷಣ ಹಾಗೂ ಇತರ(ಚಿತ್ರಕಲೆ/ವೃತ್ತಿ) ಸೇರಿ 8 ತಂಡ ಮಾಡಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪಾಠ ನಡೆಸಲು ಸೂಚಿಸಿದೆ. ಬೆಳಗ್ಗೆ 10ರಿಂದ 10.45ರ ತನಕ ಒಂದು ಅವಧಿ, 10.45ರಿಂದ 11.30ರ ವರೆಗೆ ಎರಡನೇ ಅವಧಿ ಹಾಗೂ 11.45ರಿಂದ 12.30ರ ವರೆಗೆ ಮೂರನೇ ಅವಧಿ ಇರಲಿದೆ.

ವಿದ್ಯಾಗಮ ವೇಳಾಪಟ್ಟಿ
ವಿದ್ಯಾಗಮ ತರಗತಿಗೆ ಸಂಬಂಧಿಸಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲಾ ಕೊಠಡಿ, ಪ್ರಯೋಗಾಲಯ, ವಾಚನಾಲಯ, ವರಾಂಡ ಬಳಸಿಕೊಳ್ಳಬಹುದಾಗಿದೆ. ಸಾಮಾಜಿಕ ಅಂತರ ಸಹಿತವಾಗಿ ಎಲ್ಲ ಸುರಕ್ಷೆಯ ಕ್ರಮಗಳನ್ನು ಪಾಲಿಸಬೇಕು. ಒಂದು ಕೊಠಡಿಯಲ್ಲಿ 15ರಿಂದ 20 ವಿದ್ಯಾರ್ಥಿಗಳಿಗಷ್ಟೇ ವ್ಯವಸ್ಥೆ ಮಾಡ ಬೇಕು ಎಂದು ಸೂಚನೆ ನೀಡಿದೆ.

ವಿದ್ಯಾಗಮ ತರಗತಿಯೂ 8 ತಂಡಗಳಲ್ಲಿ ನಡೆಯಲಿದೆ. ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ 9ನೇ ತರಗತಿ, ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ 8ನೇ ತರಗತಿಗಳ ವಿದ್ಯಾಗಮ ಪಾಠ ನಡೆಯಲಿದೆ. ಕೆಲವು ಶಾಲೆಗಳಲ್ಲಿ 8ನೇ ತರಗತಿಯವರೆಗೆ ಮಾತ್ರ ಇದ್ದು, ಅಲ್ಲಿ ಬುಧವಾರವೂ 8ನೇ ತರಗತಿ ನಡೆಯಲಿದೆ.

6ನೇ ತರಗತಿಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ, 7ನೇ ತರಗತಿಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ತರಗತಿಗಳು ನಡೆಯಲಿದೆ ಇದು ಕೂಡ 45 ನಿಮಿಷಗಳ ಮೂರು ಅವಧಿಯಲ್ಲಿರಲಿದೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರ ವರೆಗೆ ವಿದ್ಯಾಗಮ ತರಗತಿ ಇರಲಿದೆ ಎಂದು ಇಲಾಖೆ ಪ್ರಕಟನೆ ತಿಳಿಸಿದೆ.

Advertisement

ಎರಡನೇ ಸುತ್ತಿನ ಫ‌ಲಿತಾಂಶ ಪ್ರಕಟ
ಬೆಂಗಳೂರು: ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌, ಕೃಷಿ ವಿಜ್ಞಾನ, ಫಾರ್ಮಸಿ, ಪಶುಸಂಗೋಪನೆ ಮೊದಲಾದ ಕೋರ್ಸ್‌ಗಳ ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಸೀಟು ಪಡೆದ ಅಭ್ಯರ್ಥಿಗಳು ಡಿ. 24ರೊಳಗೆ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು, ಡಿ.26ರೊಳಗೆ ಕಾಲೇಜಿಗೆ ಸೇರಬೇಕು ಎಂದು ಪ್ರಾಧಿಕಾರ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next