ಸಕಲೇಶಪುರ: ಕೋವಿಡ್ ಆತಂಕ ನಡುವೆ ಸರ್ಕಾರ ಕಾರ್ಯಗತಗೊಳಿಸಿದ್ದ ವಿದ್ಯಾಗಮ ಯೋಜನೆಯನ್ನು ಈಗ ಸ್ಥಗಿತಗೊಳಿಸಿದ್ದು, ಮಲೆನಾಡು ಭಾಗದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ 170 ಸರ್ಕಾರಿ ಪ್ರಾಥಮಿಕ, 15 ಸರ್ಕಾರಿ ಪ್ರೌಢಶಾಲೆ ಇವೆ.400 ಶಿಕ್ಷಕರು ಪ್ರಾಥಮಿಕ ವಿಭಾಗ, 100 ಶಿಕ್ಷಕರು ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜಾಘೋಷಣೆಮಾಡಿ,ಮಕ್ಕಳುಅಕ್ಷರಾಭ್ಯಾಸದಿಂದ ಹಿಂದೆ ಉಳಿಯಬಾರದು ಎಂದು ಸರ್ಕಾರ ವಿದ್ಯಾಗಮ ಯೋಜನೆ ಜಾರಿಗೆ ತಂದಿತ್ತು.
ವಾರದಲ್ಲಿ ಒಂದು ಅಥವಾ ಎರಡು ದಿನ ಶಿಕ್ಷಕರು ಹೆಚ್ಚು ಮಕ್ಕಳಿರುವ ಜಾಗಗಳಿಗೆ ಹೋಗಿ ಅವರನ್ನೆಲ್ಲ ಒಂದು ಕಡೆ ಸೇರಿಸಿ ಹತ್ತಿರವಿರುವ ಸಮುದಾಯ ಭವನ, ದೇವಸ್ಥಾನ, ಮರದ ನೆರಳಿನಲ್ಲಿ ತರಗತಿ ಮಾಡಲಾಗುತ್ತಿತ್ತು. ಆದರೆ, ವಿದ್ಯಾಗಮ ಯೋಜನೆಯಡಿ ರಾಜ್ಯಾದ್ಯಂತ ಕೆಲಸ ಮಾಡುತ್ತಿದ್ದ ಕೆಲ ಶಿಕ್ಷಕರಿಗೆ ಕೋವಿಡ್ ಸೋಂಕು ಬಂದಿರುವುದು. ಕೆಲವರು ಸಾವನ್ನಪ್ಪಿರುವುದು ತಾಲೂಕಿನ ಶಿಕ್ಷಕರಲ್ಲೂ ಆತಂಕ ತರಿಸಿತ್ತು. ಜೊತೆಗೆಪೋಷಕರು ಸಹ ಭಯದಲ್ಲೇ ತಮ್ಮ ಮಕ್ಕಳನ್ನು ವಿದ್ಯಾಗಮಕ್ಕೆ ಕಳುಹಿಸುತ್ತಿದ್ದರು.
ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯತ್ತಿದ್ದ ಕಾರಣ, ಕುಗ್ರಾಮಗಳಿಗೆ ಹೋಗಲು ವಾಹನದ ವ್ಯವಸ್ಥೆ ಇಲ್ಲದೆ, ಶಿಕ್ಷಕರು ಪರದಾಡುತ್ತಿದ್ದರು. ಇನ್ನು ವಿದ್ಯಾಗಮ ಯೋಜನೆಯಲ್ಲಿ ಗ್ರಾಮಗಳ ಹತ್ತಿರದಲ್ಲಿರುವ ಸಮುದಾಯ ಭವನ, ಬಯಲು, ದೇವಸ್ಥಾನದಂತಹ ಜಾಗ ಹುಡುಕಿಕೊಂಡು ಮಕ್ಕಳಿಗೆ ಪಾಠ ಮಾಡಬೇಕಾಗಿತ್ತು. ಬಹುತೇಕ ಕಡೆ ಮೂಲ ಸೌಕರ್ಯಗಳಿಲ್ಲದೆ ಮೂತ್ರ ವಿಸರ್ಜಿಸಲು ಸಹ ಶಿಕ್ಷಕರು ಪರದಾಡಬೇಕಾಗಿತ್ತು. ಗ್ರಾಮಾಂತರಪ್ರದೇಶಗಳಲ್ಲಿಆರೋಗ್ಯ ಭದ್ರತೆಯೂ ಇರದ ಕಾರಣ ಮಹಿಳಾ ಶಿಕ್ಷಕರು ಆತಂಕಗೊಂಡಿದ್ದರು. ಹಲವು ಸಂದರ್ಭಗಳಲ್ಲಿ ಮಕ್ಕಳಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಸಾಧ್ಯವಾಗಿತ್ತು. ಜೊತೆಗೆ ಮಕ್ಕಳನ್ನು ನಿಯಂತ್ರಿಸಲು ಶಿಕ್ಷಕರಿಗೆ ಸವಾಲಿನ ಕೆಲಸವಾಗಿತ್ತು.
ಕೋವಿಡ್ ಭಯ ಶಿಕ್ಷಕರನ್ನುಕಾಡುತ್ತಿತ್ತು. ಈ ಎಲ್ಲಾ ಕಾರಣಗಳಿಂದ ವಿದ್ಯಾಗಮ ಯೋಜನೆಯನ್ನು ನಿಲ್ಲಿಸಬೇಕೆಂಬ ಕೂಗು ತಾಲೂಕಿನಲ್ಲಿ ಮೊದಲಿನಿಂದಲೂ ಕೇಳಿ ಬರುತ್ತಲೇ ಇತ್ತು. ಸರ್ಕಾರ ಈಗ ಸ್ಥಗಿತಗೊಳಿಸಿದ್ದಕ್ಕೆ ಶಿಕ್ಷಕರ ವಲಯ ಸಂತಸ ವ್ಯಕ್ತಪಡಿಸಿದೆ.
ವಿದ್ಯಾಗಮಯೋಜನೆ ಸ್ಥಗಿತಗೊಳಿಸಿದಕ್ರಮ ಸರಿ ಇದೆ. ಅಪರಿಚಿತ ಸ್ಥಳಗಳಲ್ಲಿಯಾವುದೇ ಭದ್ರತೆ ಇಲ್ಲದೆ ತರಗತಿ ನಡೆಸುತ್ತಿದ್ದರಿಂದಾಗಿ ಕೋವಿಡ್ ಸೋಂಕು ಹರಡುವ ಸಾಧ್ಯತೆ ಹೆಚ್ಚಿತ್ತು.
–ತಮ್ಮಣ್ಣ ಶೆಟ್ಟರು, ತಾಲೂಕು ಅಧ್ಯಕ್ಷ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ವಿದ್ಯಾಗಮಯೋಜನೆ ಸ್ಥಗಿತಗೊಳಿಸಿದ ಸರ್ಕಾರದಕ್ರಮ ಸರಿಯಿದೆ. ಒಂದು ವರ್ಷ ಮಕ್ಕಳಿಗೆ ಶೈಕ್ಷಣಿಕವಾಗಿ ಹಿನ್ನಡೆಯಾದ್ರೆ ಏನು ಆಗುವುದಿಲ್ಲ. ಬರುವ ಜೂನ್‌ನಿಂದ ಶಾಲೆ ಆರಂಭಿಸಲಿ, ಆ ವೇಳೆಗೆ ಕೋವಿಡ್ ಸೋಂಕುಕಡಿಮೆಯಾಗುವ ಸಾಧ್ಯತೆಯಿದೆ.
–ಎಚ್.ಕೆ.ಕುಮಾರಸ್ವಾಮಿ, ಶಾಸಕ.
–ಸುಧೀರ್ ಎಸ್.ಎಲ್.