Advertisement
ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್ ಅವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಆರ್. ಕೆ. ಕೋಟ್ಯಾನ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಮಂಜೂರುಗೊಳಿಸಿದರು. ಜಗನ್ನಾಥ ಆ್ಯಂಡ್ ಕಂಪೆನಿಯನ್ನು ಲೆಕ್ಕ ಪರಿಶೋಧಕರಾಗಿ ಪುನರಾಯ್ಕೆ ಗೊಳಿಸಲಾಯಿತು. ಶತಮಾನೋತ್ಸವ ಸಂಭ್ರಮವು ಇದೇ ಸಮಿತಿಯ ಮುಖಾಂತರ ನಡೆಯಬೇಕು. ಅಲ್ಲದೆ ಸದಸ್ಯತನದ ಮೊತ್ತವನ್ನು 1000 ರೂ. ಗಳಿಗೆ ಏರಿಸುವ ನಿರ್ಣಯವನ್ನು ಸಭೆಯಲ್ಲಿ ಮಾಡಲಾಯಿತು. ಎಲ್ಲಾ ಸದಸ್ಯರು ಕಚೇರಿಯಿಂದ ಹೊಸ ಸದಸ್ಯತನದ ಅರ್ಜಿಯನ್ನು ಪಡೆದು ನವೀಕರಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
Related Articles
Advertisement
ಭಾರತ್ ಬ್ಯಾಂಕ್ನ ಮಾಜಿ ಕಾರ್ಯಾಧ್ಯಕ್ಷ ಡಿ. ಬಿ. ಅಮೀನ್ ಮಾತನಾಡಿ, ಸದಸ್ಯರ ಕಾರ್ಯವೈಖರಿ ಯನ್ನು ಶ್ಲಾಘಿಸಿದರು. ಉತ್ತಮ ಕಾರ್ಯಕ್ಕೆ ಹಣ ಖರ್ಚು ಮಾಡುವುದರಲ್ಲಿ ಅರ್ಥವಿದೆ. ಈ ಸಂಸ್ಥೆಯು ಎಷ್ಟು ಬೆಳೆಯಬೇಕಿತ್ತೋ ಆ ಮಟ್ಟಕ್ಕೆ ಹೋಗಲಿಲ್ಲ. ಎಲ್ಲ ಸದಸ್ಯರು ಉತ್ತಮ ಮನಸ್ಸಿನೊಂದಿಗೆ ಸಂಸ್ಥೆಯನ್ನು ಮುನ್ನಡೆಸಬೇಕು ಎಂದು ಹೇಳಿದರು.
ಡಿ. ಕೆ. ಅಂಚನ್ ಅವರು ಮಾತ ನಾಡಿ, ಪ್ರಚಾರದ ದೃಷ್ಟಿಯಿಂದ ಕೆಲಸ ಮಾಡಬಾರದು. ಸದಸ್ಯತನದ ಮೊತ್ತವನ್ನು ಏರಿಸಿದ್ದು ಸರಿಯಾದ ನಿರ್ಣಯವಾಗಿದೆ. ಎಲ್ಲ ಸದಸ್ಯರನ್ನು ಆದಷ್ಟು ಸಂಪರ್ಕಿಸಿ ಈ ವಿಷಯವನ್ನು ತಿಳಿಯಪಡಿಸಬೇಕು. ಎಲ್ಲರೂ ರಾತ್ರಿ ಶಾಲೆಯ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಮಹಿಳಾ ಕಾರ್ಯಾಧ್ಯಕ್ಷೆ ವಸಂತಿ ಕೋಟ್ಯಾನ್ ಮಾತನಾಡಿ, ಮಹಿಳಾ ವಿಭಾಗವನ್ನು ಬಲಪಡಿಸಿ ಸದಸ್ಯರನ್ನು ಹೊಂದಿಸಬೇಕು ಎಂದರು.
ಸಭಾದ ಉಪಾಧ್ಯಕ್ಷ ಭಾಸ್ಕರ ಕರ್ನಿರೆ ಅವರು ಮಾತನಾಡಿ, ಸಂಸ್ಥೆಗೆ ಹೊಸಬರಾಗಿ ಬಂದರೂ, ಸಂಸ್ಥೆಯ ಕಾರ್ಯವೈಖರಿಗೆ ಮೆಚ್ಚಿದ್ದೇನೆ. ನವೀಕರಣಗೊಂಡ ಈ ಸಂದರ್ಭದಲ್ಲಿ ಸಭಾದ ಸ್ಥಾಪಕರ ಹೆಸರು ಮತ್ತು ಫೋಟೊಗಳನ್ನು ಅನಾವರಣಮಾಡಿದ್ದು, ಹೆಮ್ಮೆಯ ವಿಷಯವಾಗಿದೆ. ಹಳೆವಿದ್ಯಾರ್ಥಿ ಗಳನ್ನು ಹಾಗೂ ಹಳೆ ಸದಸ್ಯರನ್ನು ಒಟ್ಟುಗೂಡಿಸಿ ಶತಮಾನೋತ್ಸವ ಜರಗಲಿದೆ ಎಂದರು.ಜತೆ ಕಾರ್ಯದರ್ಶಿ ಶರತ್ ಪೂಜಾರಿ ಮಾತನಾಡಿ, ಇಂದು ನಾವಿದ್ದ ಹಣವನ್ನೇ ಖರ್ಚು ಮಾಡಿದ್ದೇವೆ. ಧನ ಸಂಗ್ರಹದ ಬಗ್ಗೆ ಯೋಚಿಸುವುದು ಅಗತ್ಯವಾಗಿದೆ ಎಂದು ನುಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್ ಅವರು ಮಾತನಾಡಿ, ಅಪಾಯದ ಪರಿಸ್ಥಿತಿಯಲ್ಲಿದ್ದ ಸಭಾದ ಕಟ್ಟಡವನ್ನು ನಗರ ಪಾಲಿಕೆ ಮತ್ತು ಮಾಡಾದ ಕೈಗೆ ಹೋಗುವುದನ್ನು ಉಳಿಸಿಕೊಳ್ಳಲು ಎರಡು ವರ್ಷದ ಅಂದಿನ ಮಹಾಸಭೆಯಲ್ಲಿ ಮಂಜೂ ರಾದ 25 ಲಕ್ಷ ರೂ. ಗಳ ಒಳಗೆ ಕಟ್ಟಡ ದುರಸ್ಥಿಗೊಳಿಸಲಾಗಿದೆ. ಇನ್ನೂ ಹಲವಾರು ಸಮಸ್ಯೆಗಳಿದ್ದು, ಟೀಕಿಸುವುದನ್ನು ಬಿಟ್ಟು ಸದಸ್ಯರು ಸ್ಪಂದಿಸಬೇಕು. ಸಮಾಜದ ಅಭಿವೃದ್ಧಿಗೆ ಮಾಡುವ ಖರ್ಚು ಹಿತಕರ ಎಂಬ ಸ್ಥಾಪಕರನ್ನು ಮಾತನ್ನು ನೆನಪಿಸಿ ಉತ್ತಮ ಕಾರ್ಯಗಳಿಗೆ ಸಹಕರಿಸಿದವರಿಗೆ ವಂದಿಸಿದರು. ಅಧ್ಯಕ್ಷ ಜೆ. ಎಂ. ಕೋಟ್ಯಾನ್ ಅವರು ಮಾತನಾಡಿ, ತನ್ನ ಅನುಪಸ್ಥಿತಿ ಯಲ್ಲಿ ಕಟ್ಟಡದ ಕಚೇರಿಯ ನವೀಕರಣ ಕಾಮಗಾರಿ ಇತಿಮಿತಿಯೊಳಗೆ ಬಹಳ ಒಳ್ಳೆಯ ರೀತಿಯಲ್ಲಿ ಆಗಿದೆ. ಕಚೇರಿಯ ವಾತಾವರಣ ಎಲ್ಲರಿಗೂ ಮೆಚ್ಚುಗೆ ಯಾಗಿದೆ. ಸಭಾದ ಶತಮಾನೋತ್ಸವಕ್ಕೆ ಈಗಾಗಲೇ ಅಣಿಯಾಗಬೇಕು. ಶಾಲಾ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನುಡಿದರು. ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್ ವಂದಿಸಿದರು. ಲಕ್ಷ್ಮಣ್ ಕರ್ಕೇರ ವರದಿಯನ್ನು ಮಂಜೂರು ಮಾಡಲಾಯಿತು.