ಬೆಂಗಳೂರು: ಇನ್ನು ಮುಂದೆ ವಿಧಾನಸೌಧ ಪ್ರವೇಶಕ್ಕೆ ಪಾಸ್‌ಗಳನ್ನು ಆನ್‌ಲೈನ್ ಮೂಲಕವೇ ವಿತರಿಸಲಿದ್ದು, ಕ್ಯುಆರ್ ಕೋಡ್ ಮೂಲಕ ಪಾಸ್‌ಗಳನ್ನು ದೃಢೀಕರಿಸಿಕೊಂಡು ಪ್ರವೇಶ ಕಲ್ಪಿಸಲು ಸರಕಾರ ನಿರ್ಧರಿಸಿದೆ. ಗೃಹ ಸಚಿವ ಡಾ| ಪರಮೇಶ್ವರ ಈ ಹೊಸ ನಿಯಮ ಜಾರಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಧಾನಸೌಧದ ಪ್ರವೇಶದ್ವಾರ ಗಳಲ್ಲಿ ಹೊಸದಾಗಿ ಅಳವಡಿಸಿರುವ ಮೆಟಲ್ ಡಿಟೆಕ್ಟರ್, ಬ್ಯಾಗ್ ಸ್ಕ್ಯಾನರ್‌ಗಳನ್ನು ಶುಕ್ರವಾರ ಪರಿಶೀಲಿಸಿ ಅವರು ಈ ವಿಷಯ ತಿಳಿಸಿದರು.
ಆನ್‌ಲೈನ್ ಮೂಲಕವೇ ನೀಡಲಾಗುವುದು. ಆನ್‌ಲೈನ್ ಮೂಲಕ ಪಡೆದ ಕ್ಯುಆರ್ ಕೋಡ್ ಪಾಸ್‌ಗಳನ್ನು ಪರಿಶೀಲಿಸಲಾಗುತ್ತದೆ. ಗುಣ ಮಟ್ಟದ ಉಪಕರಣ ಅಳವಡಿಸಿರುವುದರಿಂದ, ಅನುಮಾನಾಸ್ಪದ ವಸ್ತುಗಳನ್ನು ತೆಗೆದು ಕೊಂಡು ಬಂದರೆ, ಪತ್ತೆಹಚ್ಚಲು ಸುಲಭವಾಗುತ್ತದೆ ಎಂದರು.
ವಿಧಾನಸೌಧದ ಭದ್ರತೆಯಲ್ಲಿ ಮತ್ತಷ್ಟು ಮಾರ್ಪಾಡು ತರಲಾಗುವುದು ಎಂದು ಮಾಹಿತಿ ನೀಡಿದ ಗೃಹ ಸಚಿವರು, ಸಾರ್ವಜನಿಕರು ಪೂರ್ವ ಭಾಗದ ಗೇಟಿನಿಂದ ಬರಬೇಕು. ಪಶ್ಚಿಮ ದ್ವಾರದಿಂದ ಗಣ್ಯರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಧಾನಸೌಧಕ್ಕೆ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂಬ ವಿಷಯವಾಗಿ ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಲಾಗಿದೆ ಎಂದರು.
ಈ ಎರಡು ಕಟ್ಟಡಗಳಲ್ಲಿರುವ ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳ ಭೇಟಿಗೆ ಅಪರಾಹ್ನ 2.30ರಿಂದ ಸಂಜೆ 5.30ರ ವರೆಗೆ ಸಮಯ ನಿಗದಿಪಡಿಸಲಾಗಿದೆ. ಅದೇ ಅವಧಿಯಲ್ಲಿ ಆನ್‌ಲೈನ್ ಮೂಲಕ ಸಾರ್ವಜನಿಕರು ಪ್ರವೇಶ ಪಾಸು ಪಡೆದು ಭೇಟಿ ಮಾಡಬಹುದಾಗಿದೆ.
ಪಾಸ್ ಹೇಗೆ ಸಿಗುತ್ತದೆ?
-ಪಾಸ್ ಬಯಸುವವರು ಆ್ಯಂಡ್ರಾಯ್ಡ ಮೊಬೈಲ್‌ನಲ್ಲಿ ಕರ್ನಾಟಕ ಒನ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
-ತಮ್ಮ ಮೊಬೈಲ್ ಸಂಖ್ಯೆ ನೋಂದಾಯಿಸಿ, ಒಟಿಪಿ ದಾಖಲಿಸಿ, ಆ್ಯಪ್ ತೆರೆಯಬೇಕು.
-ತಮ್ಮ ಹೆಸರು, ವಿಳಾಸ, ಆಧಾರ್ ಸಂಖ್ಯೆ ಮತ್ತಿ ತರ ಮಾಹಿತಿ ಭರ್ತಿ ಮಾಡಬೇಕು.
-ಅನಂತರ ವಿಧಾನಸೌಧ ಅಥವಾ ವಿಕಾಸಸೌಧ ವನ್ನು ಆಯ್ಕೆ ಮಾಡಿಕೊಳ್ಳಬೇಕು.
-ಅಧಿಕಾರಿಗಳು ದಾಖಲೆ ಪರಿಶೀಲಿಸಿ, ಕ್ಯುಆರ್ ಕೋಡ್ ಸ್ಕ್ಯಾನರ್ ಲಿಂಕ್ ಕಳುಹಿಸುತ್ತಾರೆ.
-ಈ ಲಿಂಕನ್ನು ಪೊಲೀಸ್ ಭದ್ರತ ಸಿಬಂದಿ ಸ್ಕ್ಯಾನ್ ಮಾಡುತ್ತಾರೆ. ಇಲ್ಲಿ ಯಶಸ್ವಿಯಾದರೆ ಪ್ರವೇಶ ಲಭ್ಯ. ಇಲ್ಲವಾದರೆ ನಿರ್ಬಂಧ.