Advertisement

ಈ ವಿಧಾನಸಭೆ ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೇ ಗೆಲುವು

12:05 AM Apr 11, 2023 | Team Udayavani |

ಮಂಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭೆ ಹಾಗೂ ಮುಂದಿನ ವರ್ಷದ ಲೋಕಸಭಾ ಚುನಾವಣೆಗಳನ್ನು ಅಗ್ರಗಣ್ಯ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಎದುರಿಸಿ ಪಕ್ಷವು ಜಯಭೇರಿ ಬಾರಿಸಲಿದೆ ಎಂದು ರಾಷ್ಟ್ರೀಯ ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

“ಉದಯವಾಣಿ’ ನಡೆಸಿದ ಸಂದ ರ್ಶನದಲ್ಲಿ ಅವರು ಈ ಅಭಿ ಪ್ರಾಯ ವ್ಯಕ್ತಪಡಿಸಿದರು.

ಬೆಲೆ ಏರಿಕೆ, ಅದಾನಿ ಪ್ರಕರಣಗಳು ದೇಶದಲ್ಲಿ ಬಿಜೆಪಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಯಾಗಲಿವೆಯೇ ಎಂಬ ಪ್ರಶ್ನೆಗೆ, ದೇಶ ದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯ ಗಳು, ಸರ್ವ ವರ್ಗದ ಸಶಕ್ತೀಕರಣ, ಜಮ್ಮು ಕಾಶ್ಮೀರದಲ್ಲಿನ 360 ವಿಧಿ ತೆರವು, ರಾಮ ಮಂದಿರ ನಿರ್ಮಾಣ, ಜಿಎಸ್‌ಟಿ ಎಲ್ಲವೂ ಪಕ್ಷದ ಗೆಲುವಿಗೆ ಪೂರಕ
ವಾಗಿ ಪರಿಣಮಿಸಲಿದೆ ಎಂದರು.

ದಿಟ್ಟ ನಾಯಕತ್ವ
ರಾಜ್ಯದಲ್ಲಿ ಭ್ರಷ್ಟಾಚಾರ ಕುರಿತು ಸರಕಾರದ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ಪ್ರಾಮಾಣಿಕ ಹಾಗೂ ದಿಟ್ಟ ನಾಯಕತ್ವವನ್ನು ರಾಜ್ಯದ ಜನತೆ ಒಪ್ಪಿ ದ್ದಾರೆ. ಡಬಲ್‌ ಎಂಜಿನ್‌ ಸರಕಾರದ ಅಭಿವೃದ್ಧಿ-ಪಾರದರ್ಶಕ ಆಡಳಿತ ಮತ್ತು ಕನ್ನಡಿಗರ ಏಳ್ಗೆಗೆ ಕೈಗೊಂಡ ಕಾರ್ಯಗಳಿಂದ ಜನತೆ ಬಿಜೆಪಿ ಮೇಲೆ ವಿಶ್ವಾಸವಿರಿಸಿದ್ದಾರೆ ಎಂದರು.

ಕಾಂಗ್ರೆಸ್‌ಗೆ ಧೈರ್ಯ ಇಲ್ಲ
ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಇಂದು ಸ್ವತಂತ್ರವಾಗಿ ಚುನಾವಣೆ ಎದುರಿಸುವ ಧೈರ್ಯವನ್ನೇ ಕಳೆದುಕೊಂಡಿದೆ. ಹಾಗಾಗಿಯೇ ಮೈತ್ರಿಕೂಟಕ್ಕಾಗಿ ಹಾತೊರೆ ಯುತ್ತಿದ್ದು, ಕಾಂಗ್ರೆಸ್‌ನ ಯಾವುದೇ ಕುತಂತ್ರವು ಬಿಜೆಪಿಯ ಶಕ್ತಿಯನ್ನು ಎದುರಿಸಲು ಸಾಧ್ಯವಿಲ್ಲ ಎಂದರು.

Advertisement

ಪಟ್ಟಿ ಶೀಘ್ರ ಬಿಡುಗಡೆ
ಕಾಂಗ್ರೆಸ್‌ ಪಕ್ಷ ಕುಟುಂಬ ಆಧಾ ರಿತ ಪಕ್ಷ. ಅಲ್ಲಿ ಯಾವುದೇ ಶಿಸ್ತು ಇಲ್ಲ. ಆದರೆ ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ಪಾರದರ್ಶಕತೆಯನ್ನು ಕಾಯ್ದು ಕೊಂಡಿದೆ. ಹಾಗಾಗಿ ಜನರು ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ, ರಾಜ್ಯದ ಜನರಿಗೆ ಪಾರ ದರ್ಶಕವಾಗಿ ಸೇವೆ ಸಲ್ಲಿಸುವ ಅರ್ಹ ಅಭ್ಯರ್ಥಿಗಳ ಆಯ್ಕೆ ನಡೆದಿದೆಯೇ ಹೊರತು ಯಾವುದೇ ಗೊಂದಲ ಅಥವಾ ಆಯ್ಕೆಯಲ್ಲಿ ವಿಳಂಬ ಆಗಿಲ್ಲ. ಪಟ್ಟಿ ಶೀಘ್ರವೇ ಬಿಡುಗಡೆ ಯಾಗಲಿದೆ ಎಂದರು.

ಎ. 13ರೊಳಗೆ ಆಯುಧ ಠೇವಣಿಗೆ ಡಿಸಿ ಆದೇಶ
ಮಂಗಳೂರು, ಎ. 10: ಬೆಳೆ ಮತ್ತು ಆತ್ಮರಕ್ಷಣೆಗಾಗಿ ಆಯುಧ ಪರವಾನಿಗೆ ಹೊಂದಿರುವವರು ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಆಯುಧಗಳನ್ನು ಎ. 13ರೊಳಗೆ ಪೊಲೀಸ್‌ ಠಾಣೆ ಅಥವಾ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಸ್ಥರಲ್ಲಿ ಠೇವಣಿ ಇಡಬೇಕು. ಈ ಮೊದಲು ಎ. 24ರೊಳಗೆ ಠೇವಣಿ ಇಡುವಂತೆ ಆದೇಶಿಸಲಾಗಿತ್ತು. ಇದೀಗ ಪರಿಷ್ಕೃತ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next