Advertisement

ವಿಪ ಚುನಾವಣೆ: ಮತಯಾಚನೆ ಜೋರು

10:26 AM Jun 10, 2022 | Team Udayavani |

ರಬಕವಿ-ಬನಹಟ್ಟಿ: ರಾಜ್ಯದ ಶಿಕ್ಷಕರ ಮತ್ತು ಪದವೀಧರರ ಅಭಿವೃದ್ಧಿ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯ. ಆದ್ದರಿಂದ ಮುಂಬರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಶಿಕ್ಷಕರ ಮತಕ್ಷೇತ್ರದ ಪ್ರಕಾಶ ಹುಕ್ಕೇರಿ ಮತ್ತು ಪದವೀಧರ ಕ್ಷೇತ್ರದ ಸುನೀಲ ಸಂಕ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಮಾಜಿ ಸಚಿವ ಎಸ್‌.ಆರ್‌.ಪಾಟೀಲ ತಿಳಿಸಿದರು.

Advertisement

ಬುಧವಾರ ದಾನೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಪರ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಪ್ರಕಾಶ ಹುಕ್ಕೇರಿ ರೈತರ ಸಲುವಾಗಿ ಹಲವಾರು ಹೋರಾಟ ಮಾಡಿದ್ದಾರೆ. ಅವರ ಹೋರಾಟದಿಂದ ರಾಜ್ಯದ ಕಬ್ಬು ಬೆಳೆಗಾರರಿಗೆ ಮತ್ತು ಸರ್ಕಾರಕ್ಕೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಅವರು ಶಿಕ್ಷಕರ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ. ಶಿಕ್ಷಣ ಕ್ಷೇತ್ರದ ಅಸಮಾನತೆ ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂದು ಎಸ್‌.ಆರ್‌ .ಪಾಟೀಲ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಕಾಂಗ್ರೆಸ್‌ ಪಕ್ಷ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಶ್ರಮಿಸಿದೆ. ದೇಶ ಮತ್ತು ರಾಜ್ಯದ ಸವಾಂìಗೀಣ ಅಭಿವೃದ್ಧಿಯಲ್ಲಿ ಕಾಂಗ್ರೆಸ್‌ ಕೊಡುಗೆ ಅಪಾರ. ಬಿಜೆಪಿ ಸರಕಾರ ಕಳೆದ ಮೂರುವರೆ ವರ್ಷದಲ್ಲಿ ಜಾತಿ, ಜಾತಿ ಧರ್ಮದಲ್ಲಿ ಹೊಡೆದಾಟ ನಡೆಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಬದಲಾವಣೆ ತರುವುದು ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್‌ ಬೆಂಬಲಿಸಿ. ಪ್ರಕಾಶ ಹುಕ್ಕೇರಿ ಜನಪರ ಕಳಕಳಿಯ ನಾಯಕರಾಗಿದ್ದಾರೆ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಶರ್ಮಾ ಮಾತನಾಡಿ, ಪ್ರಕಾಶ ಹುಕ್ಕೇರಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಅವರಿಗೂ ಕೂಡಾ ಶಿಕ್ಷಕರ ಸಮಸ್ಯೆಗಳು ಗೊತ್ತಿವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂದರು.

Advertisement

ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಉಮಾಶ್ರೀ, ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಜಿ.ನಂಜಯ್ಯನಮಠ, ಗಣೇಶ ಹುಕ್ಕೇರಿ ಮಾತನಾಡಿದರು.

ರಾಜೇಂದ್ರ ಭದ್ರನ್ನವರ, ಬಸವರಾಜ ಕುಮಸಗಿ, ದಯಾನಂದ ಪಾಟೀಲ, ಸತ್ಯಪ್ಪ ಮಗದುಮ, ಬಸವರಾಜ ಕೊಣ್ಣೂರ, ಶಂಕರ ಜಾಲಿಗಿಡದ, ರಾಜು ಭದ್ರನವರ, ಡಾ| ಎ.ಆರ್‌.ಬೆಳಗಲಿ, ಪ್ರವೀಣ ನಾಡಗೌಡ, ನಂದು ಪಾಟೀಲ, ಸಿದ್ದಪ್ಪ ಮೇಣಿ, ಮಲ್ಲಪ್ಪ ಸಿಂಗಾಡಿ. ಲಕ್ಷ್ಮಣ ದೇಸಾರಟ್ಟಿ, ಸಿದ್ದು ಕೊಣ್ಣೂರ, ಬಸವರಾಜ ಗುಡೋಡಗಿ, ರಾಹುಲ ಕಲಾಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next