Advertisement

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

07:26 PM Oct 13, 2024 | Team Udayavani |

ಮಂಗಳೂರು: ವಿಧಾನ ಪರಿಷತ್‌ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಕಾರ್ಯನಿರ್ವಹಿಸಲು, ಪ್ರಚಾರ ಕಾರ್ಯಗಳನ್ನು ಯಶಸ್ವಿಯಾಗಿ ನೋಡಿಕೊಳ್ಳಲು ಮತ್ತು ಕೆಪಿಸಿಸಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಉಭಯ ಜಿಲ್ಲೆಗಳಿಗೆ ಚುನಾವಣೆ ಉಸ್ತುವಾರಿಗಳನ್ನು ನಿಯೋಜಿಸಿದ್ದಾರೆ.

Advertisement

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮಗ್ರ ಉಸ್ತುವಾರಿಗಳಾಗಿದ್ದಾರೆ.

ದ.ಕ.ಜಿಲ್ಲೆಗೆ ಉಸ್ತುವಾರಿಗಳಾಗಿ ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್‌, ಶಾಸಕ ಅಶೋಕ್‌ ಕುಮಾರ್‌ ರೈ, ಮಾಜಿ ಶಾಸಕ ಜೆ.ಆರ್‌.ಲೋಬೊ, ಮಿಥುನ್‌ ರೈ, ರಕ್ಷಿತ್‌ ಶಿವರಾಂ, ಇನಾಯತ್‌ ಅಲಿ, ಜಿ.ಕೃಷ್ಣಪ್ಪ, ಉಸ್ತುವಾರಿ ಪದಾಧಿಕಾರಿಗಳಾಗಿ ಕೆಪಿಸಿಸಿ ಉಪಾಧ್ಯಕ್ಷ ಎಂ.ಸಿ.ವೇಣುಗೋಪಾಲ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್‌ ಹೆಗ್ಗಡೆ, ಜಿ.ಎ.ಬಾವ, ನಿವೇದಿತ್‌ ಆಳ್ವ, ಲಲಿತ್‌ ರಾಘವ್‌, ಜುಲ್ಫಿಕರ್‌ ಅಹಮದ್‌ ಖಾನ್‌, ಮಟಿಲ್ಡಾ ಡಿ’ಸೋಜಾ, ಪ್ರವೀಣ್‌ ಪೀಟರ್‌, ಜಿಲ್ಲಾ ಸಂಚಾಲಕರಾಗಿ ಪದ್ಮರಾಜ್‌ ಆರ್‌., ಕೆಪಿಸಿಸಿ ಕಾರ್ಯಾಧ್ಯಕ್ಷರ ಸಂಯೋಜಕರಾಗಿ ಬಿ.ಬಾಲರಾಜ್‌ ಅವರನ್ನು ನಿಯೋಜಿಸಲಾಗಿದೆ.

ಉಡುಪಿ ಜಿಲ್ಲೆಗೆ ಉಸ್ತುವಾರಿಗಳಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್‌ ಸೊರಕೆ, ಪರಿಷತ್‌ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಐವನ್‌ ಡಿ’ಸೋಜಾ, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಸುಕುಮಾರ ಶೆಟ್ಟಿ, ಎಂ.ದಿನೇಶ್‌ ಹೆಗ್ಡೆ, ಪ್ರಸಾದ್‌ರಾಜ್‌ ಕಾಂಚನ್‌, ಉದಯ ಶೆಟ್ಟಿ ಮುನಿಯಾಲು, ಉಸ್ತುವಾರಿ ಪದಾಧಿಕಾರಿಗಳಾಗಿ ಐವನ್‌ ಡಿ’ಸೋಜಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಗೌಡ, ಇನಾಯತ್‌ ಅಲಿ, ಮಿಥುನ್‌ ರೈ, ರಕ್ಷಿತ್‌ ಶಿವರಾಂ, ಲಾವಣ್ಯ ಬಲ್ಲಾಳ್‌, ಜಿಲ್ಲಾ ಸಂಚಾಲಕರಾಗಿ ಜಯಪ್ರಕಾಶ್‌ ಹೆಗ್ಡೆ, ಕೆಪಿಸಿಸಿ ಕಾರ್ಯಾಧ್ಯಕ್ಷರ ಸಂಯೋಜಕರಾಗಿ ಎಂ.ಎಸ್‌.ಮಹಮ್ಮದ್‌ ಅವರನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next