Advertisement

Viral Video: ನಿರೂಪಕಿ ಕತ್ತಿಗೆ ಬಲವಂತವಾಗಿ ಹಾರ ಹಾಕಿದ ನಟ; ಕಿರುಕುಳ ಎಂದ ನೆಟ್ಟಿಗರು

01:19 PM Sep 20, 2023 | Team Udayavani |

ಚೆನ್ನೈ: ಕಾರ್ಯಕ್ರಮ ನಡೆಸಿಕೊಡುತ್ತಿದ್ದ ನಿರೂಪಕಿ ಜೊತೆ ವೇದಿಕೆಯಲ್ಲಿ ಅನುಚಿತವಾಗಿ ವರ್ತಿಸಿದ ನಟನ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಕಾಲಿವುಡ್‌ ಸಿನಿಮಾರಂಗದ ಬಹುತೇಕ ಪ್ರೇಕ್ಷಕರಿಗೆ ಹಾಗೂ ಕಲಾವಿದರಿಗೆ ಕೂಲ್‌ ಸುರೇಶ್‌ ಅವರ ಗುರುತು ಪರಿಚಯವಿದೆ. ಯೂಟ್ಯೂಬ್ ನಲ್ಲಿ ಸಂಚಲನ ಸೃಷ್ಟಿಸಿರುವ ಸುರೇಶ್‌ ಮತ್ತೆ ಸುದ್ದಿಯಾಗಿದ್ದಾರೆ.

Advertisement

ಯಾರು ಈ ಕೂಲ್‌ ಸುರೇಶ್? ಕೆಲವರು ಥಿಯೇಟರ್‌ ನಲ್ಲಿ ಸಿನಿಮಾ ವೀಕ್ಷಿಸಿದ ಬಳಿಕ ಹೊರಗೆ ಬಂದು ನಾಲ್ಕೈದು ಡೈಲಾಗ್ಸ್‌ ಗಳನ್ನು ಹೊಡೆದು ಫೇಮಸ್‌ ಆಗುತ್ತಾರೆ. ಜನರ ಗಮನ ಸೆಳೆದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಾರೆ. ಅಂಥವರಲ್ಲಿ ಒಬ್ಬರು ಈ ಕೂಲ್‌ ಸುರೇಶ್.‌ ಸಿನಿಮಾವನ್ನು ನೋಡಿದ ಬಳಿಕ ಅದರ ಪಾಸಿಟಿವ್‌ – ನೆಗೆಟಿವ್‌ ಗಳನ್ನು ಒಂದು ಬಗೆಯಲ್ಲಿ ವ್ಯಂಗ್ಯವಾಗಿ ಹೇಳುವ ಸುರೇಶ್‌ ನಟ ಸಿಂಬು ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.

ಥಿಯೇಟರ್‌ ಮುಂದೆ ಸಿನಿಮಾಗಳ ಮಾತನಾಡಿಕೊಂಡೇ ಫೇಮಸ್‌ ಆದ ಸುರೇಶ್ ಇತ್ತೀಚೆಗಷ್ಟೇ ಸಿಂಬು ಅಭಿನಯದ ‘ಬಂದು ತಾನಿಂದು ಕಾದು’ ಚಿತ್ರಕ್ಕೆ ಮಾಡಿದ್ದ ಪ್ರಚಾರ ಮಾಡಿದ್ದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಇದನ್ನೂ ಓದಿ: Shivamogga: ಕಾಂಗ್ರೆಸ್ ನ ಗುಂಪುಗಾರಿಕೆಯೇ ಅವರ 100 ದಿನದ ಸಾಧನೆ : ಈಶ್ವರಪ್ಪ ಕಿಡಿ

ಅವರ ಖ್ಯಾತಿಯಿಂದಲೇ ಕಾಲಿವುಡ್‌ ಸಿನಿಮಾಗಳಾದ ‘ಕಾಖ ಕಾಖಾ’, ‘ಮಾಚಿ’ ಮತ್ತು ‘ಕಾದಲ್ ಅಜಿವತಿಲ್ಲೈ’ ಸಿನಿಮಾಗಳಲ್ಲಿ  ಕೂಲ್ ಸುರೇಶ್ ತಮಿಳು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಸಿಕೊಂಡಿದ್ದಾರೆ.

Advertisement

ಕೂಲ್‌ ಸುರೇಶ್‌ ಅವರನ್ನು ಅನೇಕ ಸಿನಿಮಾ ತಂಡದವರು ಪ್ರಚಾರ ಮಾಡಲು ಆಹ್ವಾನಿಸುತ್ತಾರೆ. ಬುಧವಾರ (ಸೆ.20 ರಂದು) ‘ಸರಕ್ಕುʼ ಎನ್ನುವ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ ವೇಳೆ ಅವರು ನಿರೂಪಕಿಯೊಂದಿಗೆ ವರ್ತಿಸಿದ ರೀತಿಗೆ ನೆಟ್ಟಿಗರು ಗರಂ ಆಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ನಿರೂಪಕಿ ವೇದಿಕೆಗೆ ಕೂಲ್‌ ಸುರೇಶ್‌ ಅವರನ್ನು ಆಹ್ವಾನಿಸಿದ್ದಾರೆ. ಈ ವೇಳೆ ಸುರೇಶ್‌ ತಮ್ಮ ಕೈಯಲ್ಲಿದ್ದ ಹಾರವನ್ನು ಏಕಾಏಕಿ ಬಲವಂತವಾಗಿ ನಿರೂಪಕಿಯ ಕತ್ತಿಗೆ ಹಾಕಿದ್ದಾರೆ. ಇದರಿಂದ ನಿರೂಪಕಿ ಎಲ್ಲರ ಎದುರು ಮುಜುಗರಕ್ಕೆ ಒಳಗಾಗಿದ್ದು,ಸಿಟ್ಟಾಗಿದ್ದಾರೆ. ಹಾರವನ್ನು ತೆಗೆದು ನಿರೂಪಕಿ ಬಿಸಾಕಿದ್ದಾರೆ.

ಆ ಬಳಿಕ ಈ ಸಮಾರಂಭದಲ್ಲಿ ನಿರೂಪಕಿಯ ಕೆಲಸವನ್ನು ಪ್ರಶಂಸಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಮಜುಗರದ ಸನ್ನಿವೇಶವನ್ನು ಅರಿತುಕೊಂಡ ನಟ ಮನ್ಸೂರ್ ಅಲಿಖಾನ್ ವೇದಿಕೆಗೆ ಬಂದು ಸುರೇಶ್ ಅವರ ಪರವಾಗಿ ನಿರೂಪಕಿ ಬಳಿ ಕ್ಷಮೆಯಾಚಿಸಿದ್ದಾರೆ. ಸುರೇಶ್‌ ಅವರ ಬಳಿ ಕ್ಷಮೆ ಕೇಳುವಂತೆ ಕೇಳಿದ್ದಾರೆ. ಆದರೆ ಸುರೇಶ್‌ ಕ್ಷಮೆ ಕೇಳುವ ಬದಲು ನಾನು ಇದನ್ನು  ‘ಕಂಟೆಂಟ್’ಗಾಗಿ ಮಾಡಿದ್ದೇನೆ ಎಂದಿದ್ದಾರೆ.

ಕೂಲ್ ಸುರೇಶ್ ಅವರ ಈ ವರ್ತನೆಗೆ ನೆಟ್ಟಿಗರು ಗರಂ ಆಗಿದ್ದು, ಇದು ನಿಂದನೆ ಮತ್ತು ಕಿರುಕುಳ ಎಂದು ನಟನ ವರ್ತನೆಯನ್ನು ಖಂಡಿಸಿದ್ದಾರೆ.

ಇನ್ನು ಮುಂದೆ ಇಂತಹ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸಬೇಡಿ ಎಂದು ಹಲವು ಬಳಕೆದಾರರು ಮತ್ತು ಪತ್ರಕರ್ತರು ಸಿನಿಮಾ ನಿರ್ಮಾಪಕರಿಗೆ ಮನವಿ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.