ನವದೆಹಲಿ : ರಸ್ತೆಯಲ್ಲಿ ನಡೆದಾಡುವಾಗ ಅಥವಾ ರಸ್ತೆ ದಾಟುವಾಗ ಎಷ್ಟೇ ಎಚ್ಚರವಾಗಿದ್ದರೂ ಅದು ಕಡಿಮೆಯೇ… ಆದರೂ ನಮ್ಮ ಜಾಗೃತೆಯಲ್ಲಿ ನಾವು ಇರುವುದು ಅತೀ ಮುಖ್ಯ.
ಮುಖ್ಯ ರಸ್ತೆಯಲ್ಲಿ ದೊಡ್ಡ ದೊಡ್ಡ ವಾಹನಗಳು ನಿಂತ್ತಿದ್ದ ವೇಳೆ ಅದರ ಪಕ್ಕದಲ್ಲಿ ರಸ್ತೆ ದಾಟುವ ಕೆಲಸ ಎಂದೂ ಮಾಡದಿರಿ ಯಾಕೆಂದರೆ ಈ ರೀತಿ ರಸ್ತೆ ದಾಟಲು ಹೋಗಿ ದೆಹಲಿಯಲ್ಲಿ ಮಹಿಳೆಯೊಬ್ಬರು ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ.
ಈ ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ, ವಿಡಿಯೋ ಕಂಡಾಗ ಒಮ್ಮೆ ಮೈ ಜುಂ ಎನ್ನುತ್ತೆ,
ದೆಹಲಿಯ ಕರೋಲ್ ಬಾಗ್‌ನಲ್ಲಿರುವ ಕಾಲ್ ಸೆಂಟರ್ ಒಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯೊಬ್ಬರು ತನ್ನ ಕಚೇರಿಯ ಪಕ್ಕದಲ್ಲೇ ಇರುವ ಮುಖ್ಯ ರಸ್ತೆ ದಾಟಬೇಕಿತ್ತು ಅದರಂತೆ ರಸ್ತೆ ದಾಟಲು ಬಂದ ವೇಳೆ ರಸ್ತೆಯಲ್ಲಿ ನಿಂತಿದ್ದ ಬಸ್ಸಿನ ಎದುರು ರಸ್ತೆ ದಾಟಲು ಹೋಗಿದ್ದಾರೆ, ಬಸ್ಸು ಚಾಲಕನಿಗೆ ಮಹಿಳೆ ಬಸ್ಸಿನ ಎದುರು ಬಂದಿದ್ದು ಕಾಣಲಿಲ್ಲ, ಅದೇ ಸಮಯಕ್ಕೆ ಬಸ್ಸು ಸಂಚರಿಸಿದೆ ಈ ವೇಳೆ ರಸ್ತೆ ಬದಿ ನಿಂತಿದ್ದ ಹಲವು ಮಂದಿ ಬಸ್ಸಿನ ಚಾಲಕನಿಗೆ ಬಸ್ಸು ನಿಲ್ಲಿಸುವಂತೆ ಹೇಳುವಷ್ಟರಲ್ಲಿ ಮಹಿಳೆ ಬಸ್ಸಿನಡಿಗೆ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅತ್ತ ಚಾಲಕನಿಗೆ ವಿಚಾರ ಗೊತ್ತಾಗಿ ಇನ್ನೇನು ತನ್ನ ಮೇಲೆ ಅಲ್ಲಿನ ಜನ ಹಲ್ಲೆ ಮಾಡುತ್ತಾರೆಂದು ಮನಗಂಡ ಬಸ್ ಚಾಲಕ ಹಾಗೂ ನಿರ್ವಾಹಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಎಚ್ಚರಿಕೆ ಅಗತ್ಯ : ರಸ್ತೆ ದಾಟುವಾಗ ಹೆಚ್ಚಾಗಿ ರಸ್ತೆ ಅಪಘಾತಗಳು ನಡೆಯುತ್ತವೆ ಅದರಲ್ಲೂ ದೊಡ್ಡ ದೊಡ್ಡ ವಾಹನಗಳು ಸಿಗ್ನಲ್ ನಲ್ಲಿ ನಿಂತ್ತಿದ್ದ ವೇಳೆ ರಸ್ತೆ ದಾಟುವಾಗ ವಾಹನದ ಹತ್ತಿರ ರಸ್ತೆ ದಾಟಲು ಹೋಗದಿರಿ ಯಾಕೆಂದರೆ ದೊಡ್ಡ ದೊಡ್ಡ ವಾಹನಗಳಲ್ಲಿ ಚಾಲಕರಿಗೆ ಎದುರು ಭಾಗದಲ್ಲಿ ಯಾರಿದ್ದಾರೆ ಎಂಬುದು ಕಾಣುವುದಿಲ್ಲ, ಹಾಗಾಗಿ ರಸ್ತೆ ದಾಟುವಾಗ ಎಚ್ಚರ ವಹಿಸುವುದು ಅತೀ ಅಗತ್ಯ.
ಸಪ್ನಾ ಯಾದವ್ ಘಟನೆಯಲ್ಲಿ ಸಾವನ್ನಪ್ಪಿದ ಮಹಿಳೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಸ್ ಚಾಲಕನ ಪತ್ತೆಗೆ ಬಲೆ ಬಿಸಿದ್ದಾರೆ.