ಹರಿದ್ವಾರದಲ್ಲಿ ನಗರ ಪ್ರದೇಶಗಳಿಗೆ ಕಾಡಾನೆಗಳು ನುಗ್ಗುವ ಪ್ರಯತ್ನ ಇನ್ನೂ ಕಡಿಮೆಯಾಗಿಲ್ಲ, ಬುಧವಾರ ರೋಶನಾಬಾದ್‌ನ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ಕಾಡಾನೆಯೊಂದು ಏಕಾಏಕಿ ನುಗ್ಗಿ ಆತಂಕ ಸೃಷ್ಟಿಯಾಯಿತು.
ಸಮೀಪದ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದಿಂದ ಹರಿದ್ವಾರ ನ್ಯಾಯಾಲಯದ ಆವರಣಕ್ಕೆ ನುಗ್ಗಿದ ಕಾಡಾನೆ ಅಲ್ಲಿದ್ದ ಜನರಲ್ಲಿ ಸಂಚಲನ ಮೂಡಿಸಿತ್ತು. ಹರಿದ್ವಾರದ ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ತಲುಪಿದ ಕಾಡಾನೆ. ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ಮೂಲಕ ಹಾದು ಹೋಗಿ ನ್ಯಾಯಾಲಯದ ಮುಖ್ಯ ದ್ವಾರದವರೆಗೆ ಸಾಗಿ ಕೋರ್ಟ್ ಸಂಕೀರ್ಣ ಪ್ರವೇಶಿಸಿದೆ.
ಕೂಡಲೇ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಹೇಗೋ ಕಾಡಿನತ್ತ ಓಡಿಸಿದ್ದಾರೆ. ಹಗಲಿನಲ್ಲಿ ನ್ಯಾಯಾಲಯ ಹಾಗೂ ಕಲೆಕ್ಟರೇಟ್ ಆವರಣದಲ್ಲಿ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿರುವ ಕಾರಣ ಹೆಚ್ಚಿನ ಜನರು ಈ ಪ್ರದೇಶದಲ್ಲಿ ತಿರುಗಾಡುತ್ತಿರುತ್ತಾರೆ. ಆದರೂ ಆನೆ ಯಾರಿಗೂ ಹಾನಿ ಮಾಡದಿರುವುದು ಅದೃಷ್ಟವೇ ಸರಿ.