Advertisement
“ಚಂಡಮಾರುತ, ಬಿರುಗಾಳಿಯಿಂದ ಡೆತ್ ವ್ಯಾಲಿ ನ್ಯಾಷನಲ್ ಪಾರ್ಕ್‌ನಲ್ಲಿ ಭಾರಿ ಹಾನಿಯಾಗಿದೆ,’ ಎಂದು ಪಾರ್ಕ್‌ನ ಅಧಿಕಾರಿಗಳು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಅಲ್ಲದೇ ಬ್ಯಾಡ್‌ವಾಟರ್ ಬೇಸಿನ್ ಮೂಲಕ ಪರ್ವತದಿಂದ ಹರಿಯುತ್ತಿರುವ ಮಣ್ಣು ಮಿಶ್ರಿತ ಜಲಪಾತದ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
“ಡೆತ್ ವ್ಯಾಲಿ’ಯನ್ನು ಭೂಮಿ ಮೇಲಿನ ಅತ್ಯಂತ ಉಷ್ಣ ಪ್ರದೇಶ ಎಂದು ಕರೆಯಲಾಗುತ್ತದೆ. ಇಲ್ಲಿ ಗರಿಷ್ಠ ತಾಪಮಾನ 56.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಈವರೆಗೂ ವಿಶ್ವದಲ್ಲಿ ದಾಖಲಾಗಿರುವ ಗರಿಷ್ಠ ತಾಪಮಾನವಾಗಿದೆ. ಈ ಪ್ರದೇಶದಲ್ಲಿ ಅತ್ಯಂತ ಕಡಿಮೆ ಮಳೆ-ವಾರ್ಷಿಕ 2.2 ಇಂಚು ಮಳೆ ಬೀಳುತ್ತದೆ. ಆದರೆ ಚಂಡಮಾರುತದ ಕಾರಣ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಭಾರಿ ಮಳೆ ಸುರಿದಿದೆ.
Related Articles
Advertisement