Advertisement

Video Viral: ಬಿಜೆಪಿ ಸಂಸದ ಸ್ಪರ್ಧೆಯಿಂದ ಹಿಂದಕ್ಕೆ!

12:58 AM Mar 05, 2024 | Team Udayavani |

ಬಾರಾಬಂಕಿ:  ಬಾರಾಬಂಕಿ ಸಂಸದ ಉಪೇಂದ್ರ ಸಿಂಗ್‌ ರಾವತ್‌ ಅವರ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹೀಗಾಗಿ ಅವರು ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಸೋಮವಾರ ಪಶ್ಚಿಮ ಬಂಗಾಲದ ಅಸಾನ್‌ಸೋಲ್‌ ಕ್ಷೇತ್ರದಿಂದ ಬಿಜೆಪಿ ಯಿಂದ ಸ್ಪರ್ಧಿಸಲು ಟಿಕೆಟ್‌ ಗಿಟ್ಟಿಸಿಕೊಂಡಿದ್ದ ಭೋಜಪುರಿ ಗಾಯಕ, ನಟ ಪವನ್‌ ಸಿಂಗ್‌ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದರು.

Advertisement

ವೀಡಿಯೋ ಬಗ್ಗೆ ಸಂಸದ ಉಪೇಂದ್ರ, “ಕೃತಕ ಎಐ ತಂತ್ರ ಜ್ಞಾನ ಬಳಸಿ ನಕಲಿ ವೀಡಿಯೋ ಸೃಷ್ಟಿಸಿ, ವೈರಲ್‌ ಮಾಡ ಲಾಗಿದೆ. ಅದರ ವಿರುದ್ಧ ದೂರು ನೀಡಿದ್ದೇನೆ. ನಿರಪರಾಧಿ ಎಂದು ಸಾಬೀತಾಗುವವರೆಗೂ ಯಾವುದೇ ಚುನಾವಣೆ ಯಲ್ಲಿ ಸ್ಫರ್ಧಿಸುವುದಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next