ಉತ್ತರ ಪ್ರದೇಶ: ಸುಮಾರು ಅರ್ಧ ಗಂಟೆ ಕಾಲ ಲಿಫ್ಟ್‌ನಲ್ಲಿ ಸಿಲುಕಿದ ಮೂವರು ಪುಟ್ಟ ಮಕ್ಕಳು ತಮ್ಮ ಜೀವನದ ಭಯಾನಕ ಸನ್ನಿವೇಶವನ್ನು ಅನುಭವಿಸಿದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.
8-10 ವರ್ಷ ವಯಸ್ಸಿನ ಹುಡುಗಿಯರು ಗಾಜಿಯಾಬಾದ್‌ನ ಕ್ರಾಸಿಂಗ್ ರಿಪಬ್ಲಿಕ್ ಟೌನ್‌ಶಿಪ್‌ನಲ್ಲಿರುವ ಅಸೋಟೆಕ್ ದಿ ನೆಸ್ಟ್ ಸೊಸೈಟಿಯ ಲಿಫ್ಟ್ ನಲ್ಲಿ ಸುಮಾರು 25 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು.
ಈ ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಮೂವರು ಬಾಲಕಿಯರು ಲಿಫ್ಟ್‌ನಲ್ಲಿ ಸಿಲುಕಿಕೊಂಡು ಒದ್ದಾಡುವ ದೃಶ್ಯ ಸೆರೆಯಾಗಿದೆ. ಈ ಮಕ್ಕಳು ತಮ್ಮ ಬಾಲ್ಯದ ಅತ್ಯಂತ ಭಯಾನಕ ಸನ್ನಿವೇಶ ವನ್ನು ಅನುಭವಿಸಿದ್ದಾರೆ. ಆ ಮೂವರು ಹುಡುಗಿಯರಲ್ಲಿ ಒಬ್ಬರು ತುರ್ತು ಸೇವೆಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ ಮತ್ತು ಇತರ ಇಬ್ಬರು ಸ್ನೇಹಿತರು ಆಕೆಯನ್ನು ಸಮಾಧಾನಪಡಿಸುತ್ತಿದ್ದರು.
ಈ ಭಯಾನಕ ಘಟನೆಯ ನಂತರ, ಮಕ್ಕಳ ಪೋಷಕರು ಸೊಸೈಟಿಯ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಪದಾಧಿಕಾರಿಗಳು ಮತ್ತು ನಿರ್ವಹಣಾ ಕಂಪನಿಯ ವಿರುದ್ಧ ದೂರು ದಾಖಲಿಸಿದ್ದರು, ಕಳಪೆ ನಿರ್ವಹಣೆಯಿಂದ ಲಿಫ್ಟ್ ಒಡೆದುಹೋಗಿದೆ ಎಂದು ಆರೋಪಿಸಿದ್ದಾರೆ.