ಲಕ್ನೋ: ಸಾಮಾನ್ಯವಾಗಿ ಆಸ್ಪತ್ರೆಗೆ ನಾವು ರೋಗಿಗಳ ಭೇಟಿಗೆ ಹೋಗುವಾಗ ಕೆಲವೊಂದು ನಿಯಮಗಳಿರುತ್ತವೆ. ಒಮ್ಮೆಗೆ ಸೀದಾ ನಾವು ಭೇಟಿ ಮಾಡಲು ವಾರ್ಡ್ ಗಳಿಗೆ ಹೋಗಲು ಆಗದಿರುವ ನಿಯಮಗಳು ಕೆಲ ಆಸ್ಪತ್ರೆಯಲ್ಲಿರುತ್ತವೆ. ಆದರೆ ಇಲ್ಲೊಂದು ಆಸ್ಪತ್ರೆಯೊಳಗೆ ಬೀದಿ ನಾಯಿಯೊಂದು ರಾಜಾರೋಷವಾಗಿ ತಿರುಗಾಡಿದೆ.
ನಾಯಿಯೊಂದು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಆಹಾರ ತಿನ್ನುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಾಯಿಯೊಂದು ಆಸ್ಪತ್ರೆಯೊಳಗೆ ಬಂದಿರುವುದು ಮಾತ್ರವಲ್ಲದೆ ರೋಗಿಯೊಬ್ಬರ ಬೆಡ್ ಪಕ್ಕಕ್ಕೆ ಬಂದು ಆಹಾರ ಮತ್ತು ಹಾಲು ಸೇವಿಸಿದೆ. 30 ಸೆಕೆಂಡ್ ಗಳ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೊರಾದಾಬಾದ್‌ನ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ (CMO) ಗೆ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ
“ವಿಡಿಯೋ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರ (CMS) ನೇತೃತ್ವದಲ್ಲಿ ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ಆಸ್ಪತ್ರೆಯ ವಾರ್ಡ್‌ಗೆ ಯಾವುದೇ ಪ್ರಾಣಿ ಪ್ರವೇಶಿಸದಂತೆ ನೋಡಿಕೊಳ್ಳಿ ಎಂದು ನಾನು ಅವರ ಬಳಿ ಹೇಳಿದ್ದೇನೆ ಸಿಎಂಒ ಡಾ. ಕುಲದೀಪ್ ಸಿಂಗ್ ಅವರು ಹೇಳಿದ್ದಾರೆ.