ಬೀಜಿಂಗ್: ಚೀನದ ಹೆನಾನ್ ಪ್ರಾಂತ್ಯದ ರಾಜಧಾನಿ ಝೆಂಗ್ಝೌ ನಲ್ಲಿ ಇರುವ ಐಫೋನ್ ತಯಾರಿಕಾ ಘಟಕದಿಂದ ಹತ್ತು ಮಂದಿ ಕಾರ್ಮಿಕರು ಪರಾರಿಯಾಗಿದ್ದಾರೆ.
ಒಂದು ವಾರದ ಅವಧಿಯಲ್ಲಿ ಈ ನಗರದಲ್ಲಿ 167 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದರಿಂದ ಅಲ್ಲಿ ಸ್ಥಳೀಯ ಅಧಿಕಾರಿಗಳು ಪ್ರತಿಬಂಧಕ ಕ್ರಮಗಳನ್ನು ಜಾರಿಗೊಳಿಸಿದದ್ದಾರೆ.
ಇದರಿಂದ ಭೀತಿಗೊಂಡ ಘಟಕದ ಕಾರ್ಮಿಕರು ಕಾಲ್ಕಿತ್ತಿದ್ದಾರೆ.
10 ಕಾರ್ಮಿಕರು ತರಾತುರಿಯಲ್ಲಿ ಘಟಕದಿಂದ ಹೊರಗೆ ಓಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇಸುಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯ ಉದ್ಯೋಗಿಗಳನ್ನು ಕಾರ್ಖಾನೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ.
Related Articles
ಈ ಘಟಕ ಚೀನಾದ ಪ್ರಮುಖ ಕಾರ್ಖಾನೆಗಳಲ್ಲಿ ಒಂದಾಗಿದ್ದು, ಘಟಕದಲ್ಲಿ ಸುಮಾರು ಎರಡು ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಕಠಿಣ ನಿಯಮಗಳ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಐಫೋನ್ ತಯಾರಿಕೆಯಲ್ಲಿ ಶೇ.30ರಷ್ಟು ಕುಸಿತಕ್ಕೆ ಕಾರಣವಾಗಲಿದೆ ಎಂದು ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ, ಬಿಗಿ ನಿಯಮದಿಂದಾಗಿ ಶಾಂಘೈನಲ್ಲಿರುವ ಡಿಸ್ನಿ ರೆಸಾರ್ಟ್ ಅನ್ನೂ ಮುಚ್ಚಲಾಗಿದೆ.