ಮೆಕ್ಸಿಕೋ : ಉತ್ತರ-ಮಧ್ಯ ಮೆಕ್ಸಿಕೋದ ಝಕಾಟೆಕಾಸ್ ರಾಜ್ಯದಲ್ಲಿ ಬೀದಿ ನಾಯಿಯೊಂದು ಮಾನವನ ತಲೆಯನ್ನು ತನ್ನ ಬಾಯಿಯಲ್ಲಿ ಹೊತ್ತುಕೊಂಡು ಹೋಗುತ್ತಿರುವ ಭಯಾನಕ ದೃಶ್ಯವೊಂದು ಕಂಡುಬಂದಿದೆ. ಈ ಘಟನೆ ಕಂಡು ನಗರದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.
ಘಟನೆಗೆ ಸಂಬಂಧಿಸಿ ಪೊಲೀಸರ ತಂಡ ನಾಯಿಯ ಬಾಯಿಯಿಂದ ಮಾನವ ತಲೆಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಬುಧವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ತಂಡವೊಂದು ಕೊಲೆಗೈದು ತಲೆ ಮತ್ತು ದೇಹದ ಇತರ ಭಾಗಗಳನ್ನು ಮಾಂಟೆ ಎಸ್ಕೊಬೆಡೊ ಡೌನ್‌ಟೌನ್‌ನಲ್ಲಿರುವ ಸ್ವಯಂಚಾಲಿತ ಟೆಲ್ಲರ್ ಬೂತ್‌ನಲ್ಲಿ ಎಸೆಯಲಾಯಿತು ಈ ವಿಚಾರ ಪೊಲೀಸ್ ಅಧಿಕಾರಿಗಳಿಗೆ ತಿಳಿದಿತ್ತು ಆದರೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳುವ ಮುನ್ನವೇ ಬೀದಿ ನಾಯಿ ಮನುಷ್ಯನ ರುಂಡವನ್ನು ಕಚ್ಚಿ ಓಡಿ ಹೋಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಾಯಿ ಮಾನವನ ತಲೆಯನ್ನು ಬಾಯಲ್ಲಿ ಹಿಡುಹೋಗುತ್ತಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಮೆಕ್ಸಿಕೋದಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದ್ದು, ದುಷ್ಕರ್ಮಿಗಳ ಗುಂಪು ಇಂತಹ ಕೃತ್ಯಗಳನ್ನು ಇಲ್ಲಿ ಎಸಗುತ್ತಿರುತ್ತವೆ ಅಲ್ಲದೆ ಜನರನ್ನು ಹೆದರಿಸಲು ಈ ರೀತಿಯಲ್ಲಿ ಕೊಲೆ ಮಾಡಿ ಎಸೆಯಲಾಗಿದೆ. ಈ ವೇಳೆ ಬೀದಿ ನಾಯಿಯೊಂದು ಮನುಷ್ಯನ ರುಂಡವನ್ನು ಹಿಡಿದು ಬೀದಿ ತುಂಬಾ ಓಡಾಡಿ ಜನರಲ್ಲಿ ಭಯ ಹುಟ್ಟಿಸಿದೆ ಎನ್ನಲಾಗಿದೆ.
ಇದನ್ನೂ ಓದಿ : ತಮಿಳುನಾಡಿನಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ: ಎಂಟು ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ
ಇನ್ನೊಂದು ವಿಚಾರದಲ್ಲಿ ಹಿಂಸಾಚಾರ ಪೀಡಿತ ನೈಋತ್ಯ ರಾಜ್ಯವಾದ ಗೆರೆರೊದಲ್ಲಿ ಎರಡು ಪ್ರತಿಸ್ಪರ್ಧಿ ಗ್ಯಾಂಗ್‌ಗಳ ನಡುವಿನ ಹೋರಾಟದಲ್ಲಿ ಮೇಯರ್ ಮತ್ತು ಮಾಜಿ ಮೇಯರ್ ಸೇರಿದಂತೆ 18 ಮಂದಿ ಸಾವನ್ನಪ್ಪಿದರು. ಈ ಘಟನೆ ಕಳೆದ ತಿಂಗಳು ನಡೆದಿತ್ತು. “ಕ್ರಿಮಿನಲ್ ಗ್ಯಾಂಗ್‌ಗಳ ನಡುವಿನ ವಿವಾದದ ಸಂದರ್ಭದಲ್ಲಿ ಈ ಕೊಲೆಯೂ ನಡೆದಿರಬಹುದು” ಎಂದು ಮೆಕ್ಸಿಕೊದ ಉಪ ಭದ್ರತಾ ಸಚಿವ ರಿಕಾರ್ಡೊ ಮೆಜಿಯಾ ಹೇಳಿದ್ದಾರೆ.