Advertisement

ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ: ಆರೋಪಿ ಬಂಧನ

10:56 PM Aug 05, 2023 | Team Udayavani |

ಮಂಗಳೂರು: ಯುವಕನೋರ್ವ ನೆರೆಮನೆಯವರ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ನಡೆಸಿದ ಘಟನೆ ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕೆಮ್ರಾಲ್‌ ಹೊಸಕಾಡು ಎಂಬಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Advertisement

ಸುಮಂತ್‌ ಪೂಜಾರಿ (22) ಬಂಧಿತ ಆರೋಪಿ. ಈತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

ನೆರೆಮನೆಯ ಪ್ರಜ್ವಲ್‌ ಆ. 2ರಂದು ರಾತ್ರಿ ಸುಮಾರು 11.30ಕ್ಕೆ ಶೌಚಾಲಯಕ್ಕೆ ಹೋದಾಗ ಅಲ್ಲಿ ಮೊಬೈಲ್‌ ಸಿಕ್ಕಿತು. ಮೊಬೈಲ್‌ನ ಮುಖಾಂತರ ಅದು ನೆರಮನೆಯ ಸುಮಂತ್‌ನದ್ದು ಎಂಬುದು ಗೊತ್ತಾಗಿತ್ತು. ಈ ಬಗ್ಗೆ ಶುಕ್ರವಾರ ಪ್ರಜ್ವಲ್‌ ಮೂಲ್ಕಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಹಿಳೆಯರ ವೀಡಿಯೋ ಉದ್ದೇಶ
“ನನ್ನ ತಾಯಿ, ಸಹೋದರಿಯರು ಸೇರಿದಂತೆ ಮನೆಮಂದಿಯ ವೀಡಿಯೋ ಚಿತ್ರೀಕರಣ ನಡೆಸುವ ಉದ್ದೇಶ ಆರೋಪಿ ಸುಮಂತ್‌ಗೆ ಇತ್ತು’ ಎಂಬುದಾಗಿ ಪ್ರಜ್ವಲ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿಯ ಮೊಬೈಲ್‌ ಅನ್ನು ಪರಿಶೀಲಿಸಿದಾಗ ಅದರಲ್ಲಿ 18 ಸೆಕೆಂಡಿನ ಒಂದು ವೀಡಿಯೋ ಮಾತ್ರವಿತ್ತು. ಮೊಬೈಲ್‌ ಸ್ವಾಧೀನಪಡಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ತಿಳಿಸಿದ್ದಾರೆ.

Advertisement

“ಸಂಘಟನೆಯ ಮಾಹಿತಿ ಇಲ್ಲ’
ಆರೋಪಿ ಸುಮಂತ್‌ ಯಾವುದೇ ಸಂಘಟನೆಯಲ್ಲಿ ಇರುವುದು ನಿಖರ ಮಾಹಿತಿ ಇಲ್ಲ. ಆತ 10ನೇ ತರಗತಿ ಓದಿದ್ದು, ಕಟ್ಟಿಗೆಯ ಕೆಲಸ ಮಾಡಿಕೊಂಡಿದ್ದ. ಆತ ತನ್ನ ಕೃತ್ಯ ಮತ್ತು ಉದ್ದೇಶವನ್ನು ಒಪ್ಪಿಕೊಂಡಿದ್ದಾನೆ.

ಆರೋಪಿ ವಿರುದ್ಧ ಐಪಿಸಿ 354ಸಿ ಮತ್ತು ಐಟಿ ಕಾಯಿದೆ 66ಇ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಆಯುಕ್ತರು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next