Advertisement

ಜೀಪ್‌ಗೆ ಕಟ್ಟಿ ಶಿಕ್ಷೆ ನೀಡಿದ ಭದ್ರತಾ ಪಡೆ; ಕಾಶ್ಮೀರದ Viral Video

03:37 PM Apr 14, 2017 | |

ಶ್ರೀನಗರ: ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕ ಹಿಂಸಾಚಾರ ವರದಿಯಾಗಿದ್ದು, ಈ ವೇಳೆ ಭದ್ರತಾ ಸಿಬಂದಿಗಳು ವ್ಯಕ್ತಿಯೊಬ್ಬನನ್ನು ಜೀಪ್‌ನ ಬಾನೆಟ್‌ಗೆ ಕಟ್ಟಿ ಶಿಕ್ಷಿಸಿರುವ ವಿಡಿಯೋ ವೊಂದು ವೈರಲ್‌ ಆಗಿದ್ದು , ಸೇನೆಯ ಈ ಕ್ರಮದ ಕುರಿತಾಗಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. 

Advertisement

ಜಮ್ಮ ಮತ್ತು ಕಾಶ್ಮೀರದ ವಿಪಕ್ಷ ಎನ್‌ಸಿ ನಾಯಕ ಓಮರ್‌ ಅಬ್ದುಲ್ಲಾ ಈ ವಿಡಿಯೋ ಟ್ವೀಟ್‌ ಮಾಡಿ  ಕಲ್ಲು ತೂರಾಟ ನಡೆಸುವವರಿಗೆ ಈ ಪರಿಯ ಶಿಕ್ಷೆ ನೀಡಲಾಗುತ್ತದೆ ಎಂಬ ಘೋಷಣೆಗಳು ಕೇಳಿ ಬಂದಿವೆ. ಕೂಡಲೇ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. 

ವಿಡಿಯೋದಲ್ಲಿ ಕಂಡು ಬಂದಿರುವಂತೆ  ಸಿಆರ್‌ಪಿಎಫ್ ನ ಜೀಪ್‌ನಲ್ಲಿ ವ್ಯಕ್ತಿಯನ್ನು ಕೈ ಕಾಲು ಕಟ್ಟಿ ಕೂರಿಸಿ ಸೇನಾ ಪಡೆಗಳ ಬೆಂಗಾವಲಿನೊಂದಿಗೆ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗಿದೆ.ಸೇನಾ ಪಡೆಗಳು ಮಾನವ ಹಕ್ಕು ಉಲ್ಲಂಘನೆ ನಡೆಸಿ ವ್ಯಕ್ತಿಯೊಬ್ಬನನ್ನು ಶಿಕ್ಷಿಸಿವೆ ಎಂಬ ಕೂಗು ಕೇಳಿ ಬಂದಿದೆ.

ಮಾಧ್ಯಮಗಳ ವರದಿಯಂತೆ ಸೇನೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next