Advertisement

ಕೊಡಗು ಬಾಲಕನ ಕೂಗು ವೈರಲ್‌

06:00 AM Jul 15, 2018 | |

ಮಡಿಕೇರಿ: ಧಾರಾಕಾರ ಮಳೆಯಿಂದ ಕೊಡಗು ಕೊಚ್ಚಿ ಹೋಗುವಂತಹ ಪರಿಸ್ಥಿತಿ ಇದೆ. ಕಾವೇರಿ ನದಿ ನೀರಿನ ಲಾಭ ಪಡೆಯುವ ನೀವು, ಹಾಲು ನೀಡಿದ ತಾಯಿಯಂತಿರುವ ಕೊಡಗು ಜಿಲ್ಲೆಯನ್ನು ಬಜೆಟ್‌ನಲ್ಲಿ ನಿರ್ಲಕ್ಷಿಸಿದ್ದೀರಿ ಎಂದು 8ನೇ ತರಗತಿಯ ವಿದ್ಯಾರ್ಥಿಯೊಬ್ಬ ವಿಡಿಯೋ ಮಾಡಿ ವೈರಲ್‌ ಮಾಡಿ ಮುಖ್ಯಮಂತ್ರಿಗಳ ಮನಮುಟ್ಟುವಂತೆ ಮಾಡಿರುವ ಪ್ರಸಂಗ ನಡೆದಿದೆ.

Advertisement

ನಿತ್ಯ ಮಳೆಯಿಂದ ಕೊಡಗು ತತ್ತರಿಸಿದ್ದು, ಕೊಡಗಿನ ಜನಸಾಮಾನ್ಯರು, ಕೃಷಿಕರು ಹಾಗೂ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಒಳಗಾಗಿರುವುದನ್ನು ಅಷ್ಟೇ ಪರಿಣಾಮಕಾರಿಯಾಗಿ ಎಮ್ಮೆಮಾಡಿನ ನದಿಪಾತ್ರದಲ್ಲಿ ನಿಂತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿರುವ ಬಾಲಕ “ಫ‌ತಾ’ ಈಗ ಸುದ್ದಿಯಲ್ಲಿದ್ದಾನೆ.

ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಎಮ್ಮೆಮಾಡಿನಲ್ಲಿ, ಕಾವೇರಿ ನದಿಯ ಪ್ರವಾಹದಿಂದ ಆವೃತ್ತ ಗದ್ದೆ ಬಯಲಿನ ಬಳಿ ಕೊಡೆ ಹಿಡಿದು ನಿಂತು, ಕೊಡಗಿನ ಮಳೆ, ಅದರಿಂದ ಆಗಿರುವ ಹಾನಿ, ಸರ್ಕಾರ, ಜನಪ್ರತಿನಿಧಿಗಳ ನಿಷ್ಕಾಳಜಿಯ ಬಗ್ಗೆ ನಿರರ್ಗಳವಾಗಿ ಮಾತನಾಡಿರುವ ಬಾಲಕನ ವಿಡಿಯೋ ಇದೀಗ ಬಹುತೇಕ ದೃಶ್ಯ ವಾಹಿನಿಗಳಲ್ಲಿ ಚರ್ಚಿತ ವಿಷಯವಾಗಿದೆ.

ಎಮ್ಮೆಮಾಡಿನ ಫ‌ತಾ, “ಭಾರೀ ಮಳೆಯಿಂದ ಕೊಡಗು ಸಂಕಷ್ಟಕ್ಕೆ ಸಿಲುಕಿದರೂ, ಇಲ್ಲಿನ ಕಾವೇರಿ ನದಿ ಮೈಸೂರು, ಮಂಡ್ಯ,ಬೆಂಗಳೂರು ಸೇರಿ ನೆರೆಯ ತಮಿಳುನಾಡು ರಾಜ್ಯಕ್ಕೆ ನೀರುಣಿಸುತ್ತಿದೆ. ಹೀಗಿದ್ದೂ, ತನ್ನೆದೆಯ ಹಾಲುಣಿಸುತ್ತಿರುವ ಕಾವೇರಿಯ ನಾಡಿನತ್ತ ಆಡಳಿತ ವ್ಯವಸ್ಥೆ ಸ್ಪಂದಿಸದಿರುವ ಬಗ್ಗೆ ಬಾಲಕ ವಿಷಾದ ವ್ಯಕ್ತಪಡಿಸಿದ್ದಾನೆ.

ಕಾಡಾನೆಗಳ ಉಪಟಳದಿಂದ ಕೃಷಿಕ ಬೇಸತ್ತಿದ್ದಾನೆ. ಕಾರ್ಮಿಕರು ಕೆಲಸ ನಿರ್ವಹಿಸಲಾಗದ ಸ್ಥಿತಿ ಇದೆ.ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯವರು ತಮ್ಮ ಬಜೆಟ್‌ನಲ್ಲಿ ಕೊಡಗಿಗೆ ಅಗತ್ಯ ನೆರವನ್ನು ಒದಗಿಸದಿರುವುದು ಬೇಸರದ ವಿಚಾರವೆಂದು ಫ‌ತಾ ಹೇಳಿಕೊಂಡಿದ್ದಾನೆ.

Advertisement

ಬಿಎಸ್‌ವೈಗೂ ಕಿವಿ ಮಾತು: ನೀವು ವಿಧಾನಸಭೆಯ ಒಳಗೆ ಮತ್ತು ಹೊರಗೆ ಎಷ್ಟೇ ಮಾತನಾಡಿದರೂ ಪ್ರಯೋಜನವಿಲ್ಲ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರಿಗೂ ಟಾಂಗ್‌ ನೀಡಿರುವ ಬಾಲಕ, ಪ್ರಧಾನಮಂತ್ರಿ ಮೋದಿ ಅವರ ಮೂಲಕ ಅಗತ್ಯ ನೆರವನ್ನು ಒದಗಿಸಲು ಮುಂದಾಗಬೇಕೆಂದು ಹೇಳಿದ್ದಾನೆ. ಹೀಗೆ ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಸುದೀರ್ಘ‌ವಾಗಿ ಮಾತನಾಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next