ದೆಹಲಿ: ನೈಋತ್ಯ ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಮೂವರು ದರೋಡೆಕೋರರು ಗನ್ ತೋರಿಸಿ ವ್ಯಕ್ತಿಯೊಬ್ಬರಿಂದ ಟೊಯೊಟಾ ಫಾರ್ಟುನರ್ ಕಾರು ದರೋಡೆ ಮಾಡಿದ್ದಾರೆ.
ಈ ಕುರಿತು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯ ರಾಷ್ಟ್ರೀಯ ಹೆದ್ದಾರಿರ 8ರ ಜರೇರಾ ಗ್ರಾಮದಲ್ಲಿ ಶನಿವಾರ ಮುಂಜಾನೆ ಈ ಘಟನೆ ನಡೆದಿದೆ.
ಈ ಬಗ್ಗೆ ದೆಹಲಿ ಕಂಟೋನ್ಮೆಂಟ್ ಪೊಲೀಸರಿಗೆ ಕಾರು ಮಾಲೀಕ ರಾಹುಲ್ ದೂರು ನೀಡಿದ್ದಾರೆ. ರಾಹುಲ್ ಕಾರು ನಿಲ್ಲಿಸಿ ಅಂಗಡಿಯೊಂದಕ್ಕೆ ಬರುತ್ತಾರೆ. ಅವರು ಹೊರಗೆ ಬರುವ ವೇಳೆಗೆ ಬೈಕಿನಲ್ಲಿ ಬಂದ ಮೂವರು ಮುಸುಕುಧಾರಿಗಳು ಅವರಿಗೆ ಗನ್ ತೋರಿಸಿ, ಅವರಿಂದ ಕಾರಿನ ಕೀ ಕಸಿದುಕೊಳ್ಳುತ್ತಾರೆ. ನಂತರ ಕಾರಿನೊಂದಿಗೆ ಅಲ್ಲಿಂದ ಪರಾರಿಯಾಗುತ್ತಾರೆ.