Advertisement

VIDEO: ಅಂಗಡಿಗೆ ಬಂದಾಕೆಯ ಸ್ತನ ಮುಟ್ಟಿದ ವೃದ್ಧ.. ಚಪ್ಪಲಿಯಿಂದ ಥಳಿಸಿದ ಯುವತಿ

01:21 PM Jan 06, 2024 | Team Udayavani |

ತ್ರಿಶೂರ್: ವೃದ್ಧ ವ್ಯಕ್ತಿಯೊಬ್ಬನ ಅಸಭ್ಯ ವರ್ತನೆಯಿಂದ ಯುವತಿಯೊಬ್ಬಳು ಆತನನ್ನು ಚಪ್ಪಲಿಯಿಂದ ಬಾರಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ವೃದ್ಧನನ್ನು ಅಲಿ ಎಂದು ಗುರುತಿಸಲಾಗಿದ್ದು, ಇವರು ತ್ರಿಶೂರ್ ವೈದ್ಯಕೀಯ ಕಾಲೇಜು ಬಳಿ ದಿನಸಿ ಅಂಗಡಿ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ

ಕೇರಳದ ತ್ರಿಶೂರ್‌ನಲ್ಲಿ ಈ ಘಟನೆ ನಡೆದಿದೆ. ಯುವತಿಯೊಬ್ಬಳು ಕಿರಾಣಿ ಅಂಗಡಿಗೆ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ಬಂದಿದ್ದಳು. ಈ ವೇಳೆ ಇತರೆ ಗ್ರಾಹಕರು ಕೂಡ ಅಲ್ಲಿದ್ದರು. ಜನಸಂದಣಿಯ ನಡುವೆ ಅಂಗಡಿ ನಡೆಸುವ ವೃದ್ಧ ವ್ಯಕ್ತಿ ಯುವತಿಯ ಸ್ತನಗಳನ್ನು ಹಿಡಿದಿದ್ದಾನೆ. ತಕ್ಷಣ ಯುವತಿ ವೃದ್ಧನ ಮೇಲೆ ಆಕ್ರೋಶಗೊಂಡು ನಿಂದಿಸಿದ್ದಾಳೆ. ಅಸಭ್ಯವಾಗಿ ವರ್ತಿಸಿದ ವೃದ್ಧನ ಬಳಿ ಕ್ಷಮೆ ಕೇಳುವಂತೆ ಹೇಳಿದ್ದಾರೆ.

ಅಲಿ ಯುವತಿಯ ಬಳಿ ಕ್ಷಮೆ ಕೇಳಿ, ಪೊಲೀಸ್‌ ದೂರು ನೀಡದಂತೆ ಮನವಿ ಮಾಡಿದ್ದಾರೆ. ಯುವತಿ ಮುಂದುವರೆದು ಪೊಲೀಸ್‌ ದೂರು ನೀಡುತ್ತೇನೆ ಎಂದು ಹೇಳಿ, ತನ್ನ‌ ಚಪ್ಪಲಿಯಿಂದ ವೃದ್ದನ ಮುಖಕ್ಕೆ ಥಳಿಸಿದ್ದಾಳೆ.

ಸದ್ಯ ಈ ಬಗ್ಗೆ ಕ್ರಮಕೈಗೊಂಡಿರುವ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next