Advertisement
ಮೊದಲು ಯುವತಿ, ಅನಂತರ ಪೊಲೀಸ್ !ವೀಡಿಯೋ ಕಾಲ್ ಅಸ್ತ್ರದಲ್ಲಿ ಹೆಚ್ಚು ಬಳಕೆಯಾಗುತ್ತಿರುವುದು ಮಹಿಳೆ ಮತ್ತು ಪೊಲೀಸ್ ತಂತ್ರ. ಮೊದಲು ಯುವತಿಯೋರ್ವಳು ಕರೆ ಮಾಡುತ್ತಾಳೆ. ರಾತ್ರಿ ವೇಳೆ ಹೆಚ್ಚು. ಕರೆ ಸ್ವೀಕರಿಸಿದರೆ ಮೋಹಕವಾಗಿ ಆಕರ್ಷಕವಾಗಿ ಮಾತನಾಡುತ್ತಾಳೆ. ಅನಂತರ ಕರೆ ಕಡಿತವಾಗುತ್ತದೆ. ಒಂದೆರಡು ದಿನದಲ್ಲಿ “ಪೊಲೀಸ್ ಅಧಿಕಾರಿ’ಯ ವಾಯ್ಸ ಕಾಲ್ ಬರುತ್ತದೆ. “ನಾನು ಡೆಲ್ಲಿ ಪೊಲೀಸ್ ಕ್ರೈಂ ವಿಭಾಗದ ಅಧಿಕಾರಿ ಮಾತನಾಡುತ್ತಿದ್ದೇನೆ. ನೀವು ಕೆಲವು ದಿನದ ಹಿಂದೆ ವೀಡಿಯೋ ಕಾಲ್‌ನಲ್ಲಿ ಯುವತಿಯೊಬ್ಬಳ ಜತೆ ಅಶ್ಲೀಲವಾಗಿ ಮಾತನಾಡಿದ್ದೀರಿ. ನೀವು ಅರೆನಗ್ನವಾಗಿದ್ದು ಅಸಭ್ಯವಾಗಿ ವರ್ತಿಸಿದ್ದೀರಿ. ಆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು ನಿಮ್ಮ ಮೊಬೈಲ್ ಸಂಖ್ಯೆಯನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾಳೆ. ನಿಮ್ಮನ್ನು ಅರೆಸ್ಟ್ ಮಾಡದೇ ಇರಬೇಕಾದರೆ ಕೂಡಲೇ ನಾವು ಹೇಳುವ ಖಾತೆಗೆ ಹಣ ವರ್ಗಾಯಿಸಿ’ ಎನ್ನುತ್ತಾನೆ. ಇದನ್ನು ನಂಬಿ ಅನೇಕರು ಹಣ ವರ್ಗಾಯಿಸಿದ್ದಾರೆ.
ವಂಚಕರ ಇನ್ನೊಂದು ತಂತ್ರವೆಂದರೆ – ವೀಡಿಯೋ ಕರೆ ಮಾಡುವ ಅಪರಿಚಿತರು ಕೆಲವು ದಿನಗಳ ಅನಂತರ ಕರೆ ಮಾಡಿ “ನಿಮ್ಮ ಅಶ್ಲೀಲ ವೀಡಿಯೋ ಯೂ ಟ್ಯೂಬ್‌ಗ ಅಪ್‌ಲೋಡ್ ಆಗಿದೆ. ನಿಮ್ಮ ಮೇಲೆ 24 ಗಂಟೆಯೊಳಗೆ ಎಫ್ಐಆರ್ ದಾಖಲಾಗುತ್ತದೆ. ಅದನ್ನು ಡಿಲೀಟ್ ಮಾಡಬೇಕಾದರೆ ನಾವು ಕಳುಹಿಸುವ ನಂಬರ್‌ಗೆ ಕರೆ ಮಾಡಿ ಎನ್ನುತ್ತಾರೆ. ಕರೆ ಮಾಡಿದರೆ ಹಲವು ರೀತಿಯಲ್ಲಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಲಾಗುತ್ತದೆ. ಬೇಕಾದಂತೆ ಎಡಿಟ್
ಇನ್ನೊಂದು ರೀತಿಯಲ್ಲಿಯೂ ವಂಚಿಸಲಾಗುತ್ತಿದೆ. ವೀಡಿಯೋ ಕರೆ ಸ್ವೀಕರಿಸಿದವರ ಫೋಟೋ, ವೀಡಿಯೋವನ್ನು ಸೆರೆ ಹಿಡಿಯಲಾಗುತ್ತದೆ. ಅನಂತರ ಬೇಕಾದಂತೆ ಎಡಿಟ್ ಮಾಡಿ ಕಳುಹಿಸಿ ಬ್ಲ್ಯಾಕ್‌ವೆುàಲ್ ಮಾಡಲಾಗುತ್ತದೆ.
Related Articles
ಡ್ರಗ್ಸ್ ಹೆಸರಿನಲ್ಲಿ ಹೆದರಿಸಿ ಹಣ ಪೀಕಿಸುವುದು ಹೊಸದಾಗಿ ಸೇರಿರುವ ವಂಚನಾ ವಿಧಾನ. ಅಪರಿಚಿತನೋರ್ವ ಕರೆ ಮಾಡಿ “ನಾನು ಕೊರಿಯರ್ ಕಂಪೆನಿಯಿಂದ ಮಾತನಾಡುತ್ತಿದ್ದೇನೆ. ನಿಮ್ಮ ಹೆಸರು, ವಿಳಾಸಕ್ಕೆ ಡ್ರಗ್ಸ್ ಬಂದಿದೆ. ನೀವು ತಪ್ಪೊಪ್ಪಿಗೆ ಹೇಳಿಕೆಯನ್ನು ವೀಡಿಯೋ ಮಾಡಿ ಕಳುಹಿಸಿ ಎನ್ನುತ್ತಾರೆ. ಬಳಿಕ ಹಣಕ್ಕೆ ಬೇಡಿಕೆ ಇಡುತ್ತಾರೆ.
Advertisement
ಸೈಬರ್ ಭದ್ರತಾ ತಜ್ಞರು, ಪೊಲೀಸರ ಸಲಹೆ– ಅಪರಿಚಿತರಿಂದ ವೀಡಿಯೋ ಕರೆ ಬಂದರೆ ಸ್ವೀಕರಿಸದಿರಿ
– ಸ್ವೀಕರಿಸಿದರೂ ನಿಮ್ಮ ಮುಖ ಅಥವಾ ದೇಹ ಕಾಣದಂತೆ ಮೊಬೈಲ್ ಹಿಡಿದಿರಬೇಕು
– ಕೆಮರಾ ಕವರ್ ಬಳಸಬೇಕು. ಫೋಟೋ ತೆಗೆಯುವಾಗ ಮಾತ್ರ ತೆರೆಯಬೇಕು
– ಯಾವುದೇ ರೀತಿಯಲ್ಲಿ ಬೆದರಿಕೆ ಹಾಕಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಯುವ ಸಮುದಾಯವೇ ವೀಡಿಯೋ ಕರೆಗೆ ಹೆಚ್ಚಾಗಿ ಬಲಿಯಾಗುತ್ತಿದೆ. ಇದರಲ್ಲಿ ಲೈಂಗಿಕವಾಗಿ ಪ್ರಚೋದಿಸಿ ವಂಚಿಸುವುದೂ ಸೇರಿದೆ. ಕೆಲವರು ತಮಗೆ ಬಂದಿರುವುದು ಯಾವ ವಿಧದ ಕರೆ ಎಂದು ತಿಳಿಯದೆ ಸ್ವೀಕರಿಸುವುದರಿಂದಲೂ ಸುಲಭವಾಗಿ ವಂಚನೆಗೆ ಈಡಾಗುತ್ತಾರೆ.
– ಡಾ| ಅನಂತ ಪ್ರಭು ಜಿ.,
ಸೈಬರ್ ಭದ್ರತಾ ತಜ್ಞರು, ಮಂಗಳೂರು – ಸಂತೋಷ್ ಬೊಳ್ಳೆಟ್ಟು