ಬೆಳ್ತಂಗಡಿ: ದುಷ್ಕರ್ಮಿಗಳು ಶಾಲಾ ಬಾವಿಗೆ ವಿಷ ಪದಾರ್ಥ ಹಾಕಿದ ಪರಿಣಾಮ 8 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ಘಟನೆ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಪೆರ್ಲದಲ್ಲಿ ನಡೆದಿದೆ.
ರಾಜೇಶ್ (12),6 ನೇ ತರಗತಿ, ರಾಧಕೃಷ್ಣ (14) 8 ನೇ ತರಗತಿ, ಮೋನಿಸ್( 12)6 ನೇ ತರಗತಿ, ಶ್ರವಣ್ ( 12)6 ನೇ ತರಗತಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಗೆ ದಾಖಲಾಗಿದ್ದಾರೆ.
ಚೇತನ್ ಕುಮಾರ್(13) 7 ನೇ ತರಗತಿ, ಸುದೀಶ್ (14) 8 ನೇ ತರಗತಿ, ಯೋಗೀಶ್ (14) 8 ನೇ ತರಗತಿ, ಸುದೀಪ್ ( 12)6 ನೇ ತರಗತಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿಬಾಜೆಯ ಪೆರ್ಲ ದ.ಕ ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾರ್ಥಮಿಕ ಶಾಲೆಯ ಬಾವಿ ನೀರು ಕುಡಿದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದವರು.
ಮಕ್ಕಳು ಶಾಲಾ ತರಕಾರಿ ತೋಟಕ್ಕೆ ಬಾವಿಯಿಂದ ಪಂಪ್ ನಲ್ಲಿ ಗಿಡಗಳಿಗೆ ನೀರು ಸಿಂಪಡಿಸುವ ಸಮಯದಲ್ಲಿ ಮಕ್ಕಳು ನೀರನ್ನು ಕುಡಿದಿದ್ದರು. ಈ ಸಮಯದಲ್ಲಿ ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಮುಖ್ಯ ಶಿಕ್ಷಕಿ ಶಾರದರವರ ಗಮನಕ್ಕೆ ತಂದಿದ್ದರು.
ಬಾವಿ ಬಳಿ ಪರಿಶೀಲಿಸಿದಾಗ ರಬ್ಬರ್ ಗೆ ಮಿಶ್ರಣ ಮಾಡುವ ಅಸೀಡ್ ಕ್ಯಾನ್ ಕಂಡು ಬಂದಿದೆ. ತಕ್ಷಣ 8 ಮಕ್ಕಳನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಾಲ್ಕು ಮಕ್ಕಳನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಇನ್ನುಳಿದವರನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಕ್ಕಳ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.