Advertisement

ಗ್ರಾಪಂ ಎದುರು ಸಂತ್ರಸ್ತರ ಧರಣಿ

05:15 PM Dec 03, 2019 | Team Udayavani |

ರಾಯಬಾಗ: ತಾಲೂಕಿನ ಭಿರಡಿ ಗ್ರಾಮದಲ್ಲಿ 2005ರಲ್ಲಿ ಸಂಭವಿಸಿದ ಕೃಷ್ಣಾ ನದಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ನಿರ್ಮಿಸಿದಮನೆಗಳಲ್ಲಿ ಅನರ್ಹ ಕುಟುಂಬಗಳು ವಾಸಮಾಡುತ್ತಿದ್ದು, ಅವರನ್ನು ತೆರವುಗೊಳಿಸಿ ಅರ್ಹಫಲಾನುಭವಿಗಳಿಗೆ ನೀಡುವಂತೆ ಆಗ್ರಹಿಸಿಸಂತ್ರಸ್ತರು ಸೋಮವಾರ ಗ್ರಾಪಂ ಕಚೇರಿಗೆ ಬೀಗ ಜಡಿದು, ಧರಣಿ ನಡೆಸಿದರು.

Advertisement

ಭಿರಡಿ ಗ್ರಾಮದಲ್ಲಿ 2005ರಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ತರಾದ 132 ಕುಟುಂಬಗಳಿಗೆ ಗ್ರಾಮದ ರಿ..ನಂ.21ರಲ್ಲಿ ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ ಗ್ರಾಪಂಯವರು ಅರ್ಹ ಫಲಾನುಭವಿ ಗಳಿಗೆಮನೆಗಳನ್ನು ಹಸ್ತಾಂತರಿಸುವ ಮೊದಲೇ ಭಿರಡಿ ಮತ್ತು ಬೇರೆ ಗ್ರಾಮದ ಅನರ್ಹ ಕುಟುಂಬಗಳು ಅನಧಿಕೃತವಾಗಿ ಅಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಧರಣಿ ನಿರತ ಸಂತ್ರಸ್ತರು ಆರೋಪಿಸಿದರು. 2019ರಲ್ಲಿ ಮತ್ತೆ ಗ್ರಾಮದಲ್ಲಿ ಪ್ರವಾಹ ಬಂದರೂ ಕೂಡ ಅಧಿಕಾರಿಗಳು ಅರ್ಹ ಅಧಿಕೃತ ಸಂತ್ರಸ್ತ ಫಲಾನುಭವಿಗಳಿಗೆ

ಗ್ರಾಮ ಪಂಚಾಯತಿಯವರು ಮನೆಗಳನ್ನು ಹಸ್ತಾಂತರಿಸಿ, ಕಬಾ ನೀಡಿರುವುದಿಲ್ಲ. 2005ರಲ್ಲಿ ಕೃಷ್ಣಾ ನದಿ ಪ್ರವಾಹ ಪೀಡಿತ 132 ಕುಟುಂಬಗಳಿಗೆ ತಾ.ಪಂ.ಯವರುಮನೆಗಳನ್ನು ನಿರ್ಮಿಸಿ, ಗ್ರಾ.ಪಂ.ಯವರಿಗೆ ಹಸ್ತಾಂತರಿಸಿದ್ದಾರೆ. ಆದರೆ ಗ್ರಾ.ಪಂ.ಯವರು ಅನಧಿಕೃತವಾಗಿ ಅತಿಕ್ರಮಣ ಮಾಡಿ ವಾಸ ಮಾಡುತ್ತಿರುವವರನ್ನು ತೆರವುಗೊಳಿಸಿ, ಗ್ರಾಮದ ನಿಜವಾದ ನೆರೆ ಸಂತ್ರಸ್ತರಿಗೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಅರ್ಹ ನೆರೆ ಸಂತ್ರಸ್ತರಿಗೆ ನಿರ್ಮಿಸಿದ ಮನೆಗಳ ಕಬ್ಜಾ ನೀಡುವಂತೆ ಸಾಕಷ್ಟು ಬಾರಿ ತಹಶೀಲ್ದಾರ್‌, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಗ್ರಾಪಂಯವರಿಗೆ ಮನವಿ ಮಾಡಿಕೊಂಡು, ನಮ್ಮ ಮನವಿಗೆ ಸ್ಪಂದಿಸದೇ ನಿರ್ಲಕ್ಷ ವಹಿಸುತ್ತಿದ್ದಾರೆ. ಬೇಡಿಕೆ ಈಡೇರುವವರೆಗೆ ಗ್ರಾಪಂ ಕಚೇರಿಗೆ ಬೀಗ ಜಡಿದು ಧರಣಿ ಸತ್ಯಾಗ್ರಹ ನಡೆಸುವುದಾಗಿ ನೆರೆ ಸಂತ್ರಸ್ತರು ಎಚ್ಚರಿಸಿದರು.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಾಪಂ ಇಒ ಪ್ರಕಾಶ ವಡ್ಡರ ಅವರುಡಿ.15 ಒಳಗೆ ತಹಶೀಲ್ದಾರ್‌ ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಕರೆದು ತಮ್ಮಸಮಸ್ಯೆಯನ್ನು ಬಗೆಹರಿಸುವುದಾಗಿ ನೆರೆ ಸಂತ್ರಸ್ತರಿಗೆ ಭರವಸೆ ನೀಡಿದ ನಂತರ ನೆರೆ ಸಂತ್ರಸ್ತರು ಧರಣಿ ಹಿಂಪಡೆದರು. ಪ್ರತಿಭಟನೆಯಲ್ಲಿ ಶಂಕರ ಗಡ್ಕರಿ, ಪಾಂಡು ಸಾವಂತ, ಅಶೋಕ ನಾವಿ, ಶಂಕರ ತೇಲಿ, ಸದಾಶಿವ ನಿಶಾಂದಾರ, ಹಸನ ಮುಲ್ಲಾ, ರಮಜಾನ್‌ ಮುಲ್ಲಾ, ನಿಂಗಪ್ಪ ದೇವಮುರೆ, ಬಸನಕೊಪ್ಪ, ಅಕ್ಷತಾ, ಅಕ್ಕಾತಾಯಿ ಹುಂಡೆಕರ, ಮಂಗಲ ಬುಸನಕೊಪ್ಪ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next