Advertisement

ಹೆಚ್ಚಿನ ನೆರೆ ಪರಿಹಾರಕ್ಕೆ ಒತ್ತಾಯ: ಪ್ರತಿಭಟನೆ

05:04 PM Oct 15, 2019 | Team Udayavani |

ಬಂಗಾರಪೇಟೆ: ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿ, ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದು ಕೊಂಡಿದ್ದಾರೆ. 4 ಲಕ್ಷ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಿಪಿಎಂ ಮುಖಂಡ ಪಿ.ಶ್ರೀನಿವಾಸ್‌ ಕೇಂದ್ರ ಸರ್ಕಾರದ ವಿರುದ್ಧ ವಿರುದ್ಧ ಕಿಡಿಕಾರಿದರು.

Advertisement

ಪಟ್ಟಣದ ತಾಲೂಕು ಕಚೇರಿ ಮುಂದೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ತನ್ನ ಜನವಿರೋಧಿ ಆರ್ಥಿಕ ನೀತಿಗಳನ್ನು ಕೈಬಿಟ್ಟು, ಜನಪರ 8 ಹಕ್ಕೋತ್ತಾಯ ತಕ್ಷಣ ಈಡೇರಿಸಬೇಕು ಎಂದು ದೇಶದ ಐದು ಪ್ರಮುಖ ಎಡ ಪಕ್ಷಗಳು ದೇಶ ವ್ಯಾಪಿ ಕರೆ ನೀಡಿದ್ದ ಹೋರಾಟದ ಭಾಗವಾಗಿ ಪಟ್ಟಣದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.

ಉತ್ತರ ಕರ್ನಾಟಕದಲ್ಲಿ ಉಂಟಾದ ಅತಿವೃಷ್ಟಿಯ ಪರಿಣಾಮವಾಗಿ 18 ಜಿಲ್ಲೆಯ 100 ತಾಲೂಕು ಸಂಕಷ್ಟಕ್ಕೆ ಸಿಲುಕಿವೆ. 35 ಸಾವಿರ ಕೋಟಿ ರೂ. ನಷ್ಟ ಉಂಟಾಗಿ ಇಂದಿಗೆ 63 ದಿನ ಕಳೆದಿದೆ. ಒಮ್ಮೆಯೂ ಪ್ರಧಾನಿ ಮೋದಿ ಪ್ರವಾಹ ಪೀಡಿತರಿಗೆ ಸಾಂತ್ವನ ಹೇಳಲು ಬಂದಿಲ್ಲ ಎಂದು ದೂರಿದರು.

ರಾಜ್ಯದ ಬಿಜೆಪಿಯ 25 ಸಂಸದರು ಕೇಂದ್ರದಿಂದ ಪ್ರವಾಹ ಪೀಡಿತ ಜನತೆಗೆ ಹೆಚ್ಚಿನ ಅನುದಾನ ತರುವ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಹೇಳಿದರು. ಶಿರಸ್ತೇದಾರ್‌ ಮುಕ್ತಾಂಭಾಗೆ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಮುಖಂಡರಾದ ಅಪ್ಪಯ್ಯಣ್ಣ, ಸಿ.ಆರ್‌. ಮೂರ್ತಿ, ಅಚ್ಚುತ್‌, ಜಯಲಕ್ಷ್ಮೀ, ಅಲೀಕ್‌, ವೆಂಕಟೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next