Advertisement

ಉಪರಾಷ್ಟ್ರಪತಿ ಚುನಾವಣೆ: 11ರಂದು ವಿಪಕ್ಷಗಳ ಸಭೆ

08:44 AM Jul 08, 2017 | Team Udayavani |

ಹೊಸದಿಲ್ಲಿ: ಮುಂಬರುವ ಉಪರಾಷ್ಟ್ರಪತಿ ಚುನಾವಣೆ ಕುರಿತು ಕಾರ್ಯತಂತ್ರ ರೂಪಿಸುವ ಸಂಬಂಧ 18 ವಿಪಕ್ಷಗಳು ಜು.11ರಂದು ಸಭೆ ಸೇರುವ ಸಾಧ್ಯತೆಯಿದೆ. ವಿಶೇಷವೆಂದರೆ, ಈ ಸಭೆಯಲ್ಲಿ ಜೆಡಿಯು ಕೂಡ ಪಾಲ್ಗೊಳ್ಳಲಿದೆ. ರಾಷ್ಟ್ರಪತಿ ಚುನಾವಣೆ ವೇಳೆ ಜೆಡಿಯು ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದ ಪರಿಣಾಮ ವಿಪಕ್ಷಗಳ ಒಕ್ಕೂಟದಲ್ಲಿ ಒಡಕು ಮೂಡಿದೆ. ಈ ಕುರಿತು ಚರ್ಚೆ ನಡೆಸಿ, ಆಗಸ್ಟ್‌ 5ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಾದರೂ ಒಗ್ಗಟ್ಟು ಪ್ರದರ್ಶಿಸುವ ಸಂಬಂಧ ತೀರ್ಮಾನಕ್ಕೆ ಬರಲು ಈ ಸಭೆ ಕರೆಯಲಾಗಿದೆ.

Advertisement

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಕರೆ ಮೇರೆಗೆ ನಡೆಯುವ ಸಭೆಯಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಸೇರಿ ವಿಪಕ್ಷಗಳ ಪ್ರಮುಖರು ಭಾಗವಹಿಸಲಿದ್ದಾರೆ. ಇದೇ ವೇಳೆ ಸಂಸತ್‌ನ ಮುಂಗಾರು ಅಧಿವೇಶನದ ಕುರಿತೂ ವಿಪಕ್ಷಗಳು ಚರ್ಚಿಸಲಿವೆ. “ಉಪರಾಷ್ಟ್ರಪತಿ ಸ್ಪರ್ಧೆಗೆ ಕಾಂಗ್ರೆಸ್‌ ಸೇರಿ ಯಾವುದೇ ವಿಪಕ್ಷ ಈವರೆಗೆ ಅಭ್ಯರ್ಥಿ ಹೆಸರು ಸೂಚಿಸಿಲ್ಲ. ಈ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಸಿಪಿಐ  ನಾಯಕ ಡಿ. ರಾಜಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next