ಹೊಸದಿಲ್ಲಿ: ಹಿರಿತನವನ್ನು ಆಧರಿಸಿ ತಮ್ಮನ್ನು ನೌಕಾಪಡೆ ಮುಖ್ಯಸ್ಥರೆಂದು ಘೋಷಿ ಸದೇ ಕಡೆಗಣಿಸಿರುವುದನ್ನು ಪ್ರಶ್ನಿಸಿ ವೈಸ್ ಅಡ್ಮಿರಲ್ ವಿಮಲ್ ವರ್ಮಾ ಸೇನಾ ನ್ಯಾಯಾಧಿಕ ರಣದ ಮೊರೆ ಹೋಗಿದ್ದಾರೆ. ಕಳೆದ ತಿಂಗಳಷ್ಟೇ ವೈಸ್ ಅಡ್ಮಿರಲ್ ಕರಮ್‌ಬೀರ್ ಸಿಂಗ್‌ರನ್ನು ಮುಂದಿನ ನೌಕಾಪಡೆ ಮುಖ್ಯಸ್ಥರ ನ್ನಾಗಿ ಸರಕಾರ ನೇಮಿಸಿತ್ತು. ಮೇ 30 ರಂದು ಸುನೀಲ್ ಲಾಂಬಾ ನಿವೃತ್ತರಾಗಲಿರುವ ಹಿನ್ನೆಲೆ ಯಲ್ಲಿ ಈ ಆದೇಶ ಹೊರಡಿಸಲಾಗಿತ್ತು. ಸಂಪ್ರ ದಾಯದ ಪ್ರಕಾರ ಅತ್ಯಂತ ಹಿರಿಯ ಅಧಿಕಾರಿ ಯನ್ನು ನೇಮಿಸುವ ಬದಲಿಗೆ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗಿತ್ತು. 2016ರಲ್ಲೂ ಇದೇ ವಿಧಾನದಲ್ಲಿ ನೇಮಕ ನಡೆ ದಿತ್ತು. ಸೋಮವಾರ ವರ್ಮಾ ಅರ್ಜಿ ಸಲ್ಲಿಸಿದ್ದು, ಮಂಗಳವಾರ ಈ ಸಂಬಂಧ ವಿಚಾರಣೆ ನಡೆಯುವ ಸಾಧ್ಯತೆಯಿದೆ. ವರ್ಮಾ ಪರವಾಗಿ ಅವರ ಪುತ್ರಿ ರಿಯಾ ವರ್ಮಾ ಅವರೇ ವಕಾಲತ್ತು ವಹಿಸಲಿದ್ದಾರೆ.