Advertisement

ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಲು ಶೈಲಜಾ ಸಲಹೆ

02:57 PM Jul 24, 2019 | Naveen |

ವಿಜಯಪುರ: ಸಮಾಜದಲ್ಲಿ ನೆರವಿನ ಅಗತ್ಯ ಇರುವ ಜನರಿಗೆ ನಿಸ್ವಾರ್ಥ ಮನೋಭಾವದಿಂದ ಸಹಾಯ ಮಾಡುವುದು ದೇವರ ಕೆಲಸದಷ್ಟೇ ಶ್ರೇಷ್ಠ. ಆದರೆ ಪ್ರಚಾರ ಹಾಗೂ ಸ್ವಾರ್ಥಕ್ಕಾಗಿ ಮಾಡುವ ಸಹಾಯ ಸಮಾಜ ಸೇವೆ ಎನಿಸಿಕೊಳ್ಳದು ಹಾಗೂ ದೇವರು ಕೂಡ ಮೆಚ್ಚಲಾರ ಎಂದು ಶೈಲಜಾ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.

Advertisement

ನಗರದಲ್ಲಿ ಜರುಗಿದ ಲಯನ್ಸ ಕ್ಲಬ್‌ ಆಫ್‌ ಬಿಜಾಪುರ ಪರಿವಾರದ 7ನೇ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾರು ನಿಸ್ವಾರ್ಥ ಮನೋಭಾವದಿಂದ ಸೇವೆ ಮಾಡುವರೋ ಅವರ ಸೇವೆ ಮಾತ್ರ ನಿಜವಾದ ಸಮಾಜ ಸೇವೆ ಎನಿಸಿಕೊಳ್ಳಲಿದೆ. ಹೀಗಾಗಿ ಸಮಾಜ ಸೇವೆಗಾಗಿ ಹುಟ್ಟಿಕೊಂಡಿರುವ ಸಂಘ-ಸಂಸ್ಥೆಗಳು, ಸಮಾಜಮುಖೀ ಸೇವಕರು ಕೂಡಾ ತನು, ಮನ, ಧನ ಸಹಾಯ ಮಾಡುವ ಮೂಲಕ ಸಮಾಜದ ದುರ್ಬಲರಿಗೆ, ನೆರವಿನ ಹಸ್ತ ಚಾಚಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕರಿಯರ ಗೈಡನ್ಸ್‌ ಜಿಲ್ಲಾ ಚೇರಮನ್‌ ಎಂಜೆಎಫ್‌ ಡಾ| ರಂಗನಾಥ ಸೋನವಾಲಕರ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಅಂತಾರಾಷ್ಟ್ರೀಯ ಸಂಸ್ಥೆ ಲಯನ್ಸ್‌ ಕ್ಲಬ್‌ ಸದಸ್ಯರಾಗುವುದೇ ಹೆಮ್ಮೆಯ ವಿಷಯ. ತಮಗೆ ದೊರೆತಿರುವ ಈ ಒಂದು ಅವಕಾಶವನ್ನು ಜೀವನದಲ್ಲಿ ಪರೋಪಕಾರಿಯಾಗಿ ಎಲ್ಲರೂ ಸ್ಮರಿಸುವಂತೆ ಮಾಡಿಕೊಳ್ಳಬೇಕು. ಜೀವನದಲ್ಲಿ ಲೀಡರ್‌ ಆಗುವುದು ದೊಡ್ಡತನ ಅಲ್ಲ, ಕೆಲಸ ಮಾಡುವ ನಾಯಕ ಮಾತ್ರ ಜನ ಮಾನಸದಲ್ಲಿ ಉಳಿಯಲು ಸಾಧ್ಯ ಎಂದರು.

ಹೀಗಾಗಿ ನಿರಂತರ ಜನಸೇವೆ ಮಾಡುತ್ತ ಸಮಾಜದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ತಮ್ಮ ಕರ್ತವ್ಯಗಳನ್ನು ನಿಭಾಯಿಸುವ ಜೊತೆಗೆ, ಸರ್ವ ಸದಸ್ಯರಲ್ಲಿ ಸಮಾಜ ಸೇವೆಯ ಅರಿವು ಮೂಡಿಸಿ ಹುರಿದುಂಬಿಸಿ, ಪ್ರೇರಣೆ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ನಿರ್ಗಮಿತ ಅಧ್ಯಕ್ಷ ಡಾ| ಬಿ.ಎಂ. ಬಿರಾದಾರ ಪ್ರಾಸ್ತಾವಿಕ ಮಾತನಾಡಿ, ನಮ್ಮ ಅವಧಿಯಲ್ಲಿ ಹಲವು ಸಾಮಾಜಿಕ ಜನೋಪಯೋಗಿ ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಕ್ಕೆ ತಂದಿದ್ದೇವೆ. ಬಹುತೇಕ ಯೋಜನೆಗಳು ಅತಿ ಶಿಸ್ತು ಮತ್ತು ಪ್ರಾಮಾಣಿಕವಾಗಿ ಸಂಘಟಿಸಿ ಜರನ್ನು ಮುಟ್ಟಿಸುವಲ್ಲಿ ಯಶಸ್ವಿಯಾದೆವು. ಇದರ ಹೊರತಾಗಿಯೂ ಕೆಲವು ಉದ್ದೇಶಿತ ಕೆಲ ಯೋಜನೆಗಳನ್ನು ಕಾರಣಾಂತರಗಳಿಂದ ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದರು.

Advertisement

ಕಾರ್ಯದರ್ಶಿ ಆನಂದ ಕುಲಕರ್ಣಿ 2018-19ನೇ ಸಾಲಿನ ಪ್ರಗತಿ ವಾಚಿಸಿದರು. ಲಯನ್ಸ್‌ ಪರಿವಾರದ ಸಂಸ್ಥಾಪಕ ಡಾ| ಅಶೋಕ ಜಾಧವ ಮಾತನಾಡಿದರು.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಆನಂದ ಕುಲಕರ್ಣಿ, ಕಾರ್ಯದರ್ಶಿ ಮೋಹನ ಚವ್ಹಾಣ, ಖಜಾಂಚಿ ಸೋಮಶೇಖರ ರಾಠೊಡ ಸೇರಿದಂತೆ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಶ್ರವಣಕುಮಾರ, ಎಸ್‌.ಎಸ್‌. ರಾಜಮಾನ್ಯ ವೇದಿಕೆಯಲ್ಲಿದ್ದರು. ಡಾ| ಬಿ.ಎಂ. ಬಿರಾದಾರ ಸ್ವಾಗತಿಸಿದರು. ನಾಗೇಶ ಡೋಣೂರ ನಾಡಗೀತೆ ಹಾಡಿದರು. ಶ್ರವಣಕುಮಾರ ಮಹಿಂದ್ರಕರ ಪರಿಚಯಿಸಿದರು. ಡಾ| ಅಶೋಕ ಜಾಧವ ನಿರೂಪಿಸಿದರು. ರಾಜೇಶ ಗಾಯಕವಾಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next