ಬೆಳಗಾವಿ: ದೇಶದಲ್ಲಿ ಹೆಚ್ಚುತ್ತಿರುವ ಹಿಂದೂ ವಿರೋಧಿ ಮತ್ತು ದೇಶ ವಿರೋಧಿ ಇಸ್ಲಾಮಿಕ್ ಜಿಹಾದಿ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇಸ್ಲಾಮಿಕ್ ಜಿಹಾದಿಗಳಿಂದ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ದಾಳಿ ನಡೆಯುತ್ತ ಬಂದಿದೆ. ಅಲ್ಲದೇ ಸಮೂಹ ಅಕ್ರಮಣದ ಹೆಸರಿನಲ್ಲಿ ಸಣ್ಣ ಸಣ್ಣ ಘಟನೆಯನ್ನು ದೊಡ್ಡದಾಗಿ ಬಿಂಬಿಸಿ ರಾಮ ಭಕ್ತರು, ಗೋ ರಕ್ಷಕರನ್ನು ಅಪಮಾನಗೊಳಿಸುವ ಷಡ್ಯಂತ್ರ ನಡೆದಿದೆ. ಮುಗ್ಧ ಬಾಲಕಿಯರು ಹಾಗೂ ಹಿಂದೂ ಯುವತಿಯರನ್ನು ಜಿಹಾದಿಗಳು ದುವ್ಯರ್ವಹಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಜಿಹಾದಿ ಭಯೋತ್ಪಾದನೆ, ಹಿಂದೂಗಳ ಬಲವಂತದ ಮತಾಂತರ, ಕಾಶ್ಮೀರದ ಪ್ರತ್ಯೇಕತಾವಾದ, ಕೇರಳ, ಬಂಗಾಳ ಮತ್ತು ಕರ್ನಾಟಕದಲ್ಲಿ ಸತತ ಆಕ್ರಮಣಗಳು ನಡೆಯುತ್ತಿವೆ. ದೆಹಲಿಯ ಚಾಂದನಿ ಚೌಕ್‌ದಲ್ಲಿ ಹಿಂದೂ ಮಂದಿರ ಹಾಗೂ ಹಿಂದೂ ಮನೆಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಲಾಗಿದೆ. ಸೂರತ್, ಜೈಪುರ, ರಾಂಚಿಗಳಲ್ಲಿ ನಡೆಸಿರುವ ಭಾರತದ ವಿರೋಧಿ ಪ್ರದರ್ಶನಗಳಿಂದ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಜೈ ಶ್ರೀಮಾ ಘೋಷಣೆಯನ್ನು ತಪ್ಪಾಗಿ ಅರ್ಥೈಸಿ ಅಪ ಪ್ರಚಾರ ಮಾಡಲಗುತ್ತಿದೆ. ಈ ಎಲ್ಲ ಜಿಹಾದಿ ಹಾಗೂ ಸೆಕ್ಯೂಲರ್ ವಾದಿಗಳ ಕುತಂತ್ರಗಳು, ಸುಳ್ಳು ಪ್ರಚಾರಗಳು, ಪ್ರತ್ಯಕ್ಷ ಹಾಗೂ ಪರೋಕ್ಷ ಆಕ್ರಮಣಗಳ ಮೇಲೆ ನಿಯಂತ್ರಣ ಹಾಕಬೇಕು. ಹಿಂದೂ ಸಮಾಜ ಹಾಗೂ ಜೀವನ ಮೌಲ್ಯಗಳ ಸಂರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷ ಭಾವಕಣ್ಣ ಲೋಹಾರ, ಆದಿನಾಥ ಗಾವಡೆ, ರಾಮದೇವ ಪಾಟೀಲ, ಬಿರಾದಾರ ಸೇರಿದಂತೆ ಇತರರು ಇದ್ದರು.