Advertisement

Vettaiyan: ಹೇಗಿದೆ ರಜಿನಿಕಾಂತ್‌ ʼವೆಟ್ಟಯ್ಯನ್ʼ? ಫಸ್ಟ್‌ ಹಾಫ್‌ ಓಕೆ ಸೆಕೆಂಡ್ ಹಾಫ್..

12:59 PM Oct 10, 2024 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ (Rajinikanth) ಅಭಿನಯದ ʼವೆಟ್ಟೈಯನ್‌ʼ (Vettaiyan) ಸಿನಿಮಾ ವಿಶ್ವದೆಲ್ಲೆಡೆ ಇಂದು(ಅ.10ರಂದು) ರಿಲೀಸ್‌ ಆಗಿದೆ. ʼತಲೈವಾʼ ಫ್ಯಾನ್ಸ್‌ ಗಳು ಮುಂಜಾನೆಯಿಂದಲೂ ಸಾಲುಗಟ್ಟಿ ಥಿಯೇಟರ್‌ ಮುಂದೆ ಟಿಕೆಟ್‌ಗಾಗಿ ಕಾದು ಕುಳಿತಿದ್ದು, ಮೊದಲೇ ಟಿಕೆಟ್‌ ಬುಕಿಂಗ್‌ ಮಾಡಿಕೊಂಡವರು ಸಿನಿಮಾ ನೋಡಿ ಸಂಭ್ರಮ ಪಟ್ಟಿದ್ದಾರೆ.

Advertisement

ರಜಿನಿಕಾಂತ್‌ ಪೊಲೀಸ್‌ ಲುಕ್‌ ನೋಡಿ ಪ್ರೇಕ್ಷಕರು ಏನಂತಾರೆ? ರಜಿನಿ, ಅಮಿತಾಭ್‌, ಫಾಹದ್‌ ಅವರನ್ನು ಒಂದೇ ಫ್ರೇಮ್‌ನಲ್ಲಿ ನೋಡಿದ ಪ್ರೇಕ್ಷಕರು ಸಿನಿಮಾದ ಬಗ್ಗೆ ಏನು ಹೇಳಿದ್ದಾರೆ ಎನ್ನುವುದನ್ನು ಟ್ವಿಟರ್‌ ರಿವ್ಯೂ ಮೂಲಕ ನೋಡಿಕೊಂಡು ಬರೋಣ ಬನ್ನಿ..

“ವೆಟ್ಟಯ್ಯನ್ ಸ್ಟ್ರಾಂಗ್ ಮತ್ತು ಪ್ರಾಮಾಣಿಕ ಕಥೆಯನ್ನು ಹೊಂದಿರುವ ಚಿತ್ರವಾಗಿದೆ. ಆದರೆ, ನಿರ್ದೇಶಕರು ತೆಗೆದುಕೊಂಡ ಚಿತ್ರಕಥೆಯ ವಿಧಾನವು‌ ಸ್ವಲ್ಪ ನಿರಾಸೆಯನ್ನುಂಟು ಮಾಡುತ್ತದೆ. ಮೊದಲಾರ್ಧ ಕ್ರೈಮ್‌ ಥ್ರಿಲ್ಲರ್‌ ಅನುಭವ ನೀಡುತ್ತದೆ. ಸೆಕೆಂಡ್‌ ಹಾಫ್‌ ಕುತೂಹಲದಿಂದಲೇ ಶುರುವಾಗುತ್ತದೆ ಆದರೆ ಅದನ್ನೇ ಕಾಪಾಡಿಕೊಂಡು ಇರುವುದರಲ್ಲಿ ಎಡವುತ್ತದೆ” ಎಂದು ಪ್ರೇಕ್ಷಕರೊಬ್ಬರು ಬರೆದುಕೊಂಡಿದ್ದಾರೆ.

ʼ”ವೆಟ್ಟೈಯನ್‌ ಸೆಕೆಂಡ್‌ ಹಾಫ್‌ ನಲ್ಲಿನ ಕ್ರೈಮ್‌ ತನಿಖೆ ಕುತೂಹಲವನ್ನು ಸಾಗಿಸುತ್ತಾ ಹೋಗುತ್ತದೆ. ಚಿತ್ರದುದ್ದಕ್ಕೂ ರಿತಿಕಾ ಅದ್ಭುತವಾಗಿ ನಟಿಸಿದ್ದಾರೆ. ʼತಲೈವರ್ʼ ಒನ್‌ ಮ್ಯಾನ್‌ ಶೋನಂತೆ ಒಮ್ಮೆಗೆ ಬಂದು ಮೋಡಿ ಮಾಡುತ್ತಾರೆ. ರಾಣಾ ಜೊತೆಗಿನ ಮುಖಮುಖಿ ಚೆನ್ನಾಗಿ ಮೂಡಿಬಂದಿದೆ” ಎಂದು ಮತ್ತೊಬ್ಬರು ಹೇಳಿದ್ದಾರೆ.

Advertisement

“ವೆಟ್ಟೈಯನ್‌ ಕಮರ್ಷಿಯಲ್ ಅಂಶಗಳೊಂದಿಗೆ ಬೆರೆತಿರುವ ಸಾಮಾಜಿಕ ಸಮಸ್ಯೆಯನ್ನು ತೋರಿಸುವ ಸಿನಿಮಾ. ಅದು ಸ್ಕ್ರೀನ್‌ ಮೇಲೆ ಚೆನ್ನಾಗಿ ಮೂಡಿಬಂದಿದೆ. ತಲೈವರ್ ಚಿತ್ರದಿಂದ ನೀವು ನಿರೀಕ್ಷಿಸುವ ಪಂಚ್ ನಿಮಗೆ ಸಿಗದೇ ಇರಬಹುದು. ಆದರೆ ಶಿಳ್ಳೆ ಹೊಡೆಯುವ ಕ್ಷಣಗಳಿವೆ. ಫಾಹದ್ ಫಾಸಿಲ್ ಪಾತ್ರ ಸೂಪರ್‌ ಆಗಿದೆ” ಎಂದು ಹೇಳಿ ಸಿನಿಮಾಕ್ಕೆ 5ರಲ್ಲಿ 4 ಸ್ಟಾರ್ಸ್‌ ಗಳನ್ನು ನೀಡಿದ್ದಾರೆ.

“ಮೊದಲಾರ್ಧ ಸೂಪರ್‌ ಆಗಿದೆ. ಮೊದಲ 20 ನಿಮಿಷ ಸೂಪರ್‌ ಸ್ಟಾರ್‌ ಹಾಗೂ ಅವರ ಮಾಸ್‌ ಕ್ಷಣಗಳಿವೆ. ಅರ್ಧಗಂಟೆಯ ಬಳಿಕ ಅಪರಾಧದ ತನಿಖೆ ಕಡೆಗೆ ಸಿನಿಮಾ ಸಾಗುತ್ತದೆ. ಆದರೆ ಇಲ್ಲಿ ಚಿತ್ರಕಥೆ ವಿಫಲವಾಗಿದೆ. ಅನಿರುದ್ಧ್‌ ಬಿಜಿಎಂ ಹಾಗೂ ಹಾಡು ಚೆನ್ನಾಗಿದೆ. ಎಮೋಷನ್ಸ್‌ ಗಳು ಕನೆಕ್ಟ್‌ ಆಗುತ್ತವೆ. ದುಶಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಫಾಫಾ ಅವರ ಪಾತ್ರ ಸೂಪರ್ ಫನ್ ಆಗಿದೆ” ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಚಿತ್ರದ ಮೊದಲಾರ್ಧವನ್ನು ಹೋಲಿಸಿದಾಗ, ದ್ವಿತೀಯಾರ್ಧವು ತುಂಬಾ ಚೆನ್ನಾಗಿದೆ. ಈ ಚಿತ್ರದಲ್ಲಿ ರಜಿನಿಗೆ ಹೆಚ್ಚ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ರಾಣಾ ದಗ್ಗುಬಾಟಿ ಈ ಚಿತ್ರದ ವಿಲನ್ ಆಗಿದ್ದು, ಅವರನ್ನು ಒಳಗೊಂಡ ಎಲ್ಲಾ ದೃಶ್ಯಗಳು ದ್ವಿತೀಯಾರ್ಧದಲ್ಲಿ ಬರುತ್ತವೆ.  ಚಿತ್ರದ ದ್ವಿತೀಯಾರ್ಧದಲ್ಲಿ ದೊಡ್ಡ ಹೊಡೆದಾಟದ ದೃಶ್ಯವಿದೆ. ಈ ಚಿತ್ರವು ಶಿಕ್ಷಣ ಮತ್ತು ನೀಟ್ ಮತ್ತು ಬ್ಯಾಕ್ ಎನ್‌ಕೌಂಟರ್ ಕುರಿತಾಗಿದೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.‌

ಒಟ್ಟಿನಲ್ಲಿ ʼವೆಟ್ಟಯ್ಯನ್ʼ ಸಿನಿಮಾಕ್ಕೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಟಿಜೆ ಜ್ಞಾನವೇಲ್‌ ನಿರ್ದೇಶನದ ʼವೆಟ್ಟಯ್ಯನ್ʼ ಸಿನಿಮಾದಲ್ಲಿ ರಜಿನಿಕಾಂತ್, ಅಮಿತಾಬ್ ಬಚ್ಚನ್, ಫಾಹದ್ ಫಾಸಿಲ್, ರಾಣಾ ದಗ್ಗುಬಾಟಿ ಜತೆ ಸಿನಿಮಾದಲ್ಲಿ ಮಂಜು ವಾರಿಯರ್, ಕಿಶೋರ್, ರಿತಿಕಾ ಸಿಂಗ್, ದುಶಾರ ವಿಜಯನ್, ಜಿಎಂ ಸುಂದರ್, ಅಭಿರಾಮಿ, ರೋಹಿಣಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next