Advertisement

ಸಮಾಜವಾದಿ ಹಿರಿಯ ನಾಯಕ, ಮಾಜೀ ಶಾಸಕ ಮುಲಾಯಂ ಸಿಂಗ್ ಯಾದವ್ ನಿಧನ

06:52 PM Oct 05, 2020 | Hari Prasad |

ಲಕ್ನೋ: ಯಾವುದೇ ಒಂದು ಕ್ಷೇತ್ರದಲ್ಲಿ ಒಂದೇ ಹೆಸರಿನ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳಿದ್ದರೆ ಎಂತಹ ಗೊಂದಲ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ ಈ ಪ್ರಕರಣ.

Advertisement

ಉತ್ತರ ಪ್ರದೇಶದ ಮಾಜೀ ಮೇಲ್ಮನೆ ಶಾಸಕ ಮುಲಾಯಂ ಸಿಂಗ್ ಯಾದವ್ ಅವರು ಶನಿವಾರ ರಾತ್ರಿ ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಮುಲಾಯಂ ಸಿಂಗ್ ಯಾದವ್ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೊಳಗಾಗಿದ್ದರು ಹಾಗೂ ಅವರು ಪುರ್ವಾದಲ್ಲಿರುವ ಸ್ವಗ್ರಾಮ ಕಾಕೊರ್ ನಲ್ಲಿ ನಿಧನ ಹೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳನ್ನುದ್ದೇಶಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಆದರೆ, ರಾಷ್ಟ್ರ ಮಟ್ಟದಲ್ಲಿ ಮುಲಾಯಂ ಸಿಂಗ್ ಯಾದವ್ ಎಂದ ತಕ್ಷಣ ನೆನಪಾಗುವುದೇ ಸಮಾಜವಾದಿ ಪಕ್ಷದ ಸಂಸ್ಥಾಪಕ, ಉತ್ತರಪ್ರದೇಶದ ಮಾಜೀ ಮುಖ್ಯಮಂತ್ರಿ, ಮಾಜೀ ಕೇಂದ್ರ ಸಚಿವ ಹಾಗೂ ಸದ್ಯ ಸಂಸದರಾಗಿರುವ ಮುಲಾಯಂ ಸಿಂಗ್ ಯಾದವ್ ಅವರ ಮುಖ.

ಆದರೆ ಶನಿವಾರ ನಿಧನರಾದ ಮುಲಾಯಂ ಸಿಂಗ್ ಯಾದವ್ ಅವರೂ ಸಮಾಜವಾದಿ ಪಕ್ಷಕ್ಕೆ ಸೇರಿದವರೇ ಆಗಿದ್ದರಿಂದ ಮಾಹಿತಿ ಗೊಂದಲ ಉಂಟಾಗಲು ಕಾರಣವಾಯಿತು.

Advertisement

ಅದರಲ್ಲೂ, ಡಿಜಿಟಲ್ ಮಾಹಿತಿ ಕೋಶವಾಗಿರುವ ವಿಕಿಪಿಡಿಯಾ ಸಮಾಜವಾದಿ ಪಕ್ಷದ ಸಂಸ್ಥಾಪಕ ಮತ್ತು ಅಖಿಲೇಶ್ ಯಾದವ್ ಅವರ ತಂದೆಯಾಗಿರುವ ಮುಲಾಯಂ ಸಿಂಗ್ ಯಾದವ್ ಅವರ ಮಾಹಿತಿ ಪುಟದಲ್ಲಿರುವ ನಿಧನ ಸ್ಥಳದಲ್ಲಿ ಅಕ್ಟೋಬರ್ 3 ಎಂದು ನಮೂದಿಸಿ ಎಡವಟ್ಟು ಮಾಡಿಕೊಂಡಿದೆ. ಈ ಲಿಂಕ್ ಅನ್ನು ಕ್ಲಿಕ್ ಮಾಡಿ ವಿಸ್ತೃತ ಮಾಹಿತಿ ಪುಟದ ಒಳಪುಟದಲ್ಲಿ ಸರಿಯಾದ ಮಾಹಿತಿ ಇದೆ. ಆದರೆ, ಮುಲಾಯಂ ಸಿಂಗ್ ಯಾದವ್ ಅವರ ಹೆಸರನ್ನು ಗೂಗಲ್ ಸರ್ಚ್ ಮಾಡಿದ ತಕ್ಷಣ ಕಾಣಿಸಿಕೊಳ್ಳುವ ಅವರ ಮಾಹಿತಿಯಲ್ಲಿ ಅವರ ನಿಧನ ದಿನಾಂಕ ನಮೂದಾಗಿರುವುದು ಮಾತ್ರ ದುರದೃಷ್ಟಕರವಾಗಿದೆ.


ಶನಿವಾರ ನಿಧನ ಹೊಂದಿದ ಮುಲಾಯಂ ಸಿಂಗ್ ಯಾದವ್ ಅವರು ಮಾಜೀ ಮುಖ್ಯಮಂತ್ರಿ ಹಾಗೂ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು.

ಮುಲಾಯಂ ಸಿಂಗ್ ಯಾದವ್ ನಿಧನಕ್ಕೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

1949ರಲ್ಲಿ, ತಮ್ಮ 21ನೇ ವರ್ಷದಲ್ಲೇ ಗ್ರಾಮ ಸರಪಂಚರಾಗಿ ಆಯ್ಕೆಯಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರು ಮುಂದಿನ 15 ವರ್ಷಗಳ ಕಾಲ ವಿಭಾಗೀಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಮತ್ತು ಸತತ 20 ವರ್ಷಗಳ ಕಾಲ ಅವರು ಉತ್ತರಪ್ರದೇಶ ಮೇಲ್ಮನೆಯ ಸದಸ್ಯರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next