Advertisement

ರಣಜಿ: ಬೃಹತ್‌ ಮುನ್ನಡೆಯತ್ತ ದಿಲ್ಲಿ

09:31 AM Dec 19, 2017 | Team Udayavani |

ಪುಣೆ: ಆರಂಭಿಕ ಆಟಗಾರರಾದ ಕುಣಾಲ್‌ ಚಾಂಡೇಲ ಮತ್ತು ಗೌತಮ್‌ ಗಂಭೀರ್‌ ಅವರ ಭರ್ಜರಿ ಶತಕದಿಂದಾಗಿ ದಿಲ್ಲಿ ತಂಡವು ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ ಸೆಮಿಫೈನಲ್‌ ಪಂದ್ಯದಲ್ಲಿ ಬಂಗಾಲ ವಿರುದ್ಧ ಬೃಹತ್‌ ಮುನ್ನಡೆ ಸಾಧಿಸುವತ್ತ ಹೊರಟಿದೆ.

Advertisement

ಬಂಗಾಲದ 286 ರನ್ನಿಗೆ ಉತ್ತರವಾಗಿ ದಿಲ್ಲಿ ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ ಕೇವಲ 3 ವಿಕೆಟ್‌ ಕಳೆದುಕೊಂಡಿದ್ದು 271 ರನ್‌ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ದಿಲ್ಲಿಗೆ ಇನ್ನು 15 ರನ್‌ ಬೇಕಾಗಿದೆ. ಕೈಯಲ್ಲಿ 7 ವಿಕೆಟ್‌ ಉಳಿಸಿಕೊಂಡಿರುವ ದಿಲ್ಲಿ ಬೃಹತ್‌ ಮುನ್ನಡೆ ಸಾಧಿಸುವ ಕಡೆ ಗಮನ ಹರಿಸಲಿದೆ. 

7 ವಿಕೆಟಿಗೆ 269 ರನ್ನುಗಳಿಂದ ದಿನದಾಟ ಆರಂಭಿಸಿದ ಬಂಗಾಲ 17 ರನ್‌ ಗಳಿಸುವಷ್ಟರಲ್ಲಿ ಇನ್ನುಳಿದ ಮೂರು ವಿಕೆಟ್‌ ಕಳೆದುಕೊಂಡು ಆಲೌಟಾಯಿತು. 

ಚಾಂಡೇಲ ಮತ್ತು ಗಂಭೀರ್‌ ಅವರ ಸೊಗಸಾದ ಬ್ಯಾಟಿಂಗ್‌ ದಿನದ ಆಕರ್ಷಣೆಯಾಗಿತ್ತು. ಬಂಗಾಲ ದಾಳಿಯನ್ನು ಒಂದೇ ಸವನೆ ದಂಡಿಸಿದ ಅವರಿಬ್ಬರು 61.3 ಓವರ್‌ ಆಡಿ ಮೊದಲ ವಿಕೆಟಿಗೆ 232 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ದಿಲ್ಲಿ ತಂಡ ಮುನ್ನಡೆ ಸಾಧಿಸುವುದನ್ನು ಖಚಿತಪಡಿಸಿದರು. ವೈಯಕ್ತಿಕವಾಗಿ ಇಬ್ಬರೂ ಶತಕ ದಾಖಲಿಸಿದ ಬಳಿಕ ಬೇರ್ಪಟ್ಟರು. ಚಾಂಡೇಲ ಮೊದಲಿಗರಾಗಿ ಔಟಾದರು. 192 ಎಸೆತ ಎದುರಿಸಿದ ಅವರು 18 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 113 ರನ್‌ ಗಳಿಸಿ ಅಮಿತ್‌ಗೆ ವಿಕೆಟ್‌ ಒಪ್ಪಿಸಿದರು.

ಚಾಂಡೇಲ ಔಟಾದ ಸ್ವಲ್ಪ ಹೊತ್ತಿನಲ್ಲಿ ದುೃವ ಶೋರೆ ಅವರು ದಿಂಡ ಅವರಿಗೆ ವಿಕೆಟ್‌ ಒಪ್ಪಿಸಿದರು. ಗಂಭೀರ್‌ ಆಬಳಿಕ ನಿತೀಶ್‌ ರಾಣ ಜತೆ ಮೂರನೇ ವಿಕೆಟಿಗೆ 24 ರನ್‌ ಸೇರಿಸಿದಾಗ ಗಂಭೀರ್‌ ಔಟಾದರು. 216 ಎಸೆತ ಎದುರಿಸಿದ ಅವರು 21 ಬೌಂಡರಿ ನೆರವಿನಿಂದ 127 ರನ್‌ ಹೊಡೆದು. ಅವರು ಔಟಾಗುತ್ತಲೇ ದಿನದಾಟವನ್ನು ಅಂತ್ಯಗೊಳಿಸಲಾಯಿತು.

Advertisement

ಸಂಕ್ಷಿಪ್ತ ಸ್ಕೋರು: ಬಂಗಾಲ 286; ದಿಲ್ಲಿ 3 ವಿಕೆಟಿಗೆ 271 (ಚಾಂಡೇಲ 113, ಗಂಭೀರ್‌ 127).

Advertisement

Udayavani is now on Telegram. Click here to join our channel and stay updated with the latest news.

Next