Advertisement
ಮೂಲ್ಕಿ ಮೂಲದ ಅವರು ಹಲವು ವರ್ಷಗಳ ಕಾಲ ಮುಂಬಯಿನಲ್ಲಿ ವಾಸವಾಗಿದ್ದರು. ಕನ್ನಡ ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸುವರ್ಣರು ಧರ್ಮಚಕ್ರ, ಸುಳಿ, ಡೊಂಕುಬಾಲದ ನಾಯಕರು, ಕೋರ್ಟ್ ಮಾರ್ಷಲ್, ಉರುಳು ಮತ್ತಿತರ ಜನಪ್ರಿಯ ನಾಟಕ ರಚನೆಮಾಡಿದ ಹೆಗ್ಗಳಿಕೆ ಇವರದ್ದು.
Related Articles
Advertisement
ಸ್ವತಃ ನಟ ನಾಟಕಕಾರನಾಗಿ, ಪ್ರಯೋಗಶೀಲ ನಿರ್ದೇಶಕನಾಗಿ ಮುಂಬಯಿ ರಂಗಭೂಮಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದ ಸುವರ್ಣರು ತಮ್ಮ ಇಳಿವಯಸ್ಸಿನಲ್ಲಿ ಮಂಗಳೂರಿನ ರಂಗಭೂಮಿಗೆ ಲಗ್ಗೆಯಿಟ್ಟು ಅಲ್ಲಿಯೂ ತನ್ನ ಸೃಜನಶೀಲ ಪ್ರತಿಭೆಯ ಸುವರ್ಣ ಛಾಪನ್ನು ಒತ್ತಿದವರು..!!ಮಂಗಳೂರಿನ ಹವ್ಯಾಸಿ ನಟ ನಟಿಯರಿಗೆ ಉರುಳು,ಕೋರ್ಟ್ ಮಾರ್ಷಲ್, ಮಳೆ ನಿಲ್ಲುವ ವರೆಗೆ, ಮುಂತಾದ ನಾಟಕಗಳನ್ನು ನಿರ್ದೇಶಿಸಿ ಸದಭಿರುಚಿಯ ರಂಗ ಕಾಯಕ ಹೇಗಿರಬೇಕು ಎಂದು ನಿರೂಪಿಸಿದವರು.
ತಾನೂ ಬೆಳೆಯುತ್ತ ನೂರಾರು ಹಿರಿಯ ಕಿರಿಯ ಕಲಾವಿದರನ್ನೂ ಬೆಳೆಸಿದ ಅನನ್ಯ ರಂಗ ತಪಸ್ವಿ ನಮ್ಮ ಸದಾನಂದ ಸುವರ್ಣ.ಮುಂಬಯಿ ಮತ್ತು ಮಂಗಳೂರಿನ ಹವ್ಯಾಸಿರಂಗಭೂಮಿಗೆ ಸುವರ್ಣರ ಕೊಡುಗೆ ಅನನ್ಯವಾದುದು.